ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್

Public TV
3 Min Read

– ಸಿಸಿಟಿವಿ ಫೂಟೇಜ್, ಫೋನ್ ಕಾಲ್ ಆಡಿಯೋ ರೆಕಾರ್ಡ್ ಎಲ್ಲಾ ಸಾಕ್ಷಿ ಇದೆ

ಬೆಂಗಳೂರು: ಚೈತ್ರಾ (Chaitra Kundapur) ವಿರುದ್ಧ ಸಿಸಿಟಿವಿ ಪೂಟೇಜ್, ಫೋನ್ ಸಂಭಾಷಣೆ ಆಡಿಯೋ ರೆಕಾರ್ಡ್ ಎಲ್ಲಾ ಸಾಕ್ಷಿಗಳೂ ಇದೆ. ಪ್ರಕರಣ ಹೊರಗೆ ಬಂದರೆ ಸರಿಯಿರಲ್ಲ, ನನಗೆ ಅಂಡರ್ ವರ್ಲ್ಡ್ ಪರಿಚಯವಿದೆ ಎಂದು ಬೆದರಿಕೆ ಹಾಕಿದ್ದು ಮಾತ್ರವಲ್ಲದೇ ಕಚೇರಿಗೆ ಬಂದು ಸೂಸೈಡ್ ಮಾಡಿಕೊಳ್ಳೋ ಬೆದರಿಕೆ ಕೂಡಾ ಹಾಕಿದ್ರು ಎಂದು ದೂರುದಾರ ಗೋವಿಂದ ಬಾಬು ಪೂಜಾರಿ (Govinda Babu Poojari) ಆಪ್ತ ರಕ್ಷಿತ್ ಶೆಟ್ಟಿ (Rakshit Shetty) ತಿಳಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿರುವ ಅವರು, ಚೈತ್ರಾ ಬೆದರಿಕೆ ಹಾಕಿರೋದು, ಬ್ಲಾಕ್ ಮೇಲ್ ಮಾಡಿರೋದು, ತಪ್ಪೊಪ್ಪಿಗೆ ಮಾಡಿಕೊಂಡಿದ್ದು ಎಲ್ಲವೂ ಆಡಿಯೋ ರೆಕಾರ್ಡ್ ಹಾಗೂ ಸಿಸಿಟಿವಿ ದಾಖಲೆಗಳು ಇವೆ. ಚೈತ್ರಾ ಈ ವಿಚಾರದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪ್ರಕರಣ ಏನಾದ್ರೂ ಹೊರಗೆ ಬಂದರೆ ಸರಿಯಿರಲ್ಲ, ನಂಗೆ ಅಂಡರ್ ವರ್ಲ್ಡ್ ನಲ್ಲಿಯೂ ಪರಿಚಯ ಇದ್ದಾರೆ ಎಂದು ಆರಂಭದಲ್ಲಿ ಗೋವಿಂದ ಬಾಬು ಪೂಜಾರಿಗೆ ಬೆದರಿಕೆ ಹಾಕಿದ್ದರು. ಅದಾದ ಬಳಿಕ ಕಚೇರಿಗೆ ಬಂದು ಸೂಸೈಡ್ ಮಾಡ್ತೀನಿ ಅಂತ ಕಣ್ಣೀರು ಹಾಕಿದ್ರು ಎಂದು ತಿಳಿಸಿದ್ದಾರೆ.

ಚೈತ್ರಾ ಹಾಗೂ ಗೋವಿಂದ ಬಾಬು ಪೂಜಾರಿ ಅವರ ನಡುವಿನ ಮಾತುಕತೆ, ಚೈತ್ರಾ ಆತ್ಮಹತ್ಯೆ ಬೆದರಿಕೆ ಎಲ್ಲವನ್ನು ನಾನು ಖುದ್ದು ಆಡಿಯೋ ಕೇಳಿಸಿಕೊಂಡಿದ್ದೇನೆ. ಅರ್ಧ ದುಡ್ಡು ಅಂದ್ರೆ 1 ಕೋಟಿ 70 ಲಕ್ಷ ರೂ. ವಾಪಸ್ ಕೊಡ್ತೀನಿ ಅಂತ ಹೇಳಿ ಮೋಸ ಮಾಡಿದ್ದು ನಿಜ ಅಂತ ಕಚೇರಿಗೆ ಬಂದು ಕಣ್ಣೀರು ಹಾಕಿದ್ದರು. ಇದೆಲ್ಲದರ ಸಿಸಿ ಟಿವಿ ಫೂಟೇಜ್ ಆಡಿಯೋ ರೆಕಾರ್ಡ್ ಇದೆ. ಚೈತ್ರಾ ಬೇರೆಯವರಲ್ಲ. ಅದರೆ ಹಿಂದುತ್ವ, ಹಿಂದೂ ಎಂದು ಹೀಗೆಲ್ಲಾ ಯಾಮಾರಿಸ್ತಾರೆ ಎಂದರೆ ಖಂಡಿತಾ ತಪ್ಪು ಎಂದು ಹೇಳಿಕೆ ನೀಡಿದರು. ಈ ಬಗ್ಗೆ ರಕ್ಷಿತ್ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ಬೈಂದೂರು ರಾಜಕೀಯದಲ್ಲಿ ನಾವೊಂದಿಷ್ಟು ಜನ ಸಕ್ರಿಯರಾಗಿರುವುದರಿಂದ ನನಗೆ ಟಿಕೆಟ್‌ಗಾಗಿ ಹಣ ಪಡೆದ ಕೇಸ್‌ನ ಬಗ್ಗೆ ಒಂದಿಷ್ಟು ನಿಖರವಾದ ಮಾಹಿತಿ ಗೊತ್ತಿದೆ. ಇಷ್ಟೆಲ್ಲಾ ಮುಗಿದು ಪೋಲಿಸರ ಕಸ್ಟಡಿಯಲ್ಲಿರುವ ತಂಡ ಇನ್ನು ನಮ್ಮದೇನು ತಪ್ಪಿಲ್ಲ. ಇಂದಿರಾ ಕ್ಯಾಂಟೀನ್ ಹಣ ಬಾಕಿಯಿರುವುದರಿಂದ ಇದೆಲ್ಲಾ, ಸ್ವಾಮೀಜಿ ಸಿಗಲಿ ಗೊತ್ತಾಗುತ್ತೆ ಎಂದಿದ್ದಾರೆ.

