ಕಾರವಾರ: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಫಾಲ್ಸ್‌ನಲ್ಲಿ ಈಜಲು ಹೋಗಿ ಮುಳಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟ ಫಾಲ್ಸ್‌ನಲ್ಲಿ ನಡೆದಿದೆ.
ಶಿವೋಹಂ ಅನಂತ್ ತಿವಾರಿ (18)ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಮಣಿಪಾಲ್‌ನ ಎಮ್.ಐ.ಟಿಯಲ್ಲಿ ಬಿ.ಟೆಕ್ ಎರಡನೇ ಸೆಮಿಸ್ಟರ್ ಓದುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ 16-1 ಮುನ್ನಡೆ
ಭಾನುವಾರ (ಫೆ.15) ಬೆಳಿಗ್ಗೆ 30ಕ್ಕೂ ಹೆಚ್ಚು ಜನ ಬಿ.ಟೆಕ್ ಹಾಗೂ ಜರ್ನಲಿಸಂ ವಿದ್ಯಾರ್ಥಿಗಳು ಮಣಿಪಾಲ್‌ನಿಂದ ಪ್ರವಾಸಕ್ಕೆ ಬಂದಿದ್ದರು. ಹೊನ್ನಾವರ ಹಾಗೂ ಶಿರಸಿಯ ಮತ್ತಿಘಟ್ಟ ಭಾಗಕ್ಕೆ ವಿದ್ಯಾರ್ಥಿಗಳ ತಂಡ ತೆರಳಿತ್ತು. ಈ ವೇಳೆ ಕೆಲವು ವಿದ್ಯಾರ್ಥಿಗಳು ಶಿರಸಿಯ ಮತ್ತಿಘಟ್ಟ ಫಾಲ್ಸ್‌ಗೆ ತೆರೆಳಿದ್ದರು. ದಟ್ಟ ಕಾಡಿನಲ್ಲಿ ಇರುವ ಮತ್ತಿಘಟ್ಟ ಫಾಲ್ಸ್‌ನಲ್ಲಿ ನೀರಿಗಿಳಿದಾಗ ಈಜಲಾಗದೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕಲೆ-ಸಂಸ್ಕೃತಿಗೆ ಬಂಜಾರ ಸಮಾಜದ ಕೊಡುಗೆ ಅಪಾರ: ಎಂ.ಬಿ. ಪಾಟೀಲ್

