ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಸಹೋದರ – ಸಲ್ಲುಗೆ ಕಿಚ್ಚನ ವಿಶ್

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಆತ್ಮೀಯ ಗೆಳೆಯ ಬಾಲಿವುಡ್ ನಟ ಸಲ್ಮಾನ್‍ಖಾನ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ.

ಬಾಲಿವುಡ್ ಬಾಯ್ ಜಾನ್ ನಟ ಸಲ್ಮಾನ್ ಖಾನ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 56ನೇ ವಸಂತಕ್ಕೆ ಕಾಲಿಟ್ಟಿರುವ ನಟ ಸಲ್ಮಾನ್ ಖಾನ್‍ಗೆ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಸೋಶಿಯಲ್ ಮೀಡಿಯ ಮೂಲಕ ಶುಭಕೋರಿದ್ದಾರೆ. ಈ ನಡುವೆ ಕಿಚ್ಚ ಸುದೀಪ್ ತಮ್ಮ ಆತ್ಮೀಯ ಗೆಳೆಯ ಸಲ್ಮಾನ್ ಖಾನ್ ಜೊತೆಗಿರುವ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಹುಟ್ಟುಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: 56ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಸುಲ್ತಾನ್ – ಫಾರ್ಮ್ ಹೌಸ್‍ನಲ್ಲಿ ಪಾರ್ಟಿ

ಫೋಟೋ ಜೊತೆಗೆ ಆಲ್ ದಿ ಬೆಸ್ಟ್ ಸಲ್ಮಾನ್ ಖಾನ್. ನೀವು ಯಾವಾಗಲೂ ನಿಮ್ಮ ಕುಟುಂಬದವರಂತೆ ನನ್ನನ್ನು ನೋಡುತ್ತೀರಾ. ನಿಮ್ಮ ಅಪಾರವಾದ ಪ್ರೀತಿಗೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಖುಷಿ ಮತ್ತು ಆರೋಗ್ಯವನ್ನು ನೀಡಲಿ ಎಂದು ಶುಭಾಶಯ ತಿಳಿಸಿದ್ದಾರೆ.

ವಿಶೇಷವೆಂದರೆ ಸುದೀಪ್ ಶೇರ್ ಮಾಡಿರುವ ಈ ಫೋಟೋ ದಬಾಂಗ್-2 ಸಿನಿಮಾದ ವೇಳೆ ಕ್ಲಿಕ್ಕಿಸಲಾಗಿದ್ದು, ಈ ಫೋಟೋ ಮಧ್ಯೆ ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಸಹೋದರ ಎಂದು ಬರೆಯಲಾಗಿದೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

 

View this post on Instagram

 

A post shared by KicchaSudeepa (@kichchasudeepa)

ತಮ್ಮ ಸ್ಟೈಲ್, ಫಿಟ್‍ನೇಸ್, ಖಡಕ್ ಡೈಲಾಂಗ್ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಸಲ್ಲುಗೆ ಬಾಲಿವುಡ್‍ನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ಸದ್ಯ ಪ್ರತಿವರ್ಷ ಸಲ್ಮಾನ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಾಂತರದಿಂದ ಸಲ್ಮಾನ್ ತಮ್ಮ ಹುಟ್ಟುಹಬ್ಬದ ಸಡಗರಕ್ಕೆ ಬ್ರೇಕ್ ಹಾಕಿ ಫಾರ್ಮ್ ಹೌಸ್‍ನಲ್ಲಿ ಆಚರಿಸಿಕೊಂಡಿದ್ದರು. ಹಾಗೆಯೇ ಈ ಬಾರಿಯು ಸಲ್ಮಾನ್ ತಮ್ಮ ಹುಟ್ಟುಹಬ್ಬವನ್ನು ಫಾರ್ಮ್ ಹೌಸ್‍ನಲ್ಲಿ ಆಚರಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *