ಮಾನಹಾನಿ ಕೇಸ್‌ನಲ್ಲಿ ನೀಲಿಚಿತ್ರ ನಟಿಗೆ ಸೋಲು – 1 ಕೋಟಿ ಪಾವತಿಸುವಂತೆ ಕೋರ್ಟ್ ಆದೇಶ

By
2 Min Read

ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ನೀಲಿಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ (Stormy Daniels) ಸೋಲಾಗಿದೆ. ಹೀಗಾಗಿ ಟ್ರಂಪ್ ಅವರ ವಕೀಲರಿಗೆ 121,000 ಡಾಲರ್ ಮೊತ್ತ (ಸುಮಾರು 1 ಕೋಟಿ ರೂ.) ಪಾವತಿಸುವಂತೆ ಕ್ಯಾಲಿಫೋರ್ನಿಯಾದ ಸರ್ಕ್ಯೂಟ್ ನ್ಯಾಯಾಲಯವು (Circuit Court) ಸೂಚಿಸಿದೆ.

ಟ್ರಂಪ್ ವಿರುದ್ಧ ಯಾವುದೇ ಆರೋಪ ಮಾಡದಂತೆ ಟ್ವಿಟ್ಟರ್‌ನಲ್ಲಿ ಅನಾಮಿಕ ವ್ಯಕ್ತಿ ಬೆದರಿಕೆ ಹಾಕಿದ್ದ. ತನ್ನ ವಿರುದ್ಧ ಟ್ರಂಪ್ ಕಡೆಯವರೇ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸ್ಟಾರ್ಮಿ ಡೇನಿಯಲ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಾಬೀತಾಗದ ಹಿನ್ನೆಲೆಯಲ್ಲಿ ಕೋರ್ಟ್ ಸ್ಟಾರ್ಮಿ ಡೇನಿಯಲ್ಸ್‌ಗೆ ದಂಡ ವಿಧಿಸಿದೆ.

ಸ್ಟಾರ್ಮಿ ಡೇನಿಯಲ್ಸ್ ಹಾಗೂ ಟ್ರಂಪ್ ನಡುವಿನ ಸಂಬಂಧ ಮರೆಮಾಚಲು ಆಕೆಗೆ ಹಣ ಪಾವತಿಸಲಾಗಿತ್ತು ಎಂಬ ಪ್ರಕರಣದಲ್ಲಿ ಬಂಧಿಸಿ, ವಿಚಾರಣೆ ಬಳಿಕ ಬಿಡುಗಡೆ ಮಾಡಲಾಗಿತ್ತು. ಮ್ಯಾನ್ ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ ಟ್ರಂಪ್ ಶರಣಾದರು. ಬಳಿಕ ಅವರನ್ನು ಬಂಧಿಸಿದ ಪೊಲೀಸರು ಬಿಗಿ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.

ಈ ವೇಳೆ ಟ್ರಂಪ್ ವಿರುದ್ಧ ಲೈಂಗಿಕ ಪ್ರಕರಣ ಮುಚ್ಚಿಡಲು ಹಣ ನೀಡಿದ್ದು, ಸೇರಿದಂತೆ ಹಣ ವಂಚನೆಯ 34 ದೋಷಾರೋಪಗಳನ್ನು ಹೊರಿಸಲಾಗಿತ್ತು. ಕಾನೂನು ಸಲಹಾ ಸಿಬ್ಬಂದಿ ಜೊತೆ ಬಂದಿದ್ದ ಟ್ರಂಪ್, ನಾನು ತಪ್ಪು ಮಾಡಿಲ್ಲ. 34 ಆರೋಪಗಳಲ್ಲಿ ನಾನು ನಿರಪರಾಧಿ ಎಂದು ವಾದಿಸಿದ್ದರು. ಇದನ್ನೂ ಓದಿ: ನೀಲಿಚಿತ್ರ ನಟಿಗೆ ಹಣ ವರ್ಗಾವಣೆ – ಡೊನಾಲ್ಡ್ ಟ್ರಂಪ್ ಬಂಧನ

ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಯಿತು. ವಿಚಾರಣೆಯ ನಂತರ ಟ್ರಂಪ್, ತಮ್ಮ ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಈ ಮೂಲಕ ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಆರೋಪ ಪ್ರಕರಣದ ವಿಚಾರಣೆ ಎದುರಿಸಿ ಬಂಧನಕ್ಕೆ ಒಳಗಾದ ಮೊದಲ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದಾರೆ.

ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಿರುವ ಟ್ರಂಪ್, ದೇಶಕ್ಕೆ ಇಂತಹ ಪರಿಸ್ಥಿತಿ ಬರುತ್ತೆ ಎಂದು ನಾನೆಂದು ಭಾವಿಸಿರಲಿಲ್ಲ. ದೇಶವಿಂದು ಕತ್ತಲಿನಲ್ಲಿದೆ, ದೇಶದ ಶಕ್ತಿ ಕ್ಷೀಣಿಸುತ್ತಿದೆ. ಜಗತ್ತು ಅಮೆರಿಕದತ್ತ ನೋಡಿ ನಗುತ್ತಿದೆ. ಆಫ್ಘನ್‌ನಿಂದ ಪಡೆಗಳ ವಾಪಸ್ ನಿರ್ಧಾರ ನಗೆಪಾಟಲಿಗೀಡಾಗಿದೆ. ದೇಶಾದ್ಯಂತ ಇರುವ ಅತಿವಾದ ಎಡಪಂಥೀಯ ಶಕ್ತಿಗಳು ನನ್ನ ದಮನಕ್ಕೆ ಪ್ರಯತ್ನಿಸ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: PlayBoyಗೆ ಪೋಸ್‌ ಕೊಟ್ಟ ಫ್ರೆಂಚ್‌ ಸಚಿವೆ ನಡೆಗೆ ವ್ಯಾಪಕ ವಿರೋಧ

ಏನಿದು ಕಳ್ಳ ಸಂಬಂಧ ಕೇಸ್?
ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

Share This Article