‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಕ್ಲೈ’ಮ್ಯಾಕ್ಸ್’ ಲುಕ್ ಔಟ್

Public TV
1 Min Read

ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಮ್ಯಾಕ್ಸ್’ (Max Film) ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ‘ಮ್ಯಾಕ್ಸ್’ ಚಿತ್ರದಲ್ಲಿನ ಸುದೀಪ್ ಲುಕ್ ರಿವೀಲ್ ಆಗಿದ್ದು, ಸಖತ್ ರಗಡ್ ಲುಕ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಚಿತ್ರದ ಕಿಚ್ಚನ ಕ್ಲೈಮ್ಯಾಕ್ಸ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋ ನಡುವೆಯೂ ಕಿಚ್ಚ ಸುದೀಪ್ (Kiccha Sudeep) ‘ಮ್ಯಾಕ್ಸ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕೆ ಸುದೀಪ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿನ ಲುಕ್ ಹೇಗಿದೆ ಎಂಬುದನ್ನ ಕೂಡ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಪ್ರತಾಪ್ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ದೊಡ್ಮನೆಗೆ ಪೊಲೀಸ್ ಎಂಟ್ರಿ

ವಿಜಯ್ ಕಾರ್ತಿಕೇಯ ನಿರ್ದೇಶದ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ನಟಿಸಿದ್ದಾರೆ. ವಿಭಿನ್ನ ಕಥೆಯಲ್ಲಿ ಸುದೀಪ್ ಜೀವತುಂಬಿದ್ದಾರೆ. ಸಿನಿಮಾದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಬೆಳವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ.

ಇನ್ನೂ ‘ಮ್ಯಾಕ್ಸ್’ ಚಿತ್ರದ ಟೈಟಲ್ ಟೀಸರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ವಿಕ್ರಾಂತ್ ರೋಣ (Vikrantrona) ಸಿನಿಮಾದ ನಂತರ ‘ಮ್ಯಾಕ್ಸ್’ ಚಿತ್ರದ ಮೂಲಕ ಸುದೀಪ್ ಬರುತ್ತಿದ್ದು,ಈ  ಚಿತ್ರದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಸಿನಿಮಾದ ರಿಲೀಸ್‌ ಅಪ್‌ಡೇಟ್‌ಗಾಗಿ ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದಾರೆ.

Share This Article