ಟ್ಯೂಷನ್‍ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳ ಕಿಡ್ನ್ಯಾಪ್

Public TV
1 Min Read

ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಕಿಡ್ನ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹೊರಗಡೆ ಹೋಗುವ ಮಕ್ಕಳು ವಾಪಸ್ ಮನೆಗೆ ಬರುವುದು ಡೌಟ್ ಆಗಿದೆ. ಆದ್ದರಿಂದ ಪೋಷಕರು ಸಹ ತಮ್ಮ ಮಕ್ಕಳನ್ನು ಹೊರಗಡೆ ಕಳುಹಿಸಲು ಭಯಪಡುವಂತಹ ಸ್ಥಿತಿ ಎದುರಾಗಿದೆ.

ಹೌದು. ಮಂಗಳವಾರ ಸಂಜೆ ಅಮೃತಹಳ್ಳಿ ಪೊಲೀಸ್ ಠಾಣೆ ಪಕ್ಕದಲ್ಲೇ ಇರುವ ಎಜು ಬಾಂಡ್ ಟ್ಯಟೋರಿಯಲ್ಸ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ಟ್ಯೂಷನ್‍ಗೆ ಹೋಗಿದ್ದರು. ಈ ವೇಳೆ ಟ್ಯೂಷನ್ ಸೆಂಟರ್ ಒಳಗೆ ಬಂದ ಉದ್ಯಮಿ ಕೃಷ್ಣಮೂರ್ತಿ ಹಾಗೂ ಅನಿನಾಶ್ ಎಂಬವರು ನಮಗೆ ಪರಿಚಯಸ್ಥ ಹುಡುಗರು ಸ್ವಲ್ಪ ಕೆಲಸ ಇದೆ ಕಳಿಸಿಕೊಡಿ ಅಂತ ಇಬ್ಬರು ವಿದ್ಯಾರ್ಥಿಗಳನ್ನು ತಮ್ಮ ಇನ್ನೋವಾ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಅನಿನಾಶ್ ಹೇಳಿದ್ದಾರೆ.

ಜಕ್ಕೂರಿನಲ್ಲಿ ಉದ್ಯಮಿ ಕೃಷ್ಣಮೂರ್ತಿ ನಿವಾಸದ ಎದುರು ಸೈಕಲ್ ಕಳ್ಳತನವಾಗಿತ್ತು. ಆ ಸೈಕಲ್‍ನ್ನು ವಿದ್ಯಾರ್ಥಿಗಳಾದ ಭಾಸ್ಕರ್, ವಿನೋದ್ ಕದ್ದಿದ್ದಾರೆ ಎಂದು ಅನುಮಾನಗೊಂಡ ಕೃಷ್ಣಮೂರ್ತಿ, ಇಬ್ಬರನ್ನು ಕಿಡ್ನ್ಯಾಪ್ ಮಾಡಿ ಮನೆಯೊಂದರಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದ. ತನಿಖೆ ನಡೆಸಿದ ಅಮೃತಳ್ಳಿ ಪೊಲೀಸರು ಉದ್ಯಮಿ ಕೃಷ್ಣಮೂರ್ತಿ, ಮತ್ತೊಬ್ಬ ಆರೋಪಿ ಅವಿನಾಶ್‍ನನ್ನು ಬಂಧಿಸಿದ್ದಾರೆ ಎಂದು ಈಶಾನ್ಯ ವಲಯ ಡಿಸಿಪಿ ಕಲಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *