Bengaluru HAL – ತೇಜಸ್‌ ಫೈಟರ್‌ಜೆಟ್‌ನಲ್ಲಿ ಹಾರಾಟ ನಡೆಸಿ ಗಮನ ಸೆಳೆದ ಮೋದಿ

Public TV
2 Min Read

ಬೆಂಗಳೂರು: ಇಲ್ಲಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (Hindustan Aeronautics Limited) ಶನಿವಾರ ಬೆಳಗ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ “(Narendra Modi) ತೇಜಸ್‌ ಫೈಟರ್‌ ಜೆಟ್‌ನಲ್ಲಿ ಹಾರಾಟ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

HALನಲ್ಲಿರುವ ರಕ್ಷಣಾ ವಲಯದ ಉತ್ಪಾದನಾ ಘಟಕ ಪರಿಶೀಲನೆ ನಡೆಸಿದ ಮೋದಿ ತೇಜಸ್‌ ಫೈಟರ್‌ ಜೆಟ್‌ಗಳ (Tejas Jets) ಸೌಲಭ್ಯ ಮೇಲ್ವಿಚಾರಣೆ ನಡೆಸಿದರು. ಬಳಿಕ ತೇಜಸ್‌ ಯುದ್ಧ ವಿಮಾನದ ಪರೀಕ್ಷಾರ್ಥವಾಗಿ ಹೆಚ್‌ಎಎಲ್‌ನಲ್ಲಿ ಒಂದು ಸುತ್ತು ಹಾರಾಟ ನಡೆಸಿ ಗಮನ ಸೆಳೆದರು. ಇದನ್ನೂ ಓದಿ: ಇದೆಂಥ ಕೆಲಸ ಮಾಡಿದ್ಲು ಈಕೆ – ದುಬೈಗೆ ಕರೆದುಕೊಂಡು ಹೋಗದಿದ್ದಕ್ಕೆ ಗಂಡನ ಮುಖಕ್ಕೆ ಗುದ್ದಿ ಕೊಂದೇಬಿಡೋದಾ!

ಈ ಸಂತಸವನ್ನು ಸೋಶಿಯಲ್‌ ಮೀಡಿಯಾ Xನಲ್ಲಿ ಹಂಚಿಕೊಂಡಿರುವ ಅವರು, ತೇಜಸ್‌ನಲ್ಲಿ ಒಂದು ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವವು ವಿಸ್ಮಯಕಾರಿಯಾಗಿ ಪುಷ್ಟೀಕರಿಸಿದೆ ಇದು ನಮ್ಮ ದೇಶದಲ್ಲಿ ಸ್ಥಳೀಯ ರಕ್ಷಣಾ ವಲಯಗಳ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ಗಣನೀಯವಾಗಿ ವಿಶ್ವಾಸ ಹೆಚ್ಚಿಸಿತು. ಜೊತೆಗೆ ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆಯೂ ಹೆಮ್ಮೆ ಮತ್ತು ಆಶಾವಾದವನ್ನು ಹೆಚ್ಚಿಸಿತು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹುತಾತ್ಮ ಯೋಧನ ತಾಯಿಯ ರೋಧನೆ ನಡುವೆ ರಾಜಕಾರಣಿಗಳ ಫೋಟೋಶೂಟ್- ನೆಟ್ಟಿಗರಿಂದ ಕ್ಲಾಸ್

ಮೋದಿ ಆಗಮನದ ವೇಳೆ ಎಚ್‌ಎಎಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ವೈಟ್‌ಫೀಲ್ಡ್ ಡಿಸಿಪಿ ನೇತೃತ್ವದಲ್ಲಿ ಪೊಲೀಸರ ಬಂದೋಬಸ್ತ್ ಮಾಡಲಾಗಿದೆ. 4 ಎಸಿಪಿ, 8 ಇನ್ಸ್ಪೆಕ್ಟರ್ ಸೇರಿ 500 ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ಹೈದರಾಬಾದನ್ನು ಭಾಗ್ಯನಗರ್ ಅಂತ ಮರುನಾಮಕರಣ: ಅಸ್ಸಾಂ ಸಿಎಂ

Share This Article