ಟ್ರಂಪ್‌ ಸುಂಕ ರದ್ದುಗೊಳಿಸಿದ ಯುಎಸ್ ಸುಪ್ರೀಂ ಕೋರ್ಟ್ – ಭಾರತ ಫಸ್ಟ್‌ ರಿಯಾಕ್ಷನ್‌

1 Min Read

ನವದೆಹಲಿ/ವಾಷಿಂಗ್ಟನ್‌: ಯುಎಸ್ ಸುಪ್ರೀಂ ಕೋರ್ಟ್ (US Supreme Court) ಡೊನಾಲ್ಡ್‌ ಟ್ರಂಪ್‌ ಹೇರಿದ್ದ ಜಾಗತಿಕ ಸುಂಕಗಳನ್ನ (Tariffs) ರದ್ದುಗೊಳಿಸಿದ್ದರ ಕುರಿತು ಭಾರತ ಸರ್ಕಾರ ಮೊದಲ ಪ್ರತಿಕ್ರಿಯೆ ನೀಡಿದೆ. ಕೋರ್ಟ್‌ ತೀರ್ಪಿನಿಂದ ಹಿಡಿದು ಟ್ರಂಪ್‌ ಅವರು ನೀಡಿದ್ದ ಹೇಳಿಕೆ ವರೆಗಿನ ಎಲ್ಲ ಬೆಳವಣಿಗೆಗಳನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಭಾರತ ಸರ್ಕಾರ ಹೇಳಿದೆ.

ಪ್ರತಿ ಸುಂಕಗಳ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್‌ ತೀರ್ಪನ್ನು ಗಮನಿಸಿದ್ದೇವೆ. ಈ ಕುರಿತು ಅಮೆರಿಕ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ನಂತರ ಅಮೆರಿಕ (USA) ಆಡಳಿತ ಕೆಲವು ಕ್ರಮಗಳನ್ನೂ ಘೋಷಿಸಿದೆ. ಇದರಿಂದ ಆಗಬಹುದಾದ ಪರಿಣಾಮಗಳ ಕುರಿತು ಅಧ್ಯಯನ ಮಾಡುತ್ತಿದ್ದೇವೆ ಎಂದು ವಾಣಿಜ್ಯ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಟ್ರಂಪ್ ಟ್ಯಾರಿಫ್‌ ಗೆ ಭಾರೀ ಹಿನ್ನಡೆ – ಸುಂಕ ಹೇರಲು ಅಧಿಕಾರ ಇಲ್ಲ; ಯುಎಸ್‌ ಸುಪ್ರೀಂ ಕೋರ್ಟ್‌ ಚಾಟಿ

Trump Tariffs 1 

10% ಹೆಚ್ಚುವರಿ ಸುಂಕ ಘೋಷಣೆ
ಜಾಗತಿಕ ಸುಂಕಗಳನ್ನು ಅಸಂವಿಧಾನಿಕ ಎಂದು ಘೋಷಿಸಿದ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೆ ಸವಾಲು ಹಾಕಿದ್ದಾರೆ. ಸುಪ್ರೀಂ ತೀರ್ಪು ಬೆನ್ನಲ್ಲೇ ಹೊಸ ಟ್ಯಾರಿಫ್‌ ಟ್ರಂಪ್‌ ಘೋಷಿಸಿದ್ದಾರೆ.  ಇದನ್ನೂ ಓದಿ: ಅಮೆರಿಕ ಸುಪ್ರೀಂ ಕೋರ್ಟ್‌ ತೀರ್ಪಿಗೆ ಟ್ರಂಪ್‌ ಸವಾಲು – ಎಲ್ಲ ದೇಶಗಳ ಮೇಲೆ 10% ಹೆಚ್ಚುವರಿ ಟ್ಯಾರಿಫ್‌ ಘೋಷಣೆ

ಜಾಗತಿಕವಾಗಿ ಎಲ್ಲ ದೇಶಗಳ ಮೇಲೆ 10% ಹೆಚ್ಚುವರಿ ಟ್ಯಾರಿಫ್ ಹೇರಿಕೆ ಮಾಡಿದ್ದಾರೆ. ಸೆಕ್ಷನ್ 122 ರ ಅಡಿಯಲ್ಲಿ 10% ಜಾಗತಿಕ ಸುಂಕವನ್ನು ವಿಧಿಸುವ ಆದೇಶವನ್ನು ಟ್ರಂಪ್‌ ಹೊರಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಟ್ರೂಥ್‌ನಲ್ಲಿ ಈ ಬಗ್ಗೆ ಮಾಹಿತಿ ಟ್ರಂಪ್‌ ಮಾಹಿತಿ ಹಂಚಿಕೊಂಡಿದ್ದಾರೆ. ಈಗಿರುವ ಟ್ಯಾರಿಫ್ ಜೊತೆಗೆ 10% ಹೆಚ್ಚುವರಿ ಟ್ಯಾರಿಫ್ ವಿಧಿಸಲಾಗುತ್ತಿದೆ. ಈ ಕಡತಕ್ಕೆ ಸಹಿ ಹಾಕುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಆದ್ರೆ ಭಾರತದೊಂದಿಗೆ ಅಸ್ತಿತ್ವದಲ್ಲಿರುವ ವ್ಯಾಪಾರ ಚೌಕಟ್ಟು ಬದಲಾಗದೇ ಮುಂದುವರಿಯುತ್ತದೆ ಹೇಳಿದ್ದಾರೆ.

Share This Article