ಗಿರೀಶ್ ಮಟ್ಟಣ್ಣನವರ್ ಚಿತ್ರಕಥೆ, ಸಮೀರ್ ಸ್ಕ್ರೀನ್‌ಪ್ಲೇಗೆ ಬಲಿಯಾದ್ರಾ ಸುಜಾತ ಭಟ್?

Public TV
1 Min Read

ಮಂಗಳೂರು/ಬೆಂಗಳೂರು: ಅನನ್ಯಾ ಭಟ್ ಕೇಸ್‌ಲ್ಲಿ ಕಾನೂನು ಸಮರಕ್ಕಿಳಿದಿದ್ದ ಸುಜಾತ ಭಟ್ (Sujatha Bhat) ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದ್ರ ಹಿಂದೆ ಗಿರೀಶ್ ಮಟ್ಟಣ್ಣನವರ್, ಸಮೀರ್ ಪ್ಲ್ಯಾನ್‌ ಮಾಡಿ ಸುಜಾತ ಭಟ್‌ನ್ನು ಬಲಿ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಚಾನೆಲ್‌ವೊಂದರಲ್ಲಿ ಮಾತನಾಡಿದ್ದ ಸುಜಾತ ಭಟ್, ನನಗೆ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಇನ್ನಿತರರು ಸೇರಿ ನನಗೆ ಸುಳ್ಳು ಹೇಳುವಂತೆ ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳು ಅಂತ ಅವರೆಲ್ಲಾ ಹೇಳಿದ್ದರು. ಅದಕ್ಕೆ ನಾನು ಹೇಳಿಬಿಟ್ಟೆ. ಅನನ್ಯಾ ಭಟ್ ಕೇಸ್ ಸುಳ್ಳು ಎಂದು ಹೇಳಿದ್ದರು.

ಹೀಗಾಗಿ ಹಣದ ಆಸೆಗಾಗಿ ಸುಜಾತ್ ಭಟ್ ಸುಳ್ಳು ಹೇಳಿದ್ದಾರಾ? ಆಸ್ತಿ ಹುಚ್ಚಿಗೆ ಧರ್ಮಸ್ಥಳದ ಮೇಲೆ ಆರೋಪ ಮಾಡಿದ್ದಾರಾ? ಇದೆಲ್ಲದರ ಹಿಂದೆ ಗಿರೀಶ್ ಮಟ್ಟಣ್ಣನವರ್, ಸಮೀರ್ ಸೇರಿ ಹಲವರು ಪ್ಲ್ಯಾನ್‌ ಮಾಡಿಕೊಂಡು ಸುಜಾತ ಭಟ್‌ನ್ನು ಮುಂದೆ ತಳ್ಳಿದ್ರಾ? ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಈ ಮೂಲಕ ಸಮಾಜದ ಕಣ್ಣಿಗೆ ಮಣ್ಣೇರೆಚೋ ಪ್ರಯತ್ನ ಮಾಡಿದ್ರಾ? ಎನ್ನುವ ಹಾಗಾಗಿದೆ.

Share This Article