ಸೂರ್ಯನ ಅರ್ಧ ಆಯಸ್ಸು ಮುಕ್ತಾಯ – ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವರದಿಯಲ್ಲಿ ಏನಿದೆ?

Public TV
1 Min Read

ಬ್ರಸೆಲ್ಸ್: ಸೂರ್ಯನ ಅರ್ಧ ಆಯಸ್ಸು ಮುಕ್ತಾಯಗೊಂಡಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ತಿಳಿಸಿದೆ.

ಈಗ ಸುಮಾರು 4.57 ಶತಕೋಟಿ ವರ್ಷಗಳಷ್ಟು ತಲುಪಿದ್ದು ಸೂರ್ಯನಿಗೆ ಈಗ ಮಧ್ಯ ವಯಸ್ಸು ಎಂದು ಹೇಳಿದೆ. ಇದನ್ನೂ ಓದಿ: 17ರ ವಿದ್ಯಾರ್ಥಿನಿ ಮೇಲೆ 6 ಜನರಿಂದ ಅತ್ಯಾಚಾರ

ಇಎಸ್‌ಎ ಸಂಶೋಧನೆಯ ಪ್ರಕಾರ, ಆಗಾಗ್ಗೆ ಸೂರ್ಯನ ಸೌರ ಜ್ವಾಲೆಗಳು, ಪ್ಲಾಸ್ಮಾದಿಂದ ಹೊರಹೊಮ್ಮುವ ವಿಕಿರಣಗಳು (ಕರೋನಲ್ ಮಾಸ್ಕ್ ಎಜೆಕ್ಷನ್ – ಸಿಎಂಇಎಸ್) ಹಾಗೂ ಸೌರ ಬಿರುಗಾಳಿಯೊಂದಿಗೆ ಹೋಗುತ್ತಿರುವಂತೆ ಕಾಣುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆಯ `ಗಯಾ ಬಾಹ್ಯಾಕಾಶ ನೌಕೆ’ ಬಿಡುಗಡೆ ಮಾಡಿದ ದತ್ತಾಂಶದ ಮೂಲಕ ವಿಶ್ಲೇಷಿಸಲಾಗಿದೆ. ಇದು ಬ್ರಹ್ಮಾಂಡದ ವಿವಿಧ ನಕ್ಷತ್ರಗಳ ಜೀವಿತಾವಧಿಯನ್ನೂ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ವರದಿ ಹೇಳಿದೆ.

ಗಯಾ ನೌಕೆ ಬಿಡುಗಡೆ ಮಾಡಿದ 3ನೇ ಪ್ರಮುಖ ದತ್ತಾಂಶವೂ ಇದಾಗಿದ್ದು ನೂರಾರು ಮಿಲಿಯನ್ ನಕ್ಷತ್ರಗಳ ಆಂತರಿಕ ಗುಣಲಕ್ಷಣ ಮಾಹಿತಿಗಳ ಪೈಕಿ ಇದು ಒಂದಾಗಿದೆ. ಈ ದತ್ತಾಂಶವು ನಕ್ಷತ್ರಗಳ ತಾಪಮಾನ, ಗಾತ್ರ ಹಾಗೂ ದ್ರವ್ಯ ರಾಶಿಯ ಮಾಹಿತಿಯನ್ನೂ ಒಳಗೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಂದೆಯ ಹುಟ್ಟು ಹಬ್ಬದ ನೆನಪಿಗೆ ಹುಟ್ಟೂರಿನ ಆಸ್ಪತ್ರೆಗೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

ನಕ್ಷತ್ರಗಳ ಸ್ಪಷ್ಟ ಹೊಳಪು ಹಾಗೂ ಅವುಗಳ ಬಣ್ಣವನ್ನು ನಿಖರವಾಗಿ ಗಯಾ ನೌಕೆ ಮಾಪನ ಮಾಡುತ್ತದೆ. ಸೂರ್ಯ ಈಗ ಸುಮಾರು 4.57 ಶತಕೋಟಿ ವರ್ಷಗಳ ವಯಸ್ಸಿನೊಂದಿಗೆ ಮಧ್ಯವಯಸ್ಸಿನಲ್ಲಿದ್ದು, ಈ ಅಧ್ಯಯನದಿಂದ ನಕ್ಷತ್ರಗಳನ್ನು ಸರಿಯಾಗಿ ಗುರುತಿಸುವುದು ಮಾತ್ರವಲ್ಲದೇ, ಭವಿಷ್ಯದಲ್ಲಿ ಸೂರ್ಯ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಅಂದಾಜಿಸಬಹುದು ಎಂದು ವರದಿಯಾಗಿದೆ.

ಸೂರ್ಯನ ಮೇಲ್ಮೈಯಲ್ಲಿ ಬದಲಾವಣೆಗಳು ಕಂಡುಬಂದಂತೆ ಕೆಂಪು ದೈತ್ಯ ನಕ್ಷತ್ರವಾಗಿ ಹೊರಹೊಮ್ಮುತ್ತದೆ. ಈ ವೇಳೆ ಎಷ್ಟು ದ್ರವ್ಯ ರಾಶಿಯನ್ನು ಹೊಂದಿರುತ್ತದೆ ಅದರ ರಾಸಾಯನಿಕ ಸಂಯೋಜನೆಯ ಆಧಾರದ ಮೇಲೆ ತನ್ನ ಮೇಲ್ಮೈ ತಾಪಮಾನವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *