ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಮಾನವ ಹೃದಯ ಸಾಗಣೆ

Public TV
1 Min Read

ಬೆಂಗಳೂರು: ನಮ್ಮ ಮೆಟ್ರೋ ಮೂಲಕ ಯಶಸ್ವಿಯಾಗಿ ಮಾನವ ಹೃದಯವನ್ನು ಸಾಗಣೆ ಮಾಡಲಾಗಿದೆ. ಆಸ್ಟರ್‌ ಆರ್‌ವಿ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಸಕಾಲದಲ್ಲಿ ಹೃದಯ ಸಾಗಿಸಲಾಯಿತು.

ವೈದ್ಯಕೀಯ ತಂಡವು 7:32 ಗಂಟೆಗೆ ರೈಲು ಹತ್ತಿ 7:39 ಕ್ಕೆ ಬೊಮ್ಮಸಂದ್ರ ನಿಲ್ದಾಣ ತಲುಪಿದರು. ವೈದ್ಯಕೀಯ ತಂಡಕ್ಕೆ ನಮ್ಮ ಮೆಟ್ರೋದ ಭದ್ರತಾ ಅಧಿಕಾರಿಗಳು ಮತ್ತು ನಿಲ್ದಾಣದ ಸಿಬ್ಬಂದಿ ನೆರವಾದರು. ಬಳಿಕ 8:12 ಕ್ಕೆ ನಾರಾಯಣ ಹೃದಯಾಲಯಕ್ಕೆ ಹೃದಯ ರವಾನೆ ಮಾಡಲಾಯಿತು. ನಂತರ ಯಶಸ್ವಿಯಾಗಿ ರೋಗಿಗೆ ಹೃದಯ ಜೋಡಣೆ ಮಾಡಲಾಯಿತು.

ನಮ್ಮ ಮೆಟ್ರೋ ಮೂಲಕ ಐದನೇ ಬಾರಿಗೆ ಯಶಸ್ವಿಯಾಗಿ ಮಾನವ ಅಂಗಾಂಗ ಸಾಗಣೆ ಮಾಡಲಾಗಿದೆ. ಇದು ಬೆಂಗಳೂರಿನಲ್ಲಿ ಜೀವ ಉಳಿಸುವ ವೈದ್ಯಕೀಯ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ BMRCLನ ಬದ್ಧತೆಯನ್ನು ಪ್ರತಿಬಿಂಬಿಸಿದೆ.

Share This Article