Hombale Films ಜೊತೆ ಕಿಚ್ಚ ಸಾಥ್- ಬರ್ತ್‌ಡೇಯಂದು ಸಿನಿಮಾ ಅನೌನ್ಸ್?‌

Public TV
2 Min Read

ಸ್ಯಾಂಡಲ್‌ವುಡ್  (Sandalwood) ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಹುಟ್ಟುಹಬ್ಬಕ್ಕೆ (Birthday) ಕೌಂಟ್ ಡೌನ್ ಶುರುವಾಗಿದೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಬರ್ತ್ಡೇಗೆ ತಯಾರಿ ಜೋರಾಗಿದೆ. ಇದರ ನಡುವೆ ಸುದೀಪ್ ಕ್ರೇಜಿ ಪ್ರಾಜೆಕ್ಟ್ ಬಗ್ಗೆ ಹೊಸ ಅಪ್‌ಡೇಟ್ ಸಿಕ್ಕಿದೆ. ತಮ್ಮ 47ನೇ ಚಿತ್ರಕ್ಕೆ ಕಾಂತಾರ(Kantara), ಕೆಜಿಎಫ್ ಸಿನಿಮಾ ನಿರ್ಮಿಸಿದ ಸಂಸ್ಥೆ ಹೊಂಬಾಳೆ ಜೊತೆ ಕೈಜೋಡಿಸಿದ್ದಾರೆ. ಕೆಜಿಎಫ್ ಮೇಕರ್ಸ್ ಜೊತೆ ಕಿಚ್ಚನ ಹೊಸ ಸಿನಿಮಾ ಮೂಡಿ ಬರಲಿದೆಯಂತೆ.

K 46 ಬಳಿಕ ಸುದೀಪ್ (Sudeep) ಹೊಂಬಾಳೆ ಫಿಲ್ಮ್ಸ್(Hombale Films) ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಾರೆ ಎನ್ನಲಾಗ್ತಿದೆ. ಕೆಜಿಎಫ್ (KGF) ಸರಣಿಗೂ ಮುನ್ನ ಹೊಂಬಾಳೆ ಸಂಸ್ಥೆ, ಕಿಚ್ಚನ ಜೊತೆ ಸಿನಿಮಾ ಮಾಡಲು ಪ್ಲ್ಯಾನ್ ಮಾಡಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ ಅದಕ್ಕೆ ವೇದಿಕೆ ಸಿದ್ಧವಾದಂತಿದೆ. ಇತ್ತೀಚೆಗೆ ಹೊಂಬಾಳೆ ಸಂಸ್ಥೆ ಜೊತೆಗಿನ ಸುದೀಪ್ ಒಡನಾಟ ನೋಡಿ, ಶೀಘ್ರದಲ್ಲೇ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಇನ್ನು ಸುದೀಪ್ ಕೂಡ 1 ವರ್ಷದ ಗ್ಯಾಪ್‌ನಲ್ಲಿ 3 ಕತೆಗಳನ್ನು ಫೈನಲ್ ಮಾಡಿರುವುದಾಗಿ ಈ ಹಿಂದೆ ಹೇಳಿದ್ದರು. ಇದನ್ನೂ ಓದಿ:ಖ್ಯಾತನಟ ದಳಪತಿ ವಿಜಯ್ ಪುತ್ರ ಈಗ ಡೈರೆಕ್ಟರ್: ಲೈಕಾ ನಿರ್ಮಾಣ

ಅದರಂತೆ ಒಂದು ಚಿತ್ರ ಕಿಚ್ಚ 46, ತಮಿಳಿನ ನಿರ್ದೇಶಕ ವಿಜಯ್ ಕಾರ್ತಿಕೇಯನ್ (Vijay Karthikeyan) ಜೊತೆ ಮಾಡ್ತಿದ್ದಾರೆ. ಫಸ್ಟ್ ಶೆಡ್ಯೂಲ್ ಕೂಡ ಮುಗಿದಿದೆ. ಬರ್ತ್ಡೇ ನಂತರ ಮತ್ತೆ ಈ ಚಿತ್ರತಂಡವನ್ನ ಸುದೀಪ್ ಸೇರುತ್ತಾರೆ. ಇದರ ಜೊತೆ ಕಿಚ್ಚ 47ಗೆ (Kichcha 47) ಹೊಂಬಾಳೆ ಜೊತೆ ಸುದೀಪ್ ಕೈಜೋಡಿಸಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.

ಸೆಪ್ಟೆಂಬರ್ 2ರಂದು ಸುದೀಪ್ ನಟನೆಯ 46ನೇ ಸಿನಿಮಾ ಲುಕ್ ಮತ್ತು ಟೈಟಲ್ ರಿವೀಲ್ ಆಗೋದರ ಜೊತೆಗೆ 47ನೇ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಕೂಡ ಸಿಗಲಿದೆ ಎಂದು ಹೇಳಲಾಗುತ್ತಿದೆ. ಹೊಂಬಾಳೆ ಸಂಸ್ಥೆ ಜೊತೆಗಿನ ಸುದೀಪ್ ಒಡನಾಟ ಈ ಸುದ್ದಿಗೆ ಪುಷ್ಟಿ ನೀಡಿದೆ. ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜಾ? ಎಂಬುದನ್ನ ಕಾದುನೋಡಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್