ಸೂರ್ಯ 43ನೇ ಸಿನಿಮಾಗೆ ಸುಧಾ ಕೊಂಗರ ಡೈರೆಕ್ಟರ್

Public TV
1 Min Read

ಮಿಳಿನ ಖ್ಯಾತ ನಟ ಸೂರ್ಯ (Surya) ಹಾಗೂ ನಿರ್ದೇಶಕಿ ಸುಧಾ ಕೊಂಗರ (Sudha Kongara) ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧಾರಿತ ಸಿನಿಮಾ ಸೂರರೈ ಪೋಟ್ರು ಮೂಲಕ ಸಂಚಲನ ಸೃಷ್ಟಿಸಿದ್ದ ಈ ಜೋಡಿ ಮಗದೊಮ್ಮೆ ಒಂದಾಗಿದ್ದಾರೆ. ಸೂರ್ಯ ನಟಿಸಲಿರುವ 43ನೇ ಸಿನಿಮಾಗೆ ಸುಧಾ ಕೊಂಗರ ಆಕ್ಷನ್ ಕಟ್ ಹೇಳ್ತಿದ್ದಾರೆ.

ಸೂರರೈ ಪೋಟ್ರು ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಷಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಆಸ್ಕರ್ ರೇಸ್ ಗೂ ಇಳಿದಿದ್ದ ಈ ಚಿತ್ರ ಹಲವು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ  ಬಾಚಿಕೊಂಡಿತ್ತು. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಈ ತಂಡ ಹೊಸ ಪ್ರಾಜೆಕ್ಟ್ ಗೆ ಒಂದಾಗಿದೆ.

ಸೂರರೈ ಪೋಟ್ರೂ ಮೂಲಕ ಧಮಾಕ ಎಬ್ಬಿಸಿದ್ದ ಸೂರ್ಯ ಹಾಗೂ ಸುಧಾ ಕೊಂಗರ ಹೊಸ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಮಾಲಿವುಡ್ ಹ್ಯಾಂಡ್ಸಮ್ ಹಂಕ್ ದುಲ್ಕರ್ ಸಲ್ಮಾನ್, ನಜ್ರಿಯಾ ಫಹದ್ ಹಾಗೂ ವಿಜಯ್ ವರ್ಮಾ  ಸೂರ್ಯ 43 ಚಿತ್ರದ ಭಾಗವಾಗಿದ್ದಾರೆ.

ತಾತ್ಕಾಲಿಕವಾಗಿ #Suriya43 ಎಂದು ಟೈಟಲ್ ಇಡಲಾಗಿದೆ. ಸೂರ್ಯ ಒಡೆತನದ 2D ಎಂಟರ್‌ಟೈನ್‌ಮೆಂಟ್ ನಡಿ ಜ್ಯೋತಿಕಾ, ಸೂರ್ಯ ಮತ್ತು ರಾಜಶೇಖರ್ ಕರ್ಪೂರಸುಂದರಪಾಂಡಿಯನ್ ನಿರ್ಮಿಸಲಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಜಿವಿ ಪ್ರಕಾಶ್ ಸಂಗೀತ ನಿರ್ದೇಶಿಸ್ತಿರುವ 100 ಚಿತ್ರ ಇದಾಗಿರೋದು ಮತ್ತೊಂದು ವಿಶೇಷ..ಸೂರರೈ ಪೋಟ್ರೂ ಮೂಲಕ ಮೋಡಿ ಮಾಡಿದ್ದ ಸೂರ್ಯ, ಸುಧಾ ಹಾಗೂ ಜಿವಿ ಪ್ರಕಾಶ್ ಹೊಸ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಇಮ್ಮಡಿಯಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್