ಬರ್ತ್‌ಡೇ ಪ್ರಯುಕ್ತ ಸುದೀಪ್‌ ಸಿಡಿಪಿ ರಿಲೀಸ್ ಮಾಡಿದ ತ್ರಿವಳಿ ಸ್ಟಾರ್ಸ್‌

By
2 Min Read

ಇದೇ ಸಪ್ಟೆಂಬರ್ 2ಕ್ಕೆ ಕಿಚ್ಚ ಸುದೀಪ್ (Kichcha Sudeep) 52ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಬಾರಿ ಅಮ್ಮನಿಲ್ಲದ ವರ್ಷ ಆಗಿರೋದ್ರಿಂದ ಅವರಿಗೆ ಸೆಲೆಬ್ರೇಷನ್ ಮಾಡಿಕೊಳ್ಳಲು ಮನಸ್ಸಿಲ್ಲದಿದ್ದರೂ ಅಭಿಮಾನಿಗಳನ್ನ ಭೇಟಿಯಾಗೋಕೆ ಮನಸ್ಸು ಮಾಡಿದ್ದಾರೆ. ಈ ಹೊತ್ತಲ್ಲಿ ಹಲವು ವರ್ಷಗಳಿಂದ ಕಿಚ್ಚನ ಹುಟ್ಟುಹಬ್ಬದ ಸ್ಪೆಷಲ್ ಆಗಿ ಸಿಡಿಪಿ (Sudeep CDP) ರಿಲೀಸ್ ಮಾಡುವ ಟ್ರೆಂಡ್ ಸೃಷ್ಟಿಸಿಕೊಂಡು ಬಂದಿದ್ದಾರೆ ಫ್ಯಾನ್ಸ್. ಈ ವರ್ಷದ ಕಿಚ್ಚನ ಬರ್ತ್‌ಡೇ ಸಿಡಿಪಿಯನ್ನು ಮೂವರು ಬಿಗ್ ಸ್ಟಾರ್ಸ್‌ ಞಲೀಸ್ ಮಾಡಿರುವುದು ವಿಶೇಷ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಸುದೀಪ್ ಬರ್ತ್‌ಡೇ ಕಾಮನ್ ಡಿಪಿ ರಿಲೀಸ್ ಮಾಡಿ ಶುಭ ಕೋರಿದ್ದಾರೆ. `ಮುಂದಿನ ಎಲ್ಲಾ ಸಿನಿಮಾಗಳಿಗೂ ಒಳ್ಳೆದಾಗ್ಲಿ ನೂರ್‌ಕಾಲ ಚೆನ್ನಾಗಿರಿ ಸುದೀಪ್ʼ ಎಂದು ಶಿವಣ್ಣ ಆಶೀರ್ವದಿಸಿದ್ದಾರೆ.

ಕಿಚ್ಚನ ಬರ್ತ್‌ಡೇ ಸಿಡಿಪಿ ರಿಲೀಸ್ ಮಾಡಿರುವ ಮತ್ತೋರ್ವ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸಿಡಿಪಿ ರಿಲೀಸ್ ಮಾಡಿ, “ಹುಟ್ಟುಹಬ್ಬದ ಶುಭಾಶಯಗಳು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸರ್, ಹೀಗೆ ನಮ್ಮನ್ನು ಇನ್ಸ್ಪೈರ್ ಮಾಡ್ತಿರಿʼ ಅಂದಿದ್ದಾರೆ.

ಇನ್ನು ಸುದೀಪ್ ಹುಟ್ಟುಹಬ್ಬಕ್ಕೆ ಸಿಡಿಪಿ ರಿಲೀಸ್ ಮಾಡಿರುವ ಮತ್ತೊಬ್ಬ ಸ್ಟಾರ್ ಡಾಲಿ ಧನಂಜಯ, ಹುಟ್ಟುಹಬ್ಬದ ಶುಭಾಶಯಗಳು ಸರ್, ನಮಗೆ ಇನ್ಸ್ಪೈರ್ ಮಾಡ್ತಿರಿʼ ಎಂದು ಹೇಳಿದ್ದಾರೆ. ಒಟ್ನಲ್ಲಿ ಸಪ್ಟೆಂಬರ್ 2 ರಂದು ನಡೆಯಲಿರುವ ಕಿಚ್ಚನ ಬರ್ತ್‌ಡೇಗೆ ಅಬ್ಬರ ಈಗಿನಿಂದಲೇ ಶುರುವಾಗಿದೆ. ಅಂದೇ ಹಲವು ಸಿನಿಮಾಗಳ ಮಾಹಿತಿ ರಿವೀಲ್ ಆಗಲಿದೆ.

Share This Article