ಸುಹಾಸ್‌ಗೆ ಆತ್ಮರಕ್ಷಣೆಗೆ ಒಂದು ದೊಣ್ಣೆಯನ್ನೂ ಇಟ್ಟುಕೊಳ್ಳಲು ಪೊಲೀಸರು ಅವಕಾಶ ನೀಡಲಿಲ್ಲ: ಹರೀಶ್ ಪೂಂಜಾ

Public TV
1 Min Read

– ಪೊಲೀಸ್ ಇಲಾಖೆಯಲ್ಲಿ ಮುಸಲ್ಮಾನ್ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ: ಬಿಜೆಪಿ ಶಾಸಕ
– ಇದು ಪೊಲೀಸ್ ಇಲಾಖೆ ವೈಫಲ್ಯ ಎಂದು ಆರೋಪ

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಇದೆ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಅಸಮಾಧಾನ ಹೊರಹಾಕಿದರು.

ಸುಹಾಸ್ ಶೆಟ್ಟಿ ಮೇಲೆ ದಾಳಿಯಾಗುತ್ತೆ ಅನ್ನೋ ಮಾಹಿತಿ ಪೊಲೀಸ್ ಇಲಾಖೆಗೆ ಮೊದಲೇ ಇತ್ತು. ಸುಹಾಸ್ ಶೆಟ್ಟಿ ಆತ್ಮರಕ್ಷಣೆಗೂ ಪೊಲೀಸರು ಯಾವುದೇ ಆಯುಧಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡಲಿಲ್ಲ. ಆತನ ಬಳಿ ಯಾವುದೇ ಆಯುಧವಿಲ್ಲ ಅನ್ನೋ ವಿಚಾರ ಹಂತಕರಿಗೆ ಗೊತ್ತಾಗಿದ್ದು ಹೇಗೆ? ಈ ಮಾಹಿತಿ ಸೋರಿಕೆಯಾಗಿದ್ದು ಯಾರಿಂದ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಾಶ್ಮೀರ ಪರಿಸ್ಥಿತಿ ನಿರ್ಮಾಣ ಮಾಡಲು ಹೊರಟಂತೆ ಕಾಣ್ತಿದೆ: ಬಿವೈವಿ ಕಿಡಿ

ಪೊಲೀಸ್ ಇಲಾಖೆಯಲ್ಲಿ ಮುಸಲ್ಮಾನ್ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾವುದೇ ಮಾರಾಕಸ್ತ್ರ ಇಲ್ಲ ಅನ್ನೋ ಮಾಹಿತಿ ಪೊಲೀಸ್ ಇಲಾಖೆಗೆ ಗೊತ್ತಿತ್ತು. 6 ಜನ ಇದ್ದಾಗಲೇ ದಾಳಿ ಮಾಡುತ್ತಾರೆ ಎಂದಾಗ ಮಾಹಿತಿ ಕೊಟ್ಟವರು ಯಾರು? ಇದು ಪೊಲೀಸ್ ಇಲಾಖೆಯ ವೈಫಲ್ಯ. ಮಾಹಿತಿ ಸೋರಿಕೆಯಾಗಿ ಈ ರೀತಿಯ ಹತ್ಯೆಯಾಗಿದೆ. ಇಲಾಖೆಯ ಒಳಗಿನಿಂದಲೇ ಮಾಹಿತಿ ಹೋಗಿದೆ ಎಂದು ಆರೋಪಿಸಿದರು.

ಆತ್ಮರಕ್ಷಣೆಗೆ ಒಂದು ದೊಣ್ಣೆಯನ್ನೂ ಜೊತೆಗಿಟ್ಟುಕೊಳ್ಳಲು ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸ್ ಇಲಾಖೆ ರಕ್ಷಣೆ ಕೊಡಬೇಕಿತ್ತು. ವಾಹನ ತಪಾಸಣೆ ಮಾಡಿ ಆತ್ಮರಕ್ಷಣೆಗೂ ವ್ಯವಸ್ಥೆ ಇಲ್ಲದ ಹಾಗೆ ನೋಡಿಕೊಂಡವರು ಯಾರು? ನನಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಈ ಪ್ರಕರಣದ ತನಿಖೆಯನ್ನ ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್‌ ಹತ್ಯೆ ಖಂಡಿಸಿ ಇಂದು ದ.ಕನ್ನಡ ಜಿಲ್ಲೆ ಬಂದ್‌ಗೆ ಕರೆ

Share This Article