ಅನಾರೋಗ್ಯ ಕಾರಣಕ್ಕೆ ಶನಿವಾರ ವಿಚಾರಣೆಗೆ ಬರಲ್ಲ, ಆ.29ಕ್ಕೆ ಹಾಜರಾಗ್ತೀನಿ: ಎಸ್‌ಐಟಿಗೆ ಸುಜಾತಾ ಭಟ್‌ ಪತ್ರ

By
1 Min Read

ಮಂಗಳೂರು: ಅನನ್ಯಾ ಭಟ್‌ ನಾಪತ್ತೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ಸುಜಾತಾ ಭಟ್‌ ಪ್ರತಿಕ್ರಿಯೆ ನೀಡಿದ್ದಾರೆ. ಅನಾರೋಗ್ಯ ಸಮಸ್ಯೆ ಕಾರಣಕ್ಕೆ ಆ.29ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

2003ರಲ್ಲಿ ಧರ್ಮಸ್ಥಳಕ್ಕೆ ಹೋಗಿ ಕಾಣೆಯಾಗಿದ್ದಾಳೆ. ನನ್ನ ಮಗಳ ವಿಧಿವತ್ತಾದ ಅಂತ್ಯಸಂಸ್ಕಾರ ಮಾಡಲು ಮೃತದೇಹದ ಅಸ್ಥಿಪಂಜರ ಹುಡುಕಿ ಕೊಡಲು ವಿನಂತಿ ಎಂಬಿತ್ಯಾದಿಯಾಗಿ ನೀಡಿದ ದೂರು ಅರ್ಜಿಯು ಎಸ್‌ಐಟಿಗೆ ವರ್ಗಾವಣೆ ಆಗಿದೆ. ಅರ್ಜಿ ವಿಚಾರಣೆಗೆ ಹೆಚ್ಚಿನ ಮಾಹಿತಿಯು ಅಗತ್ಯ ಇರುವುದರಿಂದ ತಾವು ಶನಿವಾರ ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ನೋಟಿಸ್‌ ನೀಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಸುಜಾತಾ ಭಟ್‌, ಅನಾರೋಗ್ಯದ ಸಮಸ್ಯೆ ಕಾರಣ ನಾನು ಶನಿವಾರ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆ.29 ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ. ಅದಕ್ಕೆ ಅನುಮತಿ ನೀಡುವಂತೆ ಎಂದು ಎಸ್‌ಐಟಿಗೆ ಮನವಿ ಮಾಡಿಕೊಂಡಿದ್ದಾರೆ.

Share This Article