ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳ ಬಂಧನ – ಪೊಲೀಸರಿಗೆ ಸುಧಾಕರ್ ಮೆಚ್ಚುಗೆ

Public TV
2 Min Read

-ಗ್ಯಾಂಗ್ ರೇಪ್ ಪ್ರಕರಣ ನಡೆದಿದ್ದು ದುರದೃಷ್ಟಕರ

ಚಿಕ್ಕಬಳ್ಳಾಪುರ: ಕರ್ನಾಟಕ ಒಳ್ಳೆಯ ರಾಜ್ಯ ಎಂಬುದಕ್ಕೆ ಹೆಸರು ವಾಸಿ ಇಂತಹ ರಾಜ್ಯದಲ್ಲಿ ಈ ಘಟನೆ ನಡೆದದ್ದು ದುರದೃಷ್ಟಕರ ಸಂಗತಿಯಾಗಿದೆ ಎಂದು ಹೇಳುವುದರ ಜೊತೆಗೆ, ಆರೋಪಿಗಳನ್ನು ಬಂಧಿಸಿದ ಕರ್ನಾಟಕ ಪೊಲೀಸರ ಕುರಿತಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಸಂಬಂಧ ಸಿಎಂ ಹಾಗೂ ಹೋಂ ಮಿನಿಸ್ಟರ್ ಮಾತನಾಡಿದ್ದಾರೆ. ಬೇರೆಯವರು ಮಾತನಾಡಿ ಗೊಂದಲದ ಗೂಡಾಗೋದು ಬೇಡ. ದೇಶದಲ್ಲೇ ಕರ್ನಾಟಕ ಪೊಲೀಸರಿಗೆ ಒಳ್ಳೆಯ ಹೆಸರಿದೆ. ದಕ್ಷ ಹಾಗೂ ಪರಿಣಿತರು. ಪೊಲೀಸರು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಇನ್ನೂ ಮುಂದೆ ಇಂತಹ ಘಟನೆಗಳು ನಡೆಯದಂತೆ ನಮ್ಮ ಸರ್ಕಾರ ಗಟ್ಟಿ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.

ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ ಯಾವ ಮೂಲೆಗಳಿಂದ ನೀರು ತರುತ್ತೀವಿ ಎನ್ನುವುದನ್ನು ಈಗಲೇ ಹೇಳಲ್ಲ ಕಾದು ನೋಡಿ. ಬಸವರಾಜ್ ಬೊಮ್ಮಾಯಿಯವರಿಗೆ ನೀರಾವರಿ ವಿಚಾರದಲ್ಲಿ ಆಳವಾದ ಜ್ಞಾನ ಇದೆ. ನಾನು ಈಗಾಗಲೇ ಎತ್ತಿನಹೊಳೆ ಸಂಬಂಧ ಅವರ ಜೊತೆ ಚರ್ಚೆ ಮಾಡಿದ್ದೇನೆ. ಆದ್ಯತೆಯ ಮೇರೆಗೆ ಈ ಜಿಲ್ಲೆಗಳಿಗೆ ಆದಷ್ಟು ಬೇಗ ನೀರು ತರುವ ಕೆಲಸ ಆಗಲಿದೆ ಎಂದು ಭರವಸೆಯ ಮಾತಗಳನ್ನಾಡಿದ್ದಾರೆ. ಇದನ್ನೂ ಓದಿ:ಅತ್ಯಾಚಾರ ಆರೋಪಿಗಳನ್ನು ಎನ್‍ಕೌಂಟರ್ ಮಾಡಬೇಕು: ಸಾ.ರಾ ಮಹೇಶ್

ಬಸವರಾಜ್ ಬೊಮ್ಮಾಯಿಯವರು ಹಾಗೂ ನಾನು ದೆಹಲಿಗೆ ಹೋದಾಗ ಕೇಂದ್ರ ಆರೋಗ್ಯ ಸಚಿವರ ಜೊತೆ ಪ್ರತಿದಿನ ರಾಜ್ಯಕ್ಕೆ 5 ಲಕ್ಷ ಕೊರೊನಾ ಲಸಿಕೆ ಕೊಡಲು ಮಾತನಾಡಿಕೊಂಡು ಬಂದಿದ್ದೇವೆ. ರಾಜ್ಯದಲ್ಲಿ ಈಗಾಗಲೇ 4 ಕೋಟಿ ಕೊರೊನಾ ಲಸಿಕೆ ನೀಡಲಾಗಿದೆ. ಪ್ರತಿದಿನ ಕನಿಷ್ಠ 5 ಲಕ್ಷ ಕೊರೊನಾ ವ್ಯಾಕ್ಸಿನ್ ಹಾಕಿಕೊಳ್ಳಲಾಗಿದೆ. ಹೀಗೆ ಮಾಡಿದರೆ ಒಂದು ತಿಂಗಳಲ್ಲಿ ಒಂದೂವರೆ ಕೋಟಿ ಲಸಿಕೆ ಹಾಕಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಗ್ಯಾಂಗ್‍ರೇಪ್ ಪ್ರಕರಣ- ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ 5 ಲಕ್ಷ ರೂ. ಬಹುಮಾನ

ಇನ್ನು ಮುಂದೆ ವಾರದಲ್ಲಿ ಒಂದು ದಿನ ಲಸಿಕಾ ಉತ್ಸವ ಮಾಡಲಿದ್ದು, ಸಿಎಂ ಕೈಯಲ್ಲಿ ಉದ್ಘಾಟನೆ ಮಾಡಿಸಿಲಿದ್ದೇವೆ. ಅಂದು 15 ರಿಂದ 30 ಲಕ್ಷ ಕೊರೊನಾ ವ್ಯಾಕ್ಸಿನ್ ಹಾಕುವ ಗುರಿ ಇದೆ. ಬೆಂಗಳೂರಿನ ಸ್ಲಂಗಳಲ್ಲಿ ಇರುವವರಿಗೆ ಬಹಳ ಪ್ರಾಮುಖ್ಯತೆ ನೀಡಲಾಗುವುದು. ಶುಕ್ರವಾರ ಬೆಂಗಳೂರಿನಲ್ಲಿ ಒಂದು ಕೋಟಿ ಲಸಿಕೆ ತಲುಪಿದ್ದೇವೆ. ಎರಡು ಡೋಸ್ ಪಡೆದವರಲ್ಲಿ 2 ತಿಂಗಳಲ್ಲಿ ಬೆಂಗಳೂರು ನಗರ ದೇಶದಲ್ಲಿ ಮೊದಲ ಸ್ಥಾನ ಅಲಂಕರಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಆ ದೃಷ್ಟಿ, ಆ ದಾರಿಯಲ್ಲಿ, ಹೋಗುತ್ತಿದ್ದು, ಬೆಂಗಳೂರಿಗೆ ಹೆಚ್ಚಿನ ಪ್ರಾಮಖ್ಯತೆ ನೀಡಲು ಸಿಎಂ ಸೂಚನೆ ನೀಡಿದ್ದಾರೆ ಎಂದಿದ್ದಾರೆ.ಇದನ್ನೂ ಓದಿ:ವೇಷಧರಿಸಿ 72 ಲಕ್ಷ ರೂ. ದಾನ ಮಾಡಿದ್ದ ರವಿ ಕಟಪಾಡಿ ಈ ಬಾರಿ ಡಾರ್ಕ್ ಅಲೈಟ್ ಲುಕ್‍ನಲ್ಲಿ ಪ್ರತ್ಯಕ್ಷ

Share This Article
Leave a Comment

Leave a Reply

Your email address will not be published. Required fields are marked *