ದರ್ಶನ್ ಜೊತೆಗಿನ ಸಮಸ್ಯೆ ಬೇಗ ಹುಡುಕಿಕೊಳ್ಳಿ ಅಂತಿದ್ದಾರೆ ಸುದೀಪ್ ಫ್ಯಾನ್ಸ್

Public TV
1 Min Read

ಭಿಮಾನಿಗಳ ಜೊತೆ ಸಂವಾದಿಸುವುದಕ್ಕಾಗಿ ಕಿಚ್ಚ ಸುದೀಪ್ (Sudeep) ಇಂದು ‘ಆಸ್ಕ್ ಮಿ ಎನಿಥಿಂಗ್’ ಎಕ್ಸ್ ಪೋಸ್ಟ್ ಮಾಡಿದ್ದರು. ಅಲ್ಲಿ ಸಾಕಷ್ಟು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಸುದೀಪ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದರು. ಅದರಲ್ಲೊಬ್ಬ ಅಭಿಮಾನಿ ದರ್ಶನ್ ಅವರ ಕುರಿತಾಗಿ ಪ್ರಶ್ನೆ ಮಾಡಿದ್ದ.

ದರ್ಶನ್ (Darshan) ಕುರಿತಾಗಿ ಒಬ್ಬ ಅಭಿಮಾನಿ ಪ್ರಶ್ನೆ ಕೇಳುತ್ತಿದ್ದಂತೆಯೇ, ಅಂಥದ್ದೇ ಮತ್ತೊಂದು ಪ್ರಶ್ನೆ ಕೂಡ ತೇಲಿ ಬಂತು. ಹಾಗಾಗಿ ಅಭಿಮಾನಿ ಕೇಳಿದ ಪ್ರಶ್ನೆಗೆ ಸಖತ್ತಾಗಿಯೇ ಉತ್ತರ ನೀಡಿದ್ದಾರೆ ಸುದೀಪ್.  ಎಲ್ಲರಿಗೂ ಗೊತ್ತಿರುವಂತೆ ಸುದೀಪ್ ಮತ್ತು ದರ್ಶನ್ ಸ್ನೇಹದಲ್ಲಿ ಬಿರುಕಿದೆ. ಅದು ಗೊತ್ತಿರೋ ವಿಚಾರ. ಹಾಗಾಗಿ ಅದೇ ಕುರಿತಂತೆ ಅಭಿಮಾನಿ ಪ್ರಶ್ನೆ ಕೇಳಿದ್ದರು.

ಸರ್ ನಿಮ್ದು ಮತ್ತೆ ದರ್ಶನ್ ಅವರದು ಸಮಸ್ಯೆ ಯಾವಾ ಸಾಲ್ವ್ ಮಾಡ್ಕೋತೀರಾ ಎಂದು ನೇರವಾಗಿಯೇ ಅಭಿಮಾನಿ ಪ್ರಶ್ನೆ ಮಾಡಿದ್ದ. ಅದಕ್ಕೆ ಅಷ್ಟೇ ಮಾರ್ಮಿಕವಾಗಿ ಉತ್ತರಿಸಿದ್ದರು ಸುದೀಪ್. ಸಮಸ್ಯೆ ಏನು ಅಂತ ಇಬ್ಬರೂ ಹುಡುಕ್ತಾ ಇದ್ದೀವಿ ಎಂದು ಹೇಳಿ ಅಭಿಮಾನಿಗೆ ಶಾಕ್ ನೀಡಿದ್ದಾರೆ ಸುದೀಪ್.

 

ಅಂಬರೀಶ್ ಮತ್ತು ವಿಷ್ಣುವರ್ಧನ್ ನಂತರ ಕುಚಿಕು ಗೆಳೆಯರಂತಿದ್ದರು ದರ್ಶನ್ ಮತ್ತು ಸುದೀಪ್. ಅದ್ಯಾವ ಗಳಿಗೆಯಲ್ಲಿ ಅದೇನ್ ಆಗಿದೆಯೋ ಗೊತ್ತಿಲ್ಲ. ಈಗ ಇಬ್ಬರೂ ದೂರವಾಗಿದ್ದಾರೆ. ಆ ದೂರು ಯಾವುದು ಅಂತ ಈವೆರೆಗೂ ಗೊತ್ತಾಗಿಲ್ಲ. ಆದರೆ, ಸಮಸ್ಯೆ ಏನು ಅಂತ ಬೇಗ ಹುಡುಕಿಕೊಳ್ಳಿ ಅಂತಿದ್ದಾರೆ ಸುದೀಪ್ ಫ್ಯಾನ್ಸ್.

Share This Article