ರಷ್ಯಾದ ಡೇಂಜರ್‌ ಸೇನೆಯಲ್ಲಿದ್ದಾರೆ ಕಲಬುರಗಿಯ ಮೂವರು – ನಮ್ಮನ್ನು ರಕ್ಷಿಸಿ ಎಂದ ಯುವಕರು

Public TV
2 Min Read

ಕಲಬುರಗಿ: ಯುದ್ಧ ಪೀಡಿತ ಉಕ್ರೇನ್‌ (Ukraine) ಗಡಿಯಲ್ಲಿ ಕಲಬುರಗಿಯ (Kalaburagi) ಮೂವರು ಯುವಕರು ಸಿಕ್ಕಿಬಿದ್ದಿದ್ದು, ನಮ್ಮನ್ನು ಕೂಡಲೇ ರಕ್ಷಿಸಬೇಬೇಕೆಂದು ಮನವಿ ಮಾಡಿದ್ದಾರೆ.

ತೆಲಂಗಾಣದ 22 ವರ್ಷದ ಯುವಕ ಮತ್ತು ಕಲಬುರಗಿಯ ಮೂವರು ವ್ಯಾಗ್ನರ್‌ (Wagner) ಪಡೆಯಲ್ಲಿ ಕೆಲಸ ಮಾಡುತ್ತಿದ್ದು ರಷ್ಯಾ ಗಡಿಯಲ್ಲಿ ಸಿಲುಕಿದ್ದಾರೆ. ನಮ್ಮನ್ನು ನಕಲಿ ಸೇನಾ ಉದ್ಯೋಗ ದಂಧೆಯಿಂದ ತಕ್ಷಣವೇ ರಕ್ಷಿಸಬೇಕು ಎಂದು ಮೊರೆ ಇಟ್ಟಿದ್ದಾರೆ.

ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮೊಹಮ್ಮದ್ ಸುಫಿಯಾನ್ ತನ್ನ ಕುಟುಂಬಕ್ಕೆ ಕಳುಹಿಸಿದ ವಿಡಿಯೋದಲ್ಲಿ ದಯವಿಟ್ಟು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.

ನಾವು ಹೈಟೆಕ್ ವಂಚನೆಗೆ ಬಲಿಯಾಗಿದ್ದೇವೆ. ನಮ್ಮ ಇಚ್ಛೆಗೆ ವಿರುದ್ಧವಾಗಿ ಉಕ್ರೇನ್‌ನೊಂದಿಗೆ ರಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಹೋರಾಡಲು ನಮ್ಮನ್ನು ಒತ್ತಾಯಿಸಲಾಗುತ್ತಿದೆ. ಸೈನ್ಯದ ಭದ್ರತಾ ಸಹಾಯಕ ಕೆಲಸದ ಭರವಸೆಯೊಂದಿಗೆ ನಾವು ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ಬಂದಿದ್ದೇವೆ. ನಂತರ ನಾವು ವಂಚನೆಗೆ ಒಳಗಾದ ವಿಚಾರ ತಿಳಿಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕಾರಣಿ ರಾಜುನನ್ನು ಕ್ಷಮಿಸಲ್ಲ: ಕಾನೂನು ಕ್ರಮಕ್ಕೆ ಮುಂದಾದ ತ್ರಿಶಾ

 

ಈ ಯುವಕರು ಆರಂಭದಲ್ಲಿ ದುಬೈನಲ್ಲಿ 30-40 ಸಾವಿರ ರೂ. ದುಡಿಯುತ್ತಿದ್ದರು. ಈ ವೇಳೆ ಓರ್ವ ಏಜೆಂಟ್‌ ಪರಿಚಯವಾಗಿದ್ದಾನೆ. ಆತ ರಷ್ಯಾದಲ್ಲಿ 2 ಲಕ್ಷ ರೂ. ಸಂಬಳ ನೀಡಲಾಗುವುದು ಎಂದು ಆಸೆ ತೋರಿಸಿದ್ದ. ಈತನ ಮಾತಿಗೆ ಮರಳಾಗಿ ನವೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ಇವರು ಡಿಸೆಂಬರ್‌ನಲ್ಲಿ ರಷ್ಯಾಗೆ ತೆರಳಿದ್ದರು.

4 ಮಂದಿ ಅಲ್ಲದೇ ದೇಶದ 60 ಮಂದಿ ರಷ್ಯಾದಲ್ಲಿ ಇದ್ದಾರೆ. ಇವರು ರಷ್ಯಾದ ಖಾಸಗಿ ಸೇನೆ ವ್ಯಾಗ್ನರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ರಷ್ಯಾ ಭಾಷೆಯಲ್ಲಿರುವ ಒಪ್ಪಂದ ಪತ್ರಕ್ಕೆ ಇವರೆಲ್ಲ ಸಹಿ ಹಾಕಿ ಹಾಕಿದ್ದಾರೆ.

