ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ- ತಾನೇ ಹೋಗಿ ಮೆಟ್ರೋ ಹಳಿಗೆ ತಲೆ ಕೊಟ್ಟ ವೀಡಿಯೋ ಲಭ್ಯ

Public TV
1 Min Read

ಬೆಂಗಳೂರು: ನಗರದ ಅತ್ತಿಗುಪ್ಪೆಯಲ್ಲಿರುವ ಮೆಟ್ರೋ ನಿಲ್ದಾಣದಲ್ಲಿ (Attiguppe Metro Station) ವಿದ್ಯಾರ್ಥಿ ಧೃವ್ ಠಕ್ಕರ್(19) ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

ಮೆಟ್ರೋ ನಿಲ್ದಾಣದ ಸಿಸಿಟಿವಿಯಲ್ಲಿ ವಿದ್ಯಾರ್ಥಿಯ ಸಂಪೂರ್ಣ ವೀಡಿಯೋ ಸೆರೆಯಾಗಿದ್ದು, ಇದೀಗ ಈ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕಳೆದ ಗುರುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ಘಟನೆ ನಡೆದಿತ್ತು.

ಸಿಸಿಟಿವಿಯಲ್ಲಿ ಏನಿದೆ..?: ವಿದ್ಯಾರ್ಥಿಯು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಾನೆ. ಹೀಗೆ ಬಂದವನೇ ಮೆಟ್ರೋ ಬರುತ್ತಿರುವುದನ್ನು ಕಂಡು ನಿಲ್ದಾಣದಿಂದ ಹಳಿಯತ್ತ ಇಳಿದಿದ್ದಾನೆ. ಬಳಿಕ ಮೆಟ್ರೋ ಹತ್ತಿರವಾಗುತ್ತಿದ್ದಂತೆಯೇ ಹಳಿಗೆ ತಲೆಕೊಟ್ಟು ಮಲಗಿದ್ದಾನೆ. ಇತ್ತ ಮೆಟ್ರೋ ಆತನ ಮೇಲೆಯೇ ಪಾಸಾಗಿದೆ. ಪರಿಣಾಮ ವಿದ್ಯಾರ್ಥಿಯ ರುಂಡ ಬೇರ್ಪಟ್ಟಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾನಸಿಕ ಖಿನ್ನತೆಯಿಂದಲೇ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿರುವುದು ತಿಳಿದುಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ಐಪಿಎಲ್ ಮ್ಯಾಚ್ ಪ್ರೇಕ್ಷಕರಿಗಾಗಿ ನಮ್ಮ ಮೆಟ್ರೋ ಅವಧಿ ವಿಸ್ತರಣೆ

Share This Article