ಹಾದಿ ಬೀದಿಯಲ್ಲಿ ಹುಡುಗಿಯರನ್ನ ರೇಗಿಸಿದ್ರೆ 2 ವರ್ಷ ಜೈಲು..!

Public TV
1 Min Read

ಲಂಡನ್: ಇನ್ಮುಂದೆ ಹಾದಿ-ಬೀದಿಗಳಲ್ಲಿ ಹುಡುಗಿಯರು, ಮಹಿಳೆಯರನ್ನ (Women) ರೇಗಿಸಿದ್ರೆ, ಅಣಕಿಸುವುದು, ರಸ್ತೆ ಅಡ್ಡಗಟ್ಟುವುದು ಅಥವಾ ಲೈಂಗಿಕ ಕಿರುಕುಳ ನೀಡಿದ್ರೆ 2 ವರ್ಷದ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಬ್ರಿಟನ್ (UK) ಗೃಹ ಸಚಿವಾಲಯ ಹೇಳಿದೆ.

ಮಹಿಳೆಯರು ಹಾಗೂ ಹುಡುಗಿಯರಿಗೆ ಕಿರಕುಳ ನೀಡುವುದು ಬೆಂಬಲಿತ ಯೋಜನೆಗಳ ಅಡಿಯಲ್ಲಿ ಅಪರಾಧವಾಗುತ್ತದೆ ಅಂತಹವರಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಲಾಗುವುದು. ಪ್ರತಿಯೊಬ್ಬ ಮಹಿಳೆಯೂ ತಮ್ಮ ಬೀದಿಗಳಲ್ಲಿ ನಡೆಯಲು ಅವರಿಗೆ ಸುರಕ್ಷಿತವಾಗಿದೆ ಅನ್ನೋ ಭಾವನೆ ಬರಬೇಕು. ಅದಕ್ಕಾಗಿ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಗೃಹಚಿವಾಲಯದ ಸುಯೆಲ್ಲಾ ಬ್ರಾವರ್ಮನ್ (Suella Braverman) ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ವ್ಯವಸ್ಥೆ ಸಾಂವಿಧಾನಿಕರಣಗೊಳಿಸಲು ಒತ್ತಾಯ – ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ

ಲೈಂಗಿಕ ಕಿರುಕುಳವು ಈಗಾಗಲೇ ಕಾನೂನುಬಾಹಿರವಾಗಿದೆ. ಇದರ ಹೊರತಾಗಿಯೂ ಹಾದಿ, ಬೀದಿಗಳಲ್ಲಿ ಕಿರಕುಳ ನೀಡುತ್ತಿರುವುದು ಗಮನಕ್ಕೆ ಬರುತ್ತಿದೆ. ಈ ಹೊಸ ಕ್ರಮ ಕೈಗೊಳ್ಳುವುದರಿಂದ ಸೌರ್ವಜನಿಕರು ಹಾಗೂ ಮಹಿಳೆಯರು ಪೊಲೀಸರಿಗೆ (Police) ಬೇಗನೇ ದೂರು ನೀಡಲು ಉತ್ತೇಜಿಸುತ್ತದೆ ಎಂದು ಭಾವಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಗರ್ಭಿಣಿ, ವೃದ್ಧನ ಮೇಲೆ ಕಾರು ಹರಿಸಿದ ಭಾರತೀಯ ಮೂಲದ ಚಾಲಕನಿಗೆ 16 ವರ್ಷ ಜೈಲು ಶಿಕ್ಷೆ

ಸಮೀಕ್ಷೆಯ ಪ್ರಕಾರ ದೇಶದಲ್ಲಿ ರಾತ್ರಿವೇಳೆಯಲ್ಲಿ ಒಂಟಿಯಾಗಿ ಓಡಾಡುವ ಮೂರನೇ ಎರಡರಷ್ಟು ಮಹಿಳೆಯರು ಸುರಕ್ಷಿತ ಎಂದು ಭಾವಿಸುತ್ತಿಲ್ಲ. ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (CPS) ಪ್ರಕಾರ, 34 ವರ್ಷದೊಳಗಿನ ಮಹಿಳೆಯರು ಲೈಂಗಿಕ ಅಪರಾಧಗಳಿಗೆ ಗುರಿಯಾಗುವ ಸಾಧ್ಯತೆ ಇದೆ. ಆದರೂ ಪ್ರಕರಣ ವರದಿ ಮಾಡುವ ಸಾಧ್ಯತೆಗಳು ಕಡಿಮೆಯಿವೆ. ಆದ್ದರಿಂದ ಹಾದಿ, ಬೀದಿಗಳಲ್ಲಿ ಕಂಡುಬರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸರ್ಕಾರ ಹೊಸ ಕಾನೂನು ನಿಯಮವನ್ನು ಜಾರಿಗೊಳಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *