Kalaburagi| ಸೂಫಿ ಸಂತರೆಂದೇ ಖ್ಯಾತರಾಗಿದ್ದ ಡಾ ಸೈಯದ್ ಶಹಾ ವಿಧಿವಶ

Public TV
1 Min Read

ಕಲಬುರಗಿ: ಸೂಫಿ ಸಂತರೆಂದೇ ಖ್ಯಾತಿ ಪಡೆದಿದ್ದ ಕೆಬಿಎನ್ ದರ್ಗಾದ ಪೀಠಾಧಿಪತಿ ಡಾ.ಸೈಯದ್ ಶಹಾ ಖುಸ್ರೋ ಹುಸೇನಿ (79) ಅನಾರೋಗ್ಯದಿಂದ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ.

ಸೈಯದ್ ಶಹಾ (Dr. Syed Shah Khusro Hussaini) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬುಧವಾರ ರಾತ್ರಿ ಕಲಬುರಗಿಯ (Kalaburagi) ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: Hubballi| ಜನವಸತಿ ಪ್ರದೇಶದಲ್ಲಿ ಬಾರ್ ಆರಂಭ- ಸ್ಥಳೀಯರಿಂದ ತೀವ್ರ ಪ್ರತಿಭಟನೆ

2017ರಲ್ಲಿ ಡಾ.ಸೈಯದ್ ಶಾ ಅವರಿಗೆ ರಾಜ್ಯಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. 1972ರಿಂದಲೇ ಕೆಬಿಎನ್ ಶಿಕ್ಷಣ ಸಂಸ್ಥೆಯೊಂದಿಗೆ ನಂಟು ಹೊಂದಿದ್ದ ಇವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅಲ್ಲದೇ ಅನೇಕ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದ್ದಾರೆ. ಕೆಬಿಎನ್ ದರ್ಗಾ ದೇಶದ ಎರಡನೇ ಅಜ್ಮೀರ್ ಎಂದೇ ಖ್ಯಾತಿ ಗಳಿಸಿದೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂಗೆ ಮತ್ತೆ ಸಂಕಷ್ಟ; ಲೋಕಾಯುಕ್ತ ಬಳಿಕ ಇ.ಡಿ ವಿಚಾರಣೆ ಭೀತಿ ಶುರು

Share This Article