ವಾಗ್ನಾರ್‌ ಸೇನೆಯಲ್ಲಿರುವ ಸುಫಿಯಾನ್‌ ಮಹಾರಾಷ್ಟ್ರದಲ್ಲಿರುವ ಸಹೋದರನಿಗೆ ಮೊಬೈಲ್‌ ಕರೆ ಮಾಡಿ ತಿಳಿಸಿದ ಬಳಿಕ ಈ ಉದ್ಯೋಗ ವಂಚನೆ ಜಾಲ ಬೆಳಕಿಗೆ ಬಂದಿದೆ. ಇದನ್ನೂ ಓದಿ: ನಟ ದರ್ಶನ್ ಹೇಳಿಕೆ ಖಂಡಿಸಿ ದೂರು: ಕ್ಷಮೆ ಕೇಳಲು ಆಗ್ರಹ

15 ದಿನಗಳ ಹಿಂದೆ ನನ್ನ ಸಹೋದರ ಸುಫಿಯಾನ್ ನನ್ನೊಂದಿಗೆ ಮಾತನಾಡಿದ್ದ. ಅವರು ಉಕ್ರೇನ್ ಗಡಿಯಿಂದ ಕೇವಲ 40 ಕಿಮೀ ದೂರದಲ್ಲಿದ್ದಾರೆ. ನಮ್ಮ ಇಚ್ಛೆಗೆ ವಿರುದ್ಧವಾಗಿ ಯುದ್ಧಕ್ಕೆ ಕಳುಹಿಸಲಾಗಿದೆ. ನಾವು ಏಜೆಂಟ್‌ನಿಂದ ಮೋಸ ಹೋಗಿದ್ದೇವೆ ಎಂದು ಸೈಯದ್ ಸಲ್ಮಾನ್ ಹೇಳಿದ್ದಾರೆ. ಇದನ್ನೂ ಓದಿ: ಮದ್ಯಪಾನ ಮಾಡದಂತೆ ಪೋಷಕರಿಂದ ಬುದ್ದಿವಾದ – ಆತ್ಮಹತ್ಯೆಗೆ ಶರಣಾದ ಪುತ್ರ

 ನನ್ನ ಸಹೋದರನಿಗೆ ಒಂದು ಅವಕಾಶ ಸಿಕ್ಕಿದಾಗ ಅವರು ರಷ್ಯಾದ ಸೈನ್ಯಕ್ಕೆ ಸೇರಿದ ಮೊಬೈಲ್ ಫೋನ್ ಬಳಸಿ ನಮಗೆ ಸಂದೇಶ ರವಾನಿಸಿದ್ದಾರೆ. ನಮ್ಮನ್ನು ಭಾರತಕ್ಕೆ ಮರಳಲು ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದರು ಎಂದು ಸಹೋದರ ತಿಳಿಸಿದರು.

ವ್ಯಾಗ್ನರ್‌ ಪಡೆ ಎಂದರೇನು?
ವ್ಯಾಗ್ನರ್ ಪಡೆ (Wagner Mercenary) ಎಂಬುದು ಒಂದು ಖಾಸಗಿ ಸೇನೆಯಾಗಿದ್ದು, ಇದನ್ನು ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯಲಾಗುತ್ತದೆ. ಪುಟಿನ್ ಆಪ್ತ ಪ್ರಿಗೋಜಿನ್ ಈ ಪಡೆಯ ಮುಖ್ಯಸ್ಥನಾಗಿದ್ದ. ಇದು ಕಾನೂನು ಬಾಹಿರ ಸೇನಾ ಪಡೆಯಾಗಿದ್ದರೂ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿದೆ. ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳನ್ನು ಬೆಂಬಲಿಸುತ್ತಿದ್ದಾಗ 2014ರಲ್ಲಿ ಮೊದಲ ಬಾರಿಗೆ ಈ ರೀತಿಯ ಪಡೆ ಇದೆ ಎನ್ನುವುದು ಪ್ರಪಂಚಕ್ಕೆ ಗೊತ್ತಾಯಿತು. ಒಟ್ಟು 50 ಸಾವಿರ ಸೈನಿಕರು ಈ ಪಡೆಯಲ್ಲಿದ್ದಾರೆ ಎಂದು ವರದಿಯಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಡಾಯ ಎದ್ದಿದ್ದ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ.

 

Share This Article