ಅಸಲಿಗೆ ಮೂರುವರೆ ಕೋಟಿ ನೀಡಿದ್ದು ಚೈತ್ರಾ ಆ್ಯಂಡ್ ಕಂಪನಿಗೆ. ಒಂದೂವರೆ ಕೋಟಿ ನೀಡಿದ್ದು ಸ್ವಾಮಿಗಳಿಗೆ, ಒಟ್ಟು 5 ಕೋಟಿಗಳು. ದುಡ್ಡಿನ ವಿಚಾರದಲ್ಲಿ ಸ್ವಾಮೀಜಿ ಸಿಕ್ಕಿಯೇ ಗೊತ್ತಾಗಬೇಕಾದ ವಿಚಾರಗಳಿಲ್ಲ. ಎಲ್ಲಾ ನಡೆದು ಟಿಕೆಟ್ ಸಿಗದೆ ಇದ್ದಾಗ ಸ್ವತಃ ತನಿಖೆ ಇಳಿದ ಗೋವಿಂದ ಬಾಬು ಪೂಜಾರಿಯವರಿಗೆ ಎಲ್ಲರೂ ಸಿಗುತ್ತಾರೆ. ಆಗ ಆಫೀಸಿನಲ್ಲಿ ಕೂರಿಸಿ ವಿಚಾರಣೆ ನಡೆಸಿದಾಗ ಅವರು ಹೇಳಿದ ಮಾತು ನಾವು ಹಣವನ್ನೆಲ್ಲಾ ವಿಶ್ವನಾಥ ಜೀಗೆ ಕೊಟ್ಟಿದ್ದೇವೆ. ಅವರು ತೀರಿಕೊಂಡರು ಎಂದು. ಇದನ್ನೂ ಓದಿ: ಚೈತ್ರಾ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್ ಬಿಲ್‌ಗೂ ಸಂಬಂಧ ಇಲ್ಲ: ಗೋವಿಂದ ಬಾಬು

ಕೊನೆಗೆ ವಿಶ್ವನಾಥ್ ಜೀ ಪಾತ್ರ ಮಾಡಿದವನನ್ನು ಎಳೆದು ತಂದಾಗ ಇದೇ ತಂಡ ಗೋವಿಂದ ಬಾಬು ಪೂಜಾರಿಯವರ ಆಫೀಸ್‌ನಲ್ಲಿ ವಿಷ ಕುಡಿಯುವ ಪ್ರಹಸನ ಬೇರೆ ಮಾಡಿತ್ತು. ಕೊನೆಗೆ ಸ್ವಲ್ಪ ದಿನದ ನಂತರ ಹಣ ವಾಪಸ್ ಕೊಡುವುದಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿತ್ತು. ಇದೆಲ್ಲದರ ಬಗ್ಗೆ ಸಿಸಿಟಿವಿ ಫೂಟೇಜ್‌ಗಳಿವೆ, ಪೋನ್ ಸಂಭಾಷಣೆಗಳ ರೆಕಾರ್ಡ್‌ಗಳಿವೆ. ಇಷ್ಟೆಲ್ಲಾ ಇದ್ದರೂ ಆಟ ಆಡುವ ಈಕೆ ಮತ್ತು ತಂಡ, ಜೊತೆಗೆ ಆಕೆಯದೆ ಸರಿ ಎನ್ನುವ ಕೆಲವರು. ಡಿಫೆಂಡ್ ಮಾಡಿಕೊಳ್ಳೋಣ ಎಂದು ರಕ್ಷಿತ್ ಬರೆದಿದ್ದಾರೆ. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್