ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ

Public TV
2 Min Read

ಬೆಂಗಳೂರು: ಕಿಚ್ಚ ಸುದೀಪ್ ಅವರು ಪೈಲ್ವಾನ್ ಸಿನಿಮಾ ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕಿಚ್ಚ, ಎಲ್ಲದಕ್ಕೂ ಒಂದು ನ್ಯಾಯ ಇದೆ. ನ್ಯಾಯ ಆಗಬೇಕು, ಆದರೆ ಅನ್ಯಾಯ ಆಗಬಾರದು. ಅನ್ಯಾಯವಾಗಿ ಯಾರು ಸಿಕ್ಕಿಹಾಕಿಕೊಳ್ಳಬಾರದು. ಯಾರು ತಪ್ಪು ಮಾಡಿದ್ದಾರೋ ಅವರು ತಪ್ಪಿಸಿಕೊಳ್ಳಬಾರದು. ಅಡುಗೆ ಮಾಡಿ ಎಲ್ಲರೂ ಊಟಕ್ಕೆ ಕುಳಿತಿರುವಾಗ ಕಾಲು ಎಡವಿ ಅನ್ನ ಚೆಲ್ಲಿದ್ದರೆ, ಬಡಿಸುವುದಕ್ಕೆ ಆಗಿಲ್ಲ ಎನ್ನುವ ನೋವು ಇರುತ್ತದೆ. ಹಾಗಂತ ಇನ್ನೊಬ್ಬರು ಮಾಡಿದ ಅಡುಗೆ ಹಾಳಾಗಬಾರದು ಎಂದರು.  ಇದನ್ನು ಓದಿ: ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್

ಕನ್ನಡ ಚಿತ್ರರಂಗದಲ್ಲಿ ಈಗ ಕೆಲವರು ದೊಡ್ಡ ಸಿನಿಮಾ ಎಂದು ಮಾಡಿದಾಗ ಕೆಲವೊಂದು ವಿಷಯಗಳನ್ನು ತಡೆದುಕೊಳ್ಳಬಹುದು. ಆದರೆ ಕಳ್ಳತನ ಎಂಬುದು ಅಭ್ಯಾಸವಾದರೆ ಅದಕ್ಕೆ ಈಗಾಗಲೇ ಒಂದು ದಾರಿ ಇರುತ್ತದೆ. ಈ ದಾರಿಯಲ್ಲೂ ಮಾಡಬಹುದು ಎಂದು ನಮ್ಮವರೇ ಹೇಳಿಕೊಟ್ಟರೆ, ನಾಳೆ ಚಿಕ್ಕಪುಟ್ಟ ನಿರ್ಮಾಪಕರು ತುಂಬಾ ಕಷ್ಟದಿಂದ ಸಿನಿಮಾ ಮಾಡಿರುತ್ತಾರೆ. ಮೊದಲ ದಿನವೇ ಸಿನಿಮಾ ಪೈರಸಿಯಾದರೆ ಅವರ ಗತಿ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

ಇದು ನನ್ನ ಹೋರಾಟ ಅಲ್ಲ. ಬೇರೆಯವರಿಗೆ ಈ ರೀತಿ ಆಗಬಾರದು. ಇದರಲ್ಲಿ ಜಿದ್ದುಗಿದ್ದು ಬರುವುದಿಲ್ಲ. ತಪ್ಪು ಮಾಡದೇ ಇರುವವರು ಹೆದರುಕೊಳ್ಳುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ಬಿಡುಗಡೆ ಆಗಬೇಕಿದೆ. ಜೊತೆಯಲ್ಲಿ ಮನೆ ಅಡಯಿಟ್ಟು ಮಾಡಿದ ಸಿನಿಮಾಗಳು ಕೂಡ ಬಿಡುಗಡೆಗೆ ತಯಾರಿದೆ. ಈ ರೀತಿ ಯಾರಿಗೂ ಆಗುವುದು ಬೇಡ. ಆದರೆ ಈ ಉದ್ದೇಶ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.

ಅಭಿಮಾನಿಗಳಿಗೆ ಏನೂ ಹೇಳುತ್ತೀರಾ ಎಂದು ಪ್ರಶ್ನಿಸಿದಾಗ, ನಾನು ಯಾರಿಗೂ ಏನೂ ಹೇಳುವುದಿಲ್ಲ. ತಪ್ಪು ಮಾಡಬೇಡಿ. ಇನ್ನೊಬ್ಬರ ಹೊಟ್ಟೆಗೆ ಹೊಡೆಯಬೇಡಿ. ನಿಮ್ಮಿಂದ ಒಳ್ಳೆಯದು ಮಾಡಲು ಆಗಲ್ಲ ಎಂದರೆ ತಪ್ಪು ಮಾಡಬೇಡಿ. ಏನಾದರೂ ಹೆಚ್ಚುಕಮ್ಮಿ ಆಗಿ ಅವರು ಹಣ ಕಳೆದುಕೊಂಡರೆ ಅವರ ಪಾಲಿಗೆ ಯಾರು ಬರುತ್ತಾರೆ. ಅವರಿಗೆ ಸಹಾಯ ಮಾಡೋಣ ಎಂದರೆ ಮತ್ತೊಂದು ಸಿನಿಮಾ ಮಾಡುವುದಕ್ಕೆ ನನಗೆ ಒಂದು ವರ್ಷ ಬೇಕು. ನಮಗೆ ಮಗು ಬೇರೆ ಅಲ್ಲ, ಸಿನಿಮಾ ಬೇರೆ ಅಲ್ಲ. ಎರಡು ಒದ್ದಾಡುತ್ತಿದೆ. ನೋಡಿಕೊಂಡು ಯಾರು ಸುಮ್ಮನೆ ಇರಬಾರದು. ಯಾಕೆ ಎಲ್ಲವನ್ನು ಸುಮ್ಮನೆ ಅನುಭವಿಸಿಕೊಂಡು ಇರಬೇಕು ಎಂದು ಸುದೀಪ್ ಉತ್ತರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *