ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್

Public TV
3 Min Read

– ತನಿಖೆ ಮಾಡಿ ಅಂತ ಎಲ್ಲೂ ಹೇಳಿಲ್ಲ; ಮಗಳ ಅಸ್ಥಿ ಸಿಕ್ಕರೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡ್ತೀನಿ
– ಅನಾಮಿಕ ವ್ಯಕ್ತಿ ಧನ್ಯವಾದ ಎಂದ ಸುಜಾತಾ ಭಟ್

ಬೆಂಗಳೂರು: ನನ್ನ ಮಗಳು ಅನನ್ಯಾ ಭಟ್ (Ananya Bhat) ಇದ್ದಿದ್ದು ಸತ್ಯ. ಅನನ್ಯಾ ಬಗ್ಗೆ ತನಿಖೆ ಮಾಡಿ ಅಂತ ಎಲ್ಲೂ ಹೇಳಿಲ್ಲ. ಮಗಳ ಅಸ್ಥಿ ಸಿಕ್ಕರೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡ್ತೀನಿ ಎಂದು ಸುಜಾತಾ ಭಟ್ (Sujatha Bhat) ಹೇಳಿದರು.

‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಸುಜಾತಾ ಭಟ್, ನನ್ನ ಮಗಳು ಧರ್ಮಸ್ಥಳದಲ್ಲಿ (Dharmasthala) ಕಾಣೆಯಾಗಿದ್ದಾಳೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯ್ತು. ದೂರು ತೆಗೆದುಕೊಂಡಿಲ್ಲ. ನಿಮ್ಮ ಮಗಳು ಎಲ್ಲಿ ಹೋಗಿದ್ದಾಳೆ ನೋಡಿ, ಹುಡುಕಾಟ ನಡೆಸೋಕೆ ಆಗಲ್ಲ ಅಂದ್ರು. ಈಗ ಅನಾಮಿಕ ಕೋರ್ಟ್‌ಗೆ ಹೋಗಿದ್ದನ್ನ ನಾನು ಟಿವಿಯಲ್ಲಿ ನೋಡಿದೆ. ನನ್ನ ಮಗಳ ಮೃತದೇಹ ಸಿಕ್ಕಿದ್ರೆ ಡಿಎನ್‌ಎ ಟೆಸ್ಟ್ ಮಾಡಿಸಿ ಕೊಡಿ ಅಂತಾ ಕೇಳಿದ್ದೇನೆ. ನಾನು ತನಿಖೆ ಮಾಡಿ ಅಂತಾ ಹೇಳಿಲ್ಲ. ಅನನ್ಯ ಭಟ್ ಇದ್ದಿದ್ದು ಸತ್ಯ. ಅಸ್ತಿ ಸಿಕ್ಕಿದ್ರೆ ಸನಾತನ ಹಿಂದೂ ಸಂಪ್ರಾದಯಂತೆ ಮಾಡ್ತೀನಿ ಅಂತಾ ಹೋಗಿರೋದು. ನಾನು ತನಿಖೆ ಮಾಡಿ ಅಂತಾ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರಪಂಚದಲ್ಲಿ ಒಂದೇ ರೀತಿ 7 ಜನ ಇರ್ತಾರೆ, ಫೋಟೋಗಳಿಗೆ ಸಾಮ್ಯತೆ ಇರಬಹುದು: ಸುಜಾತ ಭಟ್‌

ಎಂಬಿಬಿಎಸ್ ಓದಿಲ್ಲ ಅನ್ನೋ ರೆಕಾರ್ಡನ್ನೇ ಕಾಣೆ ಮಾಡಿಸಿದ್ದಾರೆ. ಸುರತ್ಕಲ್‌ನಲ್ಲಿರುವ ಮನೆಯನ್ನ ಸುಟ್ಟು ಹಾಕಿದ್ದಾರೆ. ಅರವಿಂದ್, ವಿಮಲಾ ನನ್ನ ಮಗಳನ್ನ ಸಾಕಿದ್ರು. 1983 ರಲ್ಲಿ ನನ್ನ ಮಗಳು ಜನನವಾಗಿದ್ದು. ಅನಿಲ್ ಭಟ್ ಎನ್ನುವವರನ್ನ ಮನೆಯವರಿಗೆ ಗೊತ್ತಿಲ್ಲದಂತೆ ಮದುವೆಯಾಗಿದ್ದೆ. ಇದರಿಂದ ನಮ್ಮ ಕುಟುಂಬದಿಂದ ಬೆದರಿಕೆ ಇತ್ತು ಎಂದು ತಿಳಿಸಿದರು.

