ಮಣಿಪಾಲ್ | ಮದ್ಯದ ಅಮಲಿನಲ್ಲಿ ಬಟ್ಟೆ ಹರಿಯುವಂತೆ ಹೊಡೆದಾಡಿಕೊಂಡ ವಿದ್ಯಾರ್ಥಿಗಳು!

Public TV
0 Min Read

ಉಡುಪಿ: ಮದ್ಯದ ಅಮಲಿನಲ್ಲಿ ಎರಡು ವಿದ್ಯಾರ್ಥಿಗಳ (Students) ಗುಂಪು ಬಡಿದಾಡಿಕೊಂಡ ಘಟನೆ ಮಣಿಪಾಲ್‍ನ (Manipal) ಕಾಯಿನ್ ಸರ್ಕಲ್ ಬಳಿ ನಡೆದಿದೆ.

ಬಾರ್ ಒಂದರ ಮುಂದೆ ಮದ್ಯದ ಅಮಲಿನಲ್ಲಿದ್ದ ವಿದ್ಯಾರ್ಥಿಗಳು ರಂಪಾಟ ನಡೆಸಿದ್ದಾರೆ. ಗಲಾಟೆಯಲ್ಲಿ ಓರ್ವ ವಿದ್ಯಾರ್ಥಿಯ ಬಟ್ಟೆ ಹರಿದು ಹೋಗುವವರೆಗೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಹೊಡೆದಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ವಿದ್ಯಾರ್ಥಿಗಳ ಹೊಡೆದಾಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮಣಿಪಾಲ್ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article