ಬೆಂಗಳೂರು: ಕಾಲೇಜುಗಳಲ್ಲಿ ಮತ್ತೆ ಸ್ಟೂಡೆಂಟ್ ಎಲೆಕ್ಷನ್ (Student Elections) ಮಾಡಲು ಮುಂದಾಗಿರೋ ಸರ್ಕಾರದ ನಡೆಯನ್ನ ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ವಾಗತ ಮಾಡಿದ್ದಾರೆ.
ಪ್ರೆಸ್ ಕ್ಲಬ್ ಮಾಧ್ಯಮ ಸಂವಾದಲ್ಲಿ ಮಾತನಾಡಿದ ಅವರು, ಯುವಕರಿಗೆ ಇತ್ತೀಚೆಗೆ ಅವಕಾಶಗಳು ಸಿಕ್ತಿಲ್ಲ. ಹಿಂದೆ ಕಾಲೇಜು ಚುನಾವಣೆ ಇತ್ತು. ಅನೇಕ ಯುವಕರಿಗೆ ಅವಕಾಶ ಸಿಕ್ತಾ ಇತ್ತು. ಸಮಾಜದ ಬಗ್ಗೆ ಕಾಳಜಿ ಇಟ್ಟಿಕೊಂಡಿರೋ ಯುವ ಸಮೂಹ ಬರಬೇಕು. ಕಾಲೇಜ್ ಎಲೆಕ್ಷನ್ ಮರು ಕಳಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: 2028 ಕ್ಕೆ ಬಿಜೆಪಿ-ಜೆಡಿಎಸ್ 150 ಸ್ಥಾನ ಗೆಲ್ಲೋದು ಖಚಿತ: ನಿಖಿಲ್
ರಾಜಕೀಯ ಹಿನ್ನಲೆ ಇಲ್ಲದೆ ಇರೋರು ರಾಜಕೀಯಕ್ಕೆ ಬರಬೇಕು. ಕಾಲೇಜು ಎಲೆಕ್ಷನ್ ಒಳ್ಳೆ ವೇದಿಕೆ ಎಂದು ಕಾಲೇಜುಗಳಲ್ಲಿ ಚುನಾವಣೆ ಮಾಡೋ ಸರ್ಕಾರದ ನಿಲುವು ಸ್ವಾಗತ ಮಾಡಿದರು. ಇದನ್ನೂ ಓದಿ: ಜಿ ರಾಮ್ ಜಿ ಯೋಜನೆಯಲ್ಲಿ ಗ್ರಾಮ ಪಂಚಾಯತಿಗೆ ಹೆಚ್ಚಿನ ಅಧಿಕಾರ: ಬೊಮ್ಮಾಯಿ

