ಒಂದೇ ಸಿನಿಮಾದಲ್ಲಿ ಸುದೀಪ್-ವಿನಯ್ ಗೌಡ? ಕಿಚ್ಚ ಏನಂದ್ರು?

Public TV
1 Min Read

ದೊಡ್ಮನೆ ಆಟಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. ಪ್ರತಾಪ್ ಮೊದಲ ರನ್ನರ್ ಅಪ್ ಆಗಿದ್ದು, 2ನೇ ರನ್ನರ್ ಅಪ್ ಆಗಿ ಸಂಗೀತಾ, 3ನೇ ರನ್ನರ್ ಅಪ್ ಆಗಿ ವಿನಯ್ (Vinay) ಸ್ಥಾನ ಪಡೆದಿದ್ದಾರೆ. ಇದರ ನಡುವೆ ವಿನಯ್ ಜೊತೆ ಸುದೀಪ್ (Sudeep) ಸಿನಿಮಾ ಮಾಡ್ತಾರಾ ಎಂಬುದಕ್ಕೆ ಉತ್ತರ ಸಿಕ್ಕಿದೆ.

‘ಬಿಗ್ ಬಾಸ್’ (Bigg Boss Kannada 10) ಮನೆಯ ವಿಲನ್ ಎಂದೇ ಫೇಮಸ್ ಆಗಿದ್ದ ವಿನಯ್ ಗೌಡ. ಈ ಸೀಸನ್‌ನ ಕೇಂದ್ರ ಬಿಂದು ಆಗಿದ್ದರು. ವಾಹಿನಿಯ ಟಿಆರ್‌ಪಿ ಪೀಸ್ ಎಂದು ಹೇಳಿದರೆ ತಪ್ಪಾಗಲಾರದು. ‘ವಿನಯ್- ಸಂಗೀತಾ (Sangeetha) ಇಲ್ಲದಿದ್ದರೆ ಈ ಸೀಸನ್ ಅಪೂರ್ಣ’ ಎಂದು ಸುದೀಪ್ ಹೇಳಿದ್ದರು. ಇದೆಲ್ಲದರ ನಡುವೆ ಅಭಿಮಾನಿಗಳು ತಮ್ಮ ಆಸೆಯೊಂದನ್ನು ಸುದೀಪ್ ಮುಂದೆ ಇಟ್ಟಿದ್ದಾರೆ. ಇದನ್ನೂ ಓದಿ:ಪ್ರತಾಪ್ ಮತ್ತು ನನ್ನದು ಅಕ್ಕ ತಮ್ಮ ಸಂಬಂಧ: ಸಂದರ್ಶನದಲ್ಲಿ ಸಂಗೀತಾ ಮಾತು

ಸೋಮವಾರ (ಜ.29) ‘ಆಸ್ಕ್ ಮೀ ಸೆಷನ್’ ಸೋಷಿಯಲ್ ಮೀಡಿಯಾದಲ್ಲಿ ನಡೆಸಿದ್ದರು. ಇದರಲ್ಲಿ ಅಭಿಮಾನಿಗಳ ಪ್ರಶ್ನೆಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಹಾಗೂ ವಿನಯ್ ಗೌಡ ಅವರನ್ನ ಒಂದು ಸಿನಿಮಾದಲ್ಲಿ ಒಟ್ಟಿಗೆ ನೋಡಲು ಬಯಸುತ್ತಿದ್ದೇವೆ. ಇದು ಸಾಧ್ಯವಾಗುತ್ತಾ ಸರ್? ಎಂದು ಅಭಿಮಾನಿಯೊಬ್ಬರು ಎಂಬುವರು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಕಿಚ್ಚ ಸುದೀಪ್, ಖಂಡಿತ. ವಿನಯ್ ಅವರದ್ದು ಅಮೇಜಿಂಗ್ ಪರ್ಸನಾಲಿಟಿ ಎಂದಿದ್ದಾರೆ. ಈ ಮೂಲಕ ವಿನಯ್ ಜೊತೆ ನಟಿಸಲು ಸಿದ್ಧ ಎಂದಿದ್ದಾರೆ.

ವಿನಯ್ ಈಗಾಗಲೇ ಸಾಕಷ್ಟು ಸೀರಿಯಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೊಡ್ಮನೆಯಿಂದ ಹೊರಬರುತ್ತಿದ್ದಂತೆ ಉತ್ತಮ ಸಿನಿಮಾ ಅವಕಾಶಗಳು ಹರಿದು ಬರುತ್ತಿವೆ.

Share This Article