ಮಾತುಕತೆಯ ಮೂಲಕ ಯುದ್ಧ ನಿಲ್ಲಿಸಿ – ಝೆಲೆನ್ಸ್ಕಿಗೆ ಮೋದಿ ಸಲಹೆ

By
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಅಧ್ಯಕ್ಷ ಝೆಲೆನ್ಸ್ಕಿ ಅವರು ಸಂಘರ್ಷದ ಪರಿಸ್ಥಿತಿ, ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಮೋದಿ ಅವರಿಗೆ ವಿಸ್ತøತವಾಗಿ ವಿವರಿಸಿದರು. ಸಂಘರ್ಷ ನಡೆಯುತ್ತಿರುವುದು ಮತ್ತು ಅದರ ಪರಿಣಾಮವಾಗಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮೋದಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಹಿಂಸಾಚಾರವನ್ನು ನಿಲ್ಲಿಸಬೇಕೆಂಬ ತಮ್ಮ ಕರೆಯನ್ನು ಪುನರುಚ್ಚರಿಸಿದ ಮೋದಿ ಅವರು ಭಾರತವು ಸದಾ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಮತ್ತು ಉಭಯ ಪಕ್ಷಗಳ ನಡುವೆ ನೇರ ಮಾತುಕತೆಯ ಪರವಾಗಿ ನಿಂತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

ಉಕ್ರೇನ್‍ನಿಂದ 20,000ಕ್ಕೂ ಅಧಿಕ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಉಕ್ರೇನಿಯನ್ ಅಧಿಕಾರಿಗಳಿಗೆ ಮೋದಿ ಅವರು ಧನ್ಯವಾದ ಸಲ್ಲಿಸಿದರು. ಉಕ್ರೇನ್‍ನಲ್ಲಿ ಇನ್ನೂ ಉಳಿದಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆತೆಯ ಬಗ್ಗೆ ತೀವ್ರ ಕಾಳಜಿಯನ್ನು ವ್ಯಕ್ತಪಡಿಸಿದರು. ಅವರ ತ್ವರಿತ ಮತ್ತು ಸುರಕ್ಷಿತ ಸ್ಥಳಾಂತರ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು.

Share This Article
Leave a Comment

Leave a Reply

Your email address will not be published. Required fields are marked *