ಸುದೀಪ್-ಎನ್.ಕುಮಾರ್ ಸಂಧಾನ: ಇಂದೋ.. ನಾಳೆಯೋ?

Public TV
2 Min Read

ಅಂದುಕೊಂಡಂತೆ ಆಗಿದ್ದರೆ ಕಳೆದ ರವಿವಾರವೇ ಕಿಚ್ಚ ಸುದೀಪ್ (Kiccha Sudeep) ಮತ್ತು ನಿರ್ಮಾಪಕ ಎನ್.ಕುಮಾರ್ (N. Kumar) ನಡುವಿನ ಗಲಾಟೆಗೆ ಅಂತ್ಯ ಸಿಗಬೇಕಿತ್ತು. ಆದರೆ, ರವಿವಾರವೂ ಸಂಧಾನ ಸಭೆ ನಡೆದಿಲ್ಲ. ರವಿಚಂದ್ರನ್ (Ravichandran) ಅವರು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ಮತ್ತು ಶಿವರಾಜ್ ಕುಮಾರ್ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದ ಸಂಧಾನ ಸಭೆ ಮುಂದಕ್ಕೆ ಹೋಗಿತ್ತು.

ಬಲ್ಲ ಮೂಲಗಳು ಮಾಹಿತಿಯಂತೆ ಇಂದು ಅಥವಾ ನಾಳೆ ಸಭೆ ನಡೆಯುವ ಸಾಧ್ಯತೆ ಇದೆ. ಹಾಗಂತ ಸ್ವತಃ ರವಿಚಂದ್ರನ್ ಅವರೇ ಸುದೀಪ್ ಮತ್ತು ಕುಮಾರ್ ಅವರಿಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದು ಚಿತ್ರರಂಗದ ಸಮನಮಸ್ಕರು ಸೇರಿ ಈ ಸಮಸ್ಯೆಗೆ ಒಂದು ಪರಿಹಾರ ಸೂಚಿಸಲಿದ್ದಾರಂತೆ.

ಮೊನ್ನೆಯಷ್ಟೇ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ರವಿಚಂದ್ರನ್ ನಿವಾಸದಲ್ಲಿ ಸಂಧಾನ ಸಭೆ ರಾತ್ರಿ ಹತ್ತು ಗಂಟೆಯವರೆಗೂ ನಡೆದಿದೆ ಎಂದು ಹೇಳಲಾಗುತ್ತಿದೆ. ಸುದೀಪ್, ಕುಮಾರ್, ರಾಕ್ ಲೈನ್ ವೆಂಕಟೇಶ್, ಭಾ.ಮಾ ಹರೀಶ್, ಉಮೇಶ್ ಬಣಕಾರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಮೊನ್ನೆಯ ಸಂಧಾನ ಯಶಸ್ವಿ ಆಗಿಲ್ಲ ಎಂದು ಹೇಳಲಾಗುತ್ತಿದೆ. ಕಿಚ್ಚ ಸುದೀಪ್ ಮತ್ತು ಕುಮಾರ್ ಪ್ರತ್ಯೇಕವಾಗಿ ತಮ್ಮ ನೋವುಗಳನ್ನು ಹೇಳಿಕೊಂದ್ದಾರೆ.

ಎನ್.ಕುಮಾರ್ ಈ ಹಿಂದೆ ಪ್ರತ್ಯೇಕವಾಗಿ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ (Shivaraj Kumar) ಅವರನ್ನು ಭೇಟಿ ಮಾಡಿದ್ದರು. ಸುದೀಪ್ ಮತ್ತು ತಮ್ಮ ನಡುವಿನ ಮನಸ್ತಾಪವನ್ನು ಬಗೆ ಹರಿಸುವಂತೆ ವಿನಂತಿಸಿಕೊಂಡಿದ್ದರು. ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ:ಕಮ್‌ಬ್ಯಾಕ್ ಆಗ್ತಿರೋ ಅನುಷ್ಕಾ ಶೆಟ್ಟಿ ಸಿನಿಮಾದಿಂದ ದೂರವಾಗಿದ್ಯಾಕೆ? ಇಲ್ಲಿದೆ ಅಪ್‌ಡೇಟ್

ಈ ನಡುವೆ ಕುಮಾರ್ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಲು ಏರಿದ್ದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ತಾವು ಯಾವುದೇ ಸಂಧಾನಕ್ಕೆ ಬರುವುದಿಲ್ಲ ಕೋರ್ಟ್ ನಲ್ಲೇ ನ್ಯಾಯ ಸಿಗಲಿ ಎಂದು ಸುದೀಪ್ ಹೇಳಿಕೆ ನೀಡಿದ್ದರು. ಈ ಮಾತಿನ ಬೆನ್ನಲ್ಲೇ ಕುಮಾರ್ ವಾಣಿಜ್ಯ ಮಂಡಳಿಯ ಮುಂದೆ ಧರಣೆಗೆ ಕೂತಿದ್ದರು.

 

ರವಿಚಂದ್ರನ್ ಅವರ ಮಾತಿನಂತೆ ಪ್ರತಿಭಟನೆಯಿಂದ ಹಿಂದೆ ಸರಿದಿದ್ದ ಕುಮಾರ್, ಆನಂತರ ಶಿವರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿದ್ದರು. ಇದೀಗ ರವಿಚಂದ್ರನ್ ಇಬ್ಬರನ್ನೂ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ಸಭೆಗಳ ನಂತರ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು.

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್