ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯನ್ನು ಪ್ರಿಯಕರ ಬರ್ಬರವಾಗಿ ಹತ್ಯೆ (Murder) ಮಾಡಿದ ಘಟನೆ ಶ್ರೀರಾಮಪುರ ರೈಲ್ವೇ ಟ್ರ‍್ಯಾಕ್ ಬಳಿ ನಡೆದಿದೆ.
ಯಾಮಿನಿ ಪ್ರಿಯ (20) ಕೊಲೆಯಾದ ವಿದ್ಯಾರ್ಥಿನಿ. ಬನಶಂಕರಿಯ ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿನಿ (Student) ಇಂದು ಬೆಳಗ್ಗೆ ಸ್ವತಂತ್ರ್ಯಪಾಳ್ಯದಲ್ಲಿರುವ ಮನೆಯಿಂದ ಕಾಲೇಜಿಗೆ ತೆರಳಿದ್ದಳು.
ಮಧ್ಯಾಹ್ನ ಕಾಲೇಜಿನಿಂದ (College) ಪರೀಕ್ಷೆ ಮುಗಿಸಿ ಮನೆಗೆ ಬರುತ್ತಿದ್ದಳು. ಮಲ್ಲೇಶ್ವರದ ಮಂತ್ರಿ ಮಾಲ್ ಬಳಿ ಇಳಿದು ರೈಲ್ವೆ ಟ್ರ‍್ಯಾಕ್ ಬಳಿ ಹೋಗ್ತಿದ್ದಾಗ ಹಿಂದಿನಿಂದ ಬಂದು ವಿಘ್ನೇಶ್ ಕತ್ತುಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದನೆ. ಇದನ್ನೂ ಓದಿ: ಚಿಕ್ಕಮಗಳೂರು | ಸಂಸಾರದಲ್ಲಿ ಕಲಹ – ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ
ಯಾಮಿನಿಯ ಹಿಂದೆ ಪ್ರಿಯಕರ ವಿಘ್ನೇಶ್ ಬಿದ್ದಿದ್ದ. ವಿಫ್ನೇಶ್ ಪ್ರೀತಿಯನ್ನು ಯಾಮಿನಿ ತಿರಸ್ಕರಿಸಿದ್ದಳು. ಇಂದು ಮನೆಗೆ ಹೋಗುತ್ತಿದ್ದಾಗ ವಿಘ್ನೇಶ್ ಯಾಮಿನಿಯನ್ನು ಹಿಂಬಾಲಿಸಿದ್ದಾನೆ. ಇದನ್ನೂ ಓದಿ: ಮಹೇಂದ್ರ ರೆಡ್ಡಿಗೆ ಬೇರೆ ಯುವತಿ ಜೊತೆ ಸಂಬಂಧ ಶಂಕೆ – ವೈದ್ಯೆ ಕೃತಿಕಾ ಸಾವಿನ ಹಿಂದೆ ಅವಳ ನೆರಳು?
ರೈಲ್ವೇ ಟ್ರ‍್ಯಾಕ್ ಬಳಿ ಬರುವಾಗ ಕಣ್ಣಿಗೆ ಖಾರದ ಪುಡಿ ಹಾಕಿ ಮನಸೋ ಇಚ್ಚೆ ದಾಳಿ ನಡೆಸಿದ್ದಾನೆ. ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದರಿಂದ ತೀವ್ರ ರಕ್ತಸ್ರಾವದಿಂದ ಯಾಮಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಶ್ರೀರಾಂಪುರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದೇ ಸ್ವತಂತ್ರ್ಯಪಾಳ್ಯದ ನಿವಾಸಿ ವಿಘ್ನೇಶ್ ಕೆಲ ವರ್ಷಗಳಿಂದ ಯಾಮಿನಿ ಪ್ರಿಯ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ಒಮ್ಮೆ ಈಕೆಗೆ ಬಲವಂತವಾಗಿ ತಾಳಿ ಕೂಡ ಕಟ್ಟಿದ್ದ. ಇಷ್ಟವಿಲ್ಲದ ಯಾಮಿನಿ ಪಾಗಲ್ ಪ್ರೇಮಿಯ ತಾಳಿ ಕಿತ್ತೆಸೆದು ಈತನನ್ನ ದೂರ ಇಟ್ಟಿದ್ದ. ಈತನ ಮೇಲೆ ಈ ಹಿಂದೆ ಮಾರ್ಕೆಟ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.