ಅಪ್ಪು ಆ್ಯಪ್ ಟ್ರೈಲರ್‌ಗೆ ಕಿಚ್ಚನ ಧ್ವನಿ: ಆ್ಯಪ್‌ನ ಸ್ಪೆಷಾಲಿಟಿ ಏನು?

Public TV
1 Min Read

ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿಕೆಗೆ 4 ವರ್ಷ ತುಂಬುತ್ತಿದೆ. ಇದೇ ವೇಳೆ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಅಪ್ಪು ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅಂತ ಅಪ್ಪು ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಹೊಸ ಹೆಜ್ಜೆಯೊಂದನ್ನ ಇಟ್ಟಿದ್ದಾರೆ. ಅಪ್ಪು ಅಪ್ಲಿಕೇಷನ್ (Appu App) ಅನಾವರಣ ಮಾಡಲು ಸಜ್ಜಾಗಿದ್ದಾರೆ. ಅದಕ್ಕೂ ಮೊದಲು ಟ್ರೈಲರ್ ರಿಲೀಸ್ ಮಾಡಲಾಗಿದೆ.

ಪುನೀತ್ ರಾಜಕುಮಾರ್ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳು, ಅವರ ಜೀವನ, ಸಾಧನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬಲು ಪಿಆರ್‌ಕೆ ಹೆಸರಿನ ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದ್ದು, ಅದನ್ನು ಅ.25 ರಂದು ಬಿಡುಗಡೆ ಮಾಡಲಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇನ್ನೂ ಕೆಲವು ಗಣ್ಯರು ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ: ಕಾಂತಾರ ಸೂಪರ್ ಸಕ್ಸಸ್ – ಕಾಶಿ ಯಾತ್ರೆ ಕೈಗೊಂಡ ಡಿವೈನ್‍ಸ್ಟಾರ್

ಅಂದಹಾಗೆ ಅಪ್ಲಿಕೇಶನ್‌ನ ಪ್ರೋಮೊ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಪ್ರೋಮೊಗೆ ಅಪ್ಪು ಅವರ ಆಪ್ತ ಗೆಳೆಯರೂ ಆಗಿದ್ದ ಕಿಚ್ಚ ಸುದೀಪ್ (Sudeep) ಅವರು ಟ್ರೈಲರ್‌ಗೆ ಧ್ವನಿ ನೀಡಿದ್ದಾರೆ. ಪಿಆರ್‌ಕೆ ಅಪ್ಲಿಕೇಶನ್ ಕೇವಲ ಅಪ್ಪು ಅವರ ಚಿತ್ರ, ವಿಡಿಯೋಗಳನ್ನು ಹೊಂದಿರುವ ಆಪ್ ಅಲ್ಲ. ಇಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಪರಸ್ಪರ ತಮ್ಮ ಕೆಲಸವನ್ನು ಪ್ರದರ್ಶನಕ್ಕೆ ಇಡುವ, ಒಬ್ಬರಿಂದ ಮತ್ತೊಬ್ಬರು ಕಲಿಯುವ ಅವಕಾಶವೂ ಇದೆಯಂತೆ.

ಸದ್ಯ ಟ್ರೈಲರ್‌ ಮೂಲಕ ಒಂದಷ್ಟು ವಿಷಯಗಳನ್ನ ತಲುಪಿಸಿದೆ ಪಿಆರ್‌ಕೆ. ಇನ್ನು ಅಪ್ಲಿಕೇಷನ್ ಬಿಡುಗಡೆಯಾದ್ಮೇಲೆ ಏನೆಲ್ಲ ಇರಲಿದೆ ಅನ್ನೋ ಸಂಪೂರ್ಣ ಮಾಹಿತಿ ದೊರೆಯಲಿದೆ. ಜಗತ್ತಿನ ಮೊಟ್ಟಮೊದಲ ಫ್ಯಾನ್‌ಡಮ್ ಆ್ಯಪ್ ಇದು ಎಂದು ಹೇಳೋಕೆ ಹೆಮ್ಮೆ ಎನ್ನಿಸುತ್ತೆ. ಇದನ್ನೂ ಓದಿ: ಬ್ರ್ಯಾಟ್ ಟ್ರೈಲರ್ ಲಾಂಚ್ ಮಾಡಿ ನಿರ್ದೇಶಕ ಪ್ರೇಮ್ ಕಾಲೆಳೆದ ಕಿಚ್ಚ ಸುದೀಪ್

Share This Article