ಅಭಿನಯ ಚಕ್ರವರ್ತಿಗೆ 50ನೇ ಹುಟ್ಟುಹಬ್ಬದ ಸಂಭ್ರಮ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಇಂದು 50ನೇ ಹುಟ್ಟುಹಬ್ಬದ ಸಂಭ್ರಮ. ಸ್ಪರ್ಶ ಸಿನಿಮಾದಲ್ಲಿ ನಾಯಕ ನಟನಾಗಿ ಚಂದನವನಕ್ಕೆ ಪಾದರ್ಪಣೆ ಮಾಡಿದ ಕಿಚ್ಚ ಸುದೀಪ್ ಸದ್ಯ ಬಹುಭಾಷಾ ನಟರಾಗಿ ಮಿಂಚುತ್ತಿದ್ದಾರೆ.

sudeep

ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿರುವ ಸುದೀಪ್‍ರವರು ಮಂಜಪ್ಪ ಮತ್ತು ಸರೋಜ ದಂಪತಿಯ ಪುತ್ರ. ಸುದೀಪ್‍ರವರು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2003ರಲ್ಲಿ ಸುದೀಪ್‍ರವರು ತಮ್ಮ ಗೆಳತಿ ಪ್ರಿಯಾ ಜೊತೆ ಸಪ್ತಪದಿ ತುಳಿದರು. ಸದ್ಯ ಈ ಮುದ್ದಾದ ಜೋಡಿಗೆ ಇದೀಗ ಸಾನ್ವಿ ಎಂಬ ಪುತ್ರಿ ಇದ್ದಾರೆ.

sudeep

ಸುದೀಪ್‍ರವರಿಗೆ ಮೊದಲಿನಿಂದಲೂ ಕ್ರಿಕೆಟಿಗನಾಗಬೇಕೆಂಬ ಆಸೆ ಇತ್ತು. ಆದರೆ ಸುದೀಪ್ ಮುಖಮಾಡಿದ್ದು, ಮಾತ್ರ ಚಿತ್ರರಂಗದ ಕಡೆ. ಕನ್ನಡ ಚಿತ್ರರಂಗವು ಇಷ್ಟು ಎತ್ತರಕ್ಕೆ ಬೆಳಸಲು ಶ್ರಮಿಸಿದ ಹಲವಾರು ನಟರ ಮಧ್ಯೆ ಸುದೀಪ್ ಕೂಡ ಒಬ್ಬರು. ತಮ್ಮ ಸಿನಿ ಜರ್ನಿಯಲ್ಲಿ ಸಾಕಷ್ಟು ಏಳು ಹಾಗೂ ಬೀಳುಗಳನ್ನು ಕಂಡರೂ ಸುದೀಪ್ ಇದೀಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಾ, ಎಲ್ಲೆಡೆ ಕನ್ನಡಿಗರ ಪ್ರತಿಭೆಯನ್ನು ಬಿಂಬಿಸುತ್ತಿದ್ದಾರೆ. ಇದನ್ನೂ ಓದಿ: ಸುದೀಪ್‍ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ನೀರಜ್ ಚೋಪ್ರಾ

sudeep

ನಾಯಕ ನಟರಾಗಿ ಮಾತ್ರವಲ್ಲದೇ ಖಳ ನಾಯಕನ ಪಾತ್ರದಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡ ಸುದೀಪ್‍ಗೆ ಇದೀಗ ಕರ್ನಾಟಕದಲ್ಲಿ ಮಾತ್ರವಲ್ಲದೇ ಹಲವು ಚಿತ್ರರಂಗಗಳಲ್ಲಿಯೂ ಅಪಾರ ಅಭಿಮಾನಿ ಬಳಗವಿದೆ. ಸದ್ಯ ಸುದೀಪ್ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ 25 ವರ್ಷ ಪೂರೈಸಿದ್ದು, ಈ ಸಂಭ್ರಮವನ್ನು ದುಬೈನಲ್ಲಿ ಆಚರಿಸಿದ್ದರು. ಇದನ್ನೂ ಓದಿ:ಫಿನಾಲೆ ವೇದಿಕೆಯಲ್ಲಿ ಸುದೀಪ್‍ಗೆ ಬಿಗ್ ಸರ್ಪ್ರೈಸ್ ಕೊಟ್ಟ ರಘು ದೀಕ್ಷಿತ್, ರಾಜೇಶ್ ಕೃಷ್ಣನ್

Share This Article
Leave a Comment

Leave a Reply

Your email address will not be published. Required fields are marked *