ಬಸ್ಸಿಗಾಗಿ ಹೆದ್ದಾರಿ ಬಂದ್‌ ಮಾಡಿ ಸುವರ್ಣ ಸೌಧದ ಮುಂಭಾಗ ವಿದ್ಯಾರ್ಥಿಗಳಿಂದ ದಿಢೀರ್‌ ಪ್ರತಿಭಟನೆ

Public TV
1 Min Read

ಬೆಳಗಾವಿ: ಬಸ್ಸಿಗಾಗಿ ಆಗ್ರಹಿಸಿ ಬೆಂಗಳೂರು – ಪುಣೆ (Bengaluru-Pune) ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ವಿದ್ಯಾರ್ಥಿಗಳ ಪ್ರತಿಭಟನೆ (Students Protest) ನಡೆಸಿದ ಘಟನೆ ಬುಧವಾರ ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ನಡೆದಿದೆ.

ಬೆಳಗಾವಿ (Belagavi) ತಾಲೂಕಿನ ಕೊಂಡಸಕಪ್ಪ ಗ್ರಾಮದ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಬಸ್ಸು ಬಿಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಏಕಾಏಕಿ ಇಂದು ರಸ್ತೆ ತಡೆ ಮಾಡಿ ತಮ್ಮೂರಿಗೆ ಬಸ್ ಬಿಡುವಂತೆ ಒತ್ತಾಯಿಸಿದರು. ಇದನ್ನೂ ಓದಿ: ಸರಿಯಾದ ಸಮಯಕ್ಕೆ ಬಾರದ ಬಸ್; ನಿತ್ಯ ಕುದುರೆ ಏರಿ ಶಾಲೆಗೆ ಹೋಗ್ತಿದ್ದಾನೆ ಬಾಲಕ

ಬೆಳಗ್ಗೆ ಸರಿಯಾದ ಸಮಯದಲ್ಲಿ ಬಸ್ಸು ಬಾರದೇ ಇದ್ದರೆ ಶಾಲೆ, ಕಾಲೇಜಿಗೆ ಹೋಗಲು ಅನಾನುಕೂಲ ಆಗುತ್ತಿದೆ.  ಹೀಗಾಗಿ ಸ್ ಬಿಡುವವರೆಗೆ ರಸ್ತೆ ಬಂದ್ ಮಾಡುವುದಾಗಿ ವಿದ್ಯಾರ್ಥಿಗಳ ಪೋಷಕರ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಿತ್ಯ 1.05 ಕೋಟಿ ಲೀಟರ್ ಹಾಲು – KMF ಇತಿಹಾಸದಲ್ಲೇ ಮೊದಲ ಬಾರಿಗೆ ಅತಿಹೆಚ್ಚು ಸಂಗ್ರಹ

ಹೆದ್ದಾರಿಯಲ್ಲಿ ಒಂದು ಕಿ.ಮೀ ಗೂ ಅಧಿಕ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರ ಭೇಟಿ ನೀಡಿ ಬಸ್ಸು ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು.

 

Share This Article