ಗಂಡನಿಲ್ಲದ ವೇಳೆ ಜಮೀನ್ದಾರ್‌ಗೆ ಸುಚಿತ್ರಾ ಬುಲಾವ್; ಕಲಬುರಗಿ ಜಮೀನ್ದಾರ ಜೊತೆ 3 ವರ್ಷ ಲವ್ವಿ-ಡವ್ವಿ

1 Min Read

– ಸುಚಿತ್ರಾ ನೌಟಂಕಿ ಆಟ ಒಂದೊಂದೇ ಬಟಾಬಯಲು
– ಕಾರು, ಬೈಕ್‌ಗಳನ್ನು ಗಿಫ್ಟ್ ಆಗಿ ಕೊಡಿಸಿದ್ದ ಕಮಲಾಕರ್ ಭಟ್

ಕಾರವಾರ: ಜ್ಯೋತಿಷಿ ಕಮಲಾಕರ್ ಭಟ್ (Kamalakar Bhat) ಪ್ರಕರಣಕ್ಕೆ ಸಂಬಂಧಿಸಿದಂತೆ ಸುಚಿತ್ರಾಳ (Suchitra) ನೌಟಂಕಿ ಆಟ ಒಂದೊಂದೇ ಬಟಾಬಯಲಾಗುತ್ತಿದೆ. ಕಲಬುರಗಿಯ ಜಮೀನ್ದಾರನ ಜೊತೆ ಮೂರು ವರ್ಷ ಲವ್ವಿಡವ್ವಿಯಲ್ಲಿದ್ದ ವಿಚಾರವೂ ಬೆಳಕಿಗೆ ಬಂದಿದೆ.

ಕಲಬುರಗಿಯ ಜಮೀನ್ದಾರ ಶರಣಬಸಪ್ಪ ಜೊತೆ ಮೂರು ವರ್ಷದಿಂದ ಲಿವ್-ಇನ್‌ನಲ್ಲಿದ್ದ ಸುಚಿತ್ರಾ, ಅಪ್ಪು ಮೆಲೋಡಿಸ್ ಗುಲ್ಬರ್ಗ ಎಂದು ಆತನ ಹಣದಿಂದ ಆರ್ಕೆಸ್ಟ್ರಾ ಮಾಡಿಕೊಂಡಿದ್ದಳು. ಆತನೊಂದಿಗಿರುವ ಖಾಸಗಿ ಕ್ಷಣದ ಫೋಟೋ ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ಇದನ್ನೂ ಓದಿ: ಉ.ಕನ್ನಡ ಸಿದ್ದಾಪುರದಲ್ಲಿ ಕೊಲೆ ಕೇಸ್‌ – ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಪೊಲೀಸರ ವಶಕ್ಕೆ

ಕಲಬುರಗಿಗೆ ಹೋಗಿ ಆತನೊಂದಿಗೆ ಸುಚಿತ್ರಾ ಸುತ್ತಾಡುತ್ತಿದ್ದಳು. ಗಂಡನಿಲ್ಲದ ಸಂದರ್ಭದಲ್ಲಿ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಆತ ನೀಡಿದ ಹಣದಲ್ಲಿ ಸಿದ್ದಾಪುರದಲ್ಲಿ ಬಡ್ಡಿಗೆ ಹಣ ನೀಡುತ್ತಿದ್ದಳು. ಈ ವಿಷಯ ಜ್ಯೋತಿಷಿ ಕಮಲಾಕರ್ ಭಟ್‌ಗೆ ತಿಳಿದು ಇಬ್ಬರ ನಡುವೆ ಮನಸ್ತಾಪ ಮೂಡಿತ್ತು. ಕೊನೆಗೆ ಜಮೀನ್ದಾರನ ಬಿಟ್ಟು ಜ್ಯೋತಿಷಿ ಕಮಲಾಕರ್ ಭಟ್ ಕೈ ಹಿಡಿದಿದ್ದಳು. ಸುಚಿತ್ರಾ ಹಣದ ದಾಹಕ್ಕೆ ಕಾರ್, ಬೈಕ್‌ಗಳನ್ನ ಉಡುಗೊರೆಯಾಗಿ ಕಮಲಾಕರ್ ಭಟ್ ನೀಡಿದ್ದ.

ಪತ್ನಿಯ ಲಿವ್‌-ಇನ್‌ ರಿಲೇಷನ್‌ಗೆ ಬೇಸತ್ತು ಪತಿ ಮಹೇಶ್ ನಾಯ್ಕ ಜಗಳವಾಡಿದ್ದ. ಕೊನೆಗೆ ಆರು ತಿಂಗಳಿಂದ ಪತ್ನಿಯಿಂದ ದೂರವಿದ್ದ. ಸುಚಿತ್ರಾ-ಶರಣಬಸಪ್ಪ ಸೇರಿದಂತೆ ಹಲವರ ಸಂಬಂಧದ ಬಗ್ಗೆ ಪಬ್ಲಿಕ್ ಟಿವಿಗೆ ಆಕೆಯ ಪತಿ ಮಹೇಶ್ ನಾಯ್ಕ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್ – ಜೆಡಿಎಸ್ ಮುಖಂಡೆ ಪುತ್ರ ಮತ್ತೆರಡು ದಿನ ಪೊಲೀಸ್ ಕಸ್ಟಡಿಗೆ

Share This Article