ಗುಂಡಿ ಅಗೆಯುವ ಹುಚ್ಚಾಟ ಬಂದ್‌ ಮಾಡಿ, ಅನಾಮಿಕನ ತನಿಖೆ ಮಾಡಿ: ವಿಜಯೇಂದ್ರ

Public TV
2 Min Read

– ಎಸ್‌ಐಟಿ ಮಧ್ಯಂತರ ವರದಿಗೆ ಆಗ್ರಹ
– ಯಾವ ಸಂಘಟನೆಗಳ ಒತ್ತಡವಿದೆ ಬಹಿರಂಗಪಡಿಸಿ

ಬೆಂಗಳೂರು: ಧರ್ಮಸ್ಥಳದ (Dharmasthala) ಮೇಲಿನ ಆರೋಪಗಳ ಕುರಿತ ತನಿಖೆ ನಡೆಸುತ್ತಿರುವ ಎಸ್ಐಟಿ (SIT) ಮಧ್ಯಂತರ ವರದಿ ಕೊಡಬೇಕು. ಮುಸುಕುಧಾರಿ ವ್ಯಕ್ತಿಯ ಬಗ್ಗೆ ತನಿಖೆ ಆಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ ಎಂದರಲ್ಲದೇ, ಎಸ್‌ಐಟಿ ತನಿಖೆಗೆ ಯಾರ ಒತ್ತಡ ಇದೆ? ಯಾವ ಸಂಘಟನೆಗಳ ಒತ್ತಡ ಇದೆ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಇದನ್ನೂ ಓದಿಧರ್ಮಸ್ಥಳ ಬುರುಡೆ ರಹಸ್ಯಇದೊಂದು ಖಾಲಿ ಡಬ್ಬದೊಡ್ಡ ಷಡ್ಯಂತ್ರ ನಡೆದಿದೆಡಿಕೆಶಿ

 

ಶ್ರೀ ಕ್ಷೇತ್ರದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಆಗಿದ್ದು ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತಿದೆ. ಕೋಟ್ಯಂತರ ಭಕ್ತರು ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದು ಹಿಟ್ ಆಂಡ್ ರನ್ ಕೇಸ್ ಆಗಬಾರದು ಎಂದು ತಿಳಿಸಿದರು. ಮುಸುಕುಧಾರಿಯ ಪೂರ್ವಾಪರ ಏನು? ಎಂದು ಪ್ರಶ್ನಿಸಿದ ಅವರು ಇದರ ಬಗ್ಗೆ ತನಿಖೆ ಮಾಡಬೇಕಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಅಲ್ಲ ಈಗ ಕನ್ಯಾಡಿಯ ಕಾಡಿನಲ್ಲೂ ಸಿಗಲಿಲ್ಲ ಯಾವುದೇ ಮೂಳೆ!

ವಿಶೇಷ ತನಿಖಾ ತಂಡದಿಂದ ತನಿಖೆ ಮಾಡುವುದಿಲ್ಲ ಅಂತ ಹೇಳಿದ ಮಾರನೇ ದಿನವೇ ಎಸ್‌ಐಟಿ ರಚಿಸಿದ್ದಾರೆ. ಹಾಗಿದ್ದರೆ ಯಾವ ಸಂಘಟನೆಗಳು ಸಿಎಂ ಮೇಲೆ ಒತ್ತಡ ಹಾಕಿದವು? ಆ ಮುಸುಕುಧಾರಿ ಯಾರು ಅಂತ ತನಿಖೆಗೂ ಮುನ್ನ ಯಾಕೆ ಗೊತ್ತು ಮಾಡಿಕೊಳ್ಳಲಿಲ್ಲ ಎಂದು ಕೇ

ಕೋಟ್ಯಂತರ ಭಕ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತ್ತಿದ್ದಾರೆ. ತನಿಖೆ ಸರಿಯಾಗಿ ಆಗಲಿ ಎಂಬುದಾಗಿ ನಾವು ಆಗ್ರಹ ಮಾಡಿದ್ದೇವೆ. ಆದರೆ, ಗುಂಡಿಗಳನ್ನು ಅಗೆಯುವ ಹುಚ್ಚಾಟ ನಡೆಯುತ್ತಿದೆ. ಜನರ ಧಾರ್ಮಿಕ ಭಾವನೆಗಳಿಗೆ ಘಾಸಿ ಆಗಿದೆ. ಇದು ಹಿಟ್ ಆಂಡ್ ರನ್ ಕೇಸ್ ಆಗಬಾರದು. ತನಿಖೆ ಸಂಬಂಧ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