ಪರೀಕ್ಷೆ ಬರೆಯಲು ತಂದೆಯ ಕೈ ಹಿಡಿದು ತುಂಬಿ ಹರಿಯುತ್ತಿರುವ ನದಿ ದಾಟಿದ ವಿದ್ಯಾರ್ಥಿನಿ

Public TV
1 Min Read

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆ (Rain) ಸುರಿಯುತ್ತಿದ್ದು, ಒಂದಡೆ ಜನಜೀವನ ಅಸ್ತವ್ಯಸ್ತ ಆಗಿದೆ. ಮತ್ತೊಂದಡೆ ವಿದ್ಯಾರ್ಥಿನಿಯೊಬ್ಬಳು (Student) ಪ್ರಾಣದ ಹಂಗು ತೊರೆದು ಪರೀಕ್ಷೆ ಬರೆಯಲು ಉಕ್ಕಿ ಹರಿಯುತಿದ್ದ ನದಿ ದಾಟಿದ ಪ್ರಸಂಗ ನಡೆದಿದೆ.

ಜಿಲ್ಲೆಯ ಸೇಡಂ (Sedam) ತಾಲೂಕಿನ ಸಂಗಾವಿ (ಟಿ) ಗ್ರಾಮದ ಬಿಎ ಅಂತಿಮ ವರ್ಷದ ವಿಧ್ಯಾರ್ಥಿನಿ ರಾಣಿ ಪರೀಕ್ಷೆ ಬರೆಯಲು ತಂದೆಯ ಕೈ ಹಿಡಿದು ನದಿ ದಾಟಿದ್ದಾಳೆ. ಪರೀಕ್ಷೆ ಬರೆಯಲು ಸೇಡಂ ಪಟ್ಟಣಕ್ಕೆ ಹೋಗುವಾಗ ವಿದ್ಯಾರ್ಥಿನಿಯ ತಂದೆ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಮಗಳ ಕೈಹಿಡಿದು ಕಾಗಿಣಾ ನದಿ ದಾಟಿಲು ಹರಸಾಹಸಪಟ್ಟಿದ್ದಾರೆ. ಇದನ್ನೂ ಓದಿ: ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ

ನಿರಂತರ ಮಳೆಯಿಂದ ವಿವಿಧಡೆ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಾಗಿಣ ನದಿಯು ಮೈದುಂಬಿ ಹರಿಯುತ್ತಿದ್ದು, ವಿದ್ಯಾರ್ಥಿನಿ ಅಪಾಯವನ್ನೂ ಲೆಕ್ಕಿಸದೇ ನದಿ ದಾಟಿ ಪರೀಕ್ಷೆ ಬರೆದಿದ್ದಾಳೆ. ಇದೀಗ ವಿದ್ಯಾರ್ಥಿನಿ ತಂದೆಯ ಕೈಹಿಡಿದು ನದಿ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.

Share This Article