ಸರ್ವೆ ವಿರೋಧಿಸಿ ರೈತ ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ

Public TV
1 Min Read

ಬಾಗಲಕೋಟೆ: ಕಂದಾಯ ಇಲಾಖೆ ಹಾಗೂ ಬಿಡಿಡಿಎ ಅಧಿಕಾರಿಗಳ ಸರ್ವೆ ವಿರೋಧಿಸಿ ರೈತ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಮುಚಖಂಡಿ ತಾಂಡಾದಲ್ಲಿ ನಡೆದಿದೆ.

ಬಾಗಲಕೋಟೆ ತಾಲೂಕಿನ ಮುಚಖಂಡಿ ಪಾಂಡಪ್ಪ ಚಾಹಾಣ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಕುಟುಂಬ. ಕುಟುಂಬದ ಆನಂದ ಹಾಗೂ ಬಾಬು ಎಂಬವರಿಂದ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾರೆ. ಆಲಮಟ್ಟಿ ಜಲಾಶಯದ 524ರ ಎತ್ತರಕ್ಕನುಗುಣವಾಗಿ ಅಕ್ರಮವಾಗಿ ಭೂಮಿ ಮುಳಗಡೆಯಾಗಿದ್ದು, ಬಾಗಲಕೋಟೆ ಉಪವಿಭಾಗಾಧಿಕಾರಿಗಳು ಹಾಗೂ ತಂಡ ಜಮೀನು ಸರ್ವೆ ಮಾಡಲು ಬಂದಿದ್ದರು. ಇದನ್ನೂ ಓದಿ: ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು – ಮಹಿಳೆ ಸಾವು

ಈ ಹಿಂದೆ ರೈತ ಕುಟುಂಬವು ಭೂಸ್ವಾದೀನ ಪ್ರಕ್ರಿಯೆಗೆ ಸ್ಟೇ ತರಲು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದು, ಆದರೆ ಸ್ಟೇ ರದ್ದಾಗಿತ್ತು. ಈ ಹಿನ್ನೆಲೆ ಅಧಿಕಾರಿಗಳು ಸರ್ವೆಗೆ ಬಂದಿದ್ದರು. ಪಾಂಡಪ್ಪ ಅವರ 5 ಎಕರೆ ಗುಂಟೆ ಜಮೀನು ಮುಳುಗಡೆ ವ್ಯಾಪ್ತಿಗೆ ಬರಲಿದ್ದು, ಜಮೀನು ಕೊಡುವುದಕ್ಕೆ ರೈತ ಕುಟುಂಬವು ವಿರೋಧ ವ್ಯಕ್ತಪಡಿಸಿದೆ. ಇದನ್ನೂ ಓದಿ: ಬಡ್ಡಿ ಹಾವಳಿಗೆ ಬೆಂದು ಹೋದ ಶಿಕ್ಷಕಿಯ ಕುಟುಂಬ

ಘಟನೆ ಕುರಿತು ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *