ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಡ್ರೋನ್‌ ದಾಳಿ

1 Min Read

ಟೆಹ್ರಾನ್: ಇರಾಕ್‌ನಲ್ಲಿರುವ (Iraq) ಅಮೆರಿಕದ ಸೇನಾ ನೆಲೆಯ (US Military Base) ಮೇಲೆ ಆತ್ಮಹತ್ಯಾ ಡ್ರೋನ್‌ಗಳು ದಾಳಿ ಮಾಡಿವೆ ಎಂದು ಇರಾನ್‌ನ (Iran) ರಾಜ್ಯ ಮಾಧ್ಯಮ ಪ್ರೆಸ್ ಟಿವಿ ಗುರುವಾರ ವರದಿ ಮಾಡಿದೆ.‌ ಆದರೆ ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯಲ್ಲಿ ಸ್ಫೋಟಗಳು ವರದಿಯಾಗಿವೆ.

ಉತ್ತರ ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಆತ್ಮಹತ್ಯಾ ಡ್ರೋನ್‌ಗಳು ದಾಳಿ ಮಾಡಿವೆ ಎಂದು ವರದಿಯಾಗಿದೆ, ಇದರಿಂದಾಗಿ ಎರ್ಬಿಲ್‌ನಲ್ಲಿ ಅನೇಕ ಸ್ಫೋಟಗಳು ಸಂಭವಿಸಿವೆ ಎಂದು ಪ್ರೆಸ್‌ ಟಿವಿ ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಇರಾನ್‌ನ ಸೌತ್‌ ಪಾರ್ಸ್‌ ಮೇಲೆ ಇನ್ಮುಂದೆ ದಾಳಿ ನಡೆಯಲ್ಲ, ಇಸ್ರೇಲ್‌ ದಾಳಿ ಬಗ್ಗೆ ಗೊತ್ತಿಲ್ಲ: ಟ್ರಂಪ್‌

ಏತನ್ಮಧ್ಯೆ, ಇರಾಕ್‌ನ ಅರೆಸೈನಿಕ ನೆಲೆಯ ಮೇಲೆ ನಡೆದ ವಾಯುದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಲ್ ಜಜೀರಾ ಬ್ರೇಕಿಂಗ್ ತಿಳಿಸಿದೆ.

ಇರಾನ್‌ನಿಂದ ದೇಶದ ಕಡೆಗೆ ಕ್ಷಿಪಣಿಗಳನ್ನು ಹಾರಿಸಲಾಗಿದೆ. ಬೆದರಿಕೆಯನ್ನು ತಡೆಯಲು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೇಲಿ ರಕ್ಷಣಾ ಪಡೆಗಳು ಹೇಳಿಕೊಂಡಿವೆ.

ಪಶ್ಚಿಮ ಏಷ್ಯಾ ಮತ್ತು ಗಲ್ಫ್‌ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಯುನೈಟೆಡ್ ಕಿಂಗ್‌ಡಮ್‌ನ ಮಾರಿಟೈಮ್ ಟ್ರೇಡ್ ಆಪರೇಷನ್ಸ್ (ಯುಕೆಎಂಟಿಒ) ಕೇಂದ್ರವು ಯುಎಇಯ ಖವರ್ ಫಕ್ಕನ್‌ನಿಂದ 11 ನಾಟಿಕಲ್ ಮೈಲಿ ಪೂರ್ವಕ್ಕೆ ಘಟನೆಯ ವರದಿಯನ್ನು ಸ್ವೀಕರಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ಕತಾರ್‌ನ ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಸ್ಥಾವರದ ಮೇಲೆ ಇರಾನ್‌ ಕ್ಷಿಪಣಿ ದಾಳಿ

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮೂರನೇ ವಾರವೂ ಮುಂದುವರಿದಿದ್ದು, ದಾಳಿಗಳು ಮತ್ತಷ್ಟು ತೀವ್ರಗೊಂಡಿವೆ. ಬುಧವಾರ ರಾತ್ರಿ (ಸ್ಥಳೀಯ ಸಮಯ) ಇರಾನಿಯನ್ನರ ಸೌತ್ ಪಾರ್ಸ್ ಗ್ಯಾಸ್ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಇದಕ್ಕೆ ಕತಾರ್‌ನ ಎಲ್‌ಎನ್‌ಜಿ ಸ್ಥಾವರ ಟಾರ್ಗೆಟ್‌ ಮಾಡಿ ಇರಾನ್‌ ಹೊಡೆದಿದೆ.

Share This Article