ಒಂದು ಹುಡುಗಿಯಂತೆ 7 ಜನ ಇರುತ್ತಾರೆ. ಅವರು ಯಾರು ಅಂತಾನೆ ಗೊತ್ತಿಲ್ಲ. ಯಾವ ಅಲ್ಬಂ ಮನೆಯಲ್ಲಿ ಇಲ್ಲ. ನನ್ನ ಬಳಿ ಇದ್ದಿದ್ದು ಪಾಸ್‌ಪೋರ್ಟ್ ಫೋಟೊ. ಅಡ್ಮಿಷನ್ ಮಾಡಿಸಲು ಆ ಫೋಟೊ ಇಟ್ಟುಕೊಂಡಿದ್ದೆ. 2003ರಲ್ಲಿ ನನ್ನ ಮಗಳು ಕಾಣೆಯಾಗಿದ್ದಳು. ನನ್ನ ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯ್ತು. ದೂರು ತೆಗೆದುಕೊಂಡಿಲ್ಲ. ಧರ್ಮಸ್ಥಳ ವ್ಯಕ್ತಿಯೊಬ್ಬರ ಬಳಿ ಕೇಳಿದಾಗ, ನಿನ್ನ ಮಗಳನ್ನ ಹುಡುಕಿಕೊ ಅಂತಾ ಹೇಳಿದ್ರು ಎಂದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್‌!

ಕೆಲವರು ನಿಮ್ಮ ಮಗಳನ್ನ ಇಲ್ಲಿ ನೋಡಿದ್ದೀನಿ ಅಂತಾ ನನ್ನ ಕರೆದುಕೊಂಡು ಹೋದ್ರು. ಕಣ್ಣಿಗೆ ಬಟ್ಟೆ ಕಟ್ಟಿದ್ರು. ರಾತ್ರಿ ಎಲ್ಲಾ ಕೂಡಿ ಹಾಕಿದ್ರು. ರೂಮಿನಿಂಗ ಹೊರಗೆ ಕರೆದುಕೊಂಡ ಬಂದ್ರು. ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿದ್ರು. ನನ್ನ ಮಗಳನ್ನ ತೋರಿಸಿ ಅಂತಾ ಕೇಳಿದೆ. ಮರಿಯಾದೆಯಾಗಿ ಇಲ್ಲಿಂದ ಹೋಗಿ ಅಂತಾ ಹೇಳಿದ್ರು. ಮತ್ತೊಬ್ಬ ನನ್ನ ತಲೆಗೆ ಹೊಡೆದನು. ಆಗ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಆ ಆನಾಮಿಕ ವ್ಯಕ್ತಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕಾಂಟ್ರ್ಯಾಕ್ಟ್‌ ಬೇಸಿಕ್‌ನಲ್ಲಿ ಕೆಲಸ ಮಾಡೋಳು. ನನ್ನ ಫ್ಯಾಮಿಲಿಯಲ್ಲಿ ಯಾರೂ ನನ್ನ ಓದಿಸಲಿಲ್ಲ. ನನ್ನ ಫ್ಯಾಮಿಲಿಯಿಂದ ಸಾಕಷ್ಟು ಟಾರ್ಚರ್ ಅನುಭಿಸಿದ್ದೇನೆ. ಮೂರನೇ ಅಕ್ಕನ ಮದುವೆ ಬಳಿಕ ನಾನು ಮನೆ ಬಿಟ್ಟು ಬಂದೆ ಎಂದು ವಿವರಿಸಿದರು. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್‌

ವಸಂತಿ ಯಾರೆಂದು ಗೊತ್ತಿಲ್ಲ. ಅವರನ್ನ ನೋಡಿಲ್ಲ. ಅವರ ಅಣ್ಣನೂ ಗೊತ್ತಿಲ್ಲ. ನನಗೂ ಅವರಿಗೂ ಸಂಬಂಧವಿಲ್ಲ. ಕೆಂಗೇರಿಯಲ್ಲಿ ರಂಗಪ್ರಸಾದ್ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದೆ. ಅವರ ಮಗನ ಬಗ್ಗೆ ಗೊತ್ತಿಲ್ಲ, ಅವಳು ಸತ್ತಿರುವ ಬಗ್ಗೆ ಗೊತ್ತಿಲ್ಲ. ವಸಂತಿ ಅವರ ಯಾವ ಅಲ್ಬಂ ಕೂಡ ಇಲ್ಲ ಎಂದರು.

Share This Article