ಸುನೀಲ್ ಶೆಟ್ಟಿ ಫಿಟ್ನೆಸ್‍ಗೆ ಕಿಚ್ಚ ಫಿದಾ

Public TV
2 Min Read

ಬೆಂಗಳೂರು: ಪೈಲ್ವಾನ್ ಚಿತ್ರದಲ್ಲಿ ಸುನೀಲ್ ಶೆಟ್ಟಿ ಅವರು ತಮ್ಮ ಪಾತ್ರವನ್ನು ಬಹಳ ಅದ್ಭುತವಾಗಿ ನಿಭಾಯಿಸಿದ್ದಾರೆ. ಈ ವಯಸ್ಸಿನಲ್ಲೂ ಅವರು ಅಷ್ಟು ಫಿಟ್ ಆಗಿ ಇರೋದು ಅದ್ಭುತ ಎಂದು ಕಿಚ್ಚ ಸುದೀಪ್ ಹಾಡಿ ಹೊಗಳಿದ್ದಾರೆ.

ಪಬ್ಲಿಕ್ ಟಿವಿಯ ಸಂದರ್ಶದ ವೇಳೆ ಮಾತನಾಡುತ್ತಾ ಸುದೀಪ್ ಸುನೀಲ್ ಶೆಟ್ಟಿ ಫಿಟ್ನೆಸ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸುನೀಲ್ ಶೆಟ್ಟಿ ಅವರು ತಮ್ಮ ಪಾತ್ರವನ್ನು ಬಹಳ ಅದ್ಭುತವಾಗಿ ನಿಭಾಯಿಸಿದ್ದಾರೆ. ಈ ವಯಸ್ಸಿನಲ್ಲೂ ಅವರು ಅಷ್ಟು ಫಿಟ್ ಆಗಿ ಇರೋದು ಅದ್ಭುತ. ಅದಕ್ಕೆ ಅವರ ಪಾತ್ರದಲ್ಲಿ ಅವರು ಸೂಪರ್ ಆಗಿ ಕಾಣಿಸುತ್ತಾರೆ. ನಮಗಿಂತ ಅವರು ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣುತ್ತಾರೆ. ಅವರ ಫಿಟ್ನೆಸ್ ಅನ್ನು ನಿಜಕ್ಕೂ ಮೆಚ್ಚಬೇಕು ಎಂದಿದ್ದಾರೆ. ಇದನ್ನೂ ಓದಿ:ಬಾಕ್ಸಿಂಗ್ ಸೀನ್‍ಗೆ 28 ದಿನ ಶೂಟಿಂಗ್ ಮಾಡಿದ್ದೇವೆ, ಇದು ಜೋಕ್ ಅಲ್ಲ: ಸುದೀಪ್

ಅವರಷ್ಟೇ ಅಲ್ಲ ನಟ ಶರತ್ ಕುಮಾರ್ ಅವರು ಕೂಡ ತುಂಬಾ ಚೆನ್ನಾಗಿ ಫಿಟ್ನೆಸ್ ಇಟ್ಟುಕೊಂಡು ಬಂದಿದ್ದಾರೆ, ಅವರನ್ನೂ ಮೆಚ್ಚಲೇಬೇಕು. ಮೊದಲು ನಾವು ಸುನೀಲ್ ಶೆಟ್ಟಿ ಹಾಗೂ ಶರತ್ ಕುಮಾರ್ ಇವರಿಬ್ಬರಲ್ಲಿ ಒಬ್ಬರನ್ನು ಸಿನಿಮಾದಲ್ಲಿ ತೆಗೆದುಕೊಳ್ಳಬೇಕು ಅಂದುಕೊಂಡಿದ್ದೆವು. ಒಂದು ಹೊಸ ಪ್ರಯತ್ನ ಮಾಡೋಣ ಎಂದು ಸುನೀಲ್ ಶೆಟ್ಟಿ ಅವರನ್ನು ಕನ್ನಡಕ್ಕೆ ಕರೆತಂದೆವು. ಸುನೀಲ್ ಶೆಟ್ಟಿ ಅವರನ್ನು ಜಾಹೀರಾತಿನಲ್ಲಿ ನೋಡಿ ಇವರು ನಮ್ಮ ಸಿನಿಮಾ ಪಾತ್ರಕ್ಕೆ ಸರಿಯಾಗಿ ಒಪ್ಪುತ್ತಾರೆ ಎಂದು ಆಯ್ಕೆ ಮಾಡಿದೆವು ಎಂದು ತಿಳಿಸಿದರು. ಇದನ್ನೂ ಓದಿ:ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ

ಇದೇ ವೇಳೆ ಸಂಗೀತ ನಿರ್ದೇಶಕ ಅರ್ಜನ್ ಜನ್ಯ ಮತ್ತು ರವಿಶಂಕರ್ ಬಗ್ಗೆ ಮಾತನಾಡಿ, ಇಬ್ಬರು ಒಳ್ಳೆಯ ಕಲೆ ಇರುವ ವ್ಯಕ್ತಿಗಳು. ಅವರವರ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಈ ಇಬ್ಬರು ಕಲಾವಿದರೂ ನನ್ನ ಕೆಂಪೇಗೌಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯ ಆದರು ಎಂದು ಹೇಳಲು ಬಹಳ ಖುಷಿಯಾಗುತ್ತೆ ಎಂದು ಹೇಳಿದರು ಮತ್ತು ಪೈಲ್ವಾನ್ ರೀತಿ ಇನ್ನೊಂದು ಸಿನಿಮಾ ಬಂದರೆ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ:ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

ಇದೇ ವೇಳೆ ಪೈಲ್ವಾನ್ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ, ನನಗೆ ತುಂಬಾ ಖುಷಿ ಇದೆ. ಏಕೆಂದರೆ ಸಿನಿಮಾ ನೋಡಿದವರು ಉಪಯೋಗಿಸುತ್ತಿರುವ ಪದಗಳು, ಅಕ್ಷರಗಳು ಹೊಗಳಿಕೆಯಾಗಿ ಬರುತ್ತಿರುವುದನ್ನು ಕೇಳುವುದಕ್ಕೆ ಖುಷಿಯಾಗುತ್ತಿದೆ. ಇದರಲ್ಲಿ ನಮ್ಮ ಶ್ರಮ ತುಂಬಾ ಇದೆ. ಎಲ್ಲರದರ ನಡುವೆ ಜನರು ಚಿತ್ರಮಂದಿರ ಮುಂದೆ ಹೋಗಿ ಸೆಲೆಬ್ರೇಶನ್ ಮಾಡಿದಾಗ ಅದನ್ನು ನೋಡುವುದಕ್ಕೆ ನನಗೆ ಖುಷಿ ಹಾಗೂ ಹೆಮ್ಮೆ ಆಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ದುಡ್ಡು ನನಗೆ ಮುಖ್ಯವಲ್ಲ, ಅದು ನನ್ನ ವ್ಯಕ್ತಿತ್ವವೂ ಅಲ್ಲ: ಕಿಚ್ಚ

ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಚೆನ್ನಾಗಿದೆ. ಆದರೆ ಇನ್ನೂ ಚೆನ್ನಾಗಿ ಆಗಬೇಕಿತ್ತು. ಕೆಲವು ಅಡಚಣೆಗಳು ಆಗುತ್ತಿರುತ್ತಿವೆ. ಈಗ ಮನೆಯಲ್ಲಿಯೇ ಕುಳಿತುಕೊಂಡು ಸಿನಿಮಾ ನೋಡುವಂತೆ ಆಗಿದೆ. ಆದರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿರುವ ಜನರ ಬಗ್ಗೆ ನನಗೆ ಖುಷಿಯಾಗುತ್ತದೆ. ಬ್ಯುಸಿನೆಸ್ ಪ್ರಕಾರ ಸಿನಿಮಾ ಇನ್ನೂ ಚೆನ್ನಾಗಿ ಆಗಬೇಕಿತ್ತು. ಈಗ ಸಿನಿಮಾ ಚೆನ್ನಾಗಿ ಪ್ರದರ್ಶನವಾಗುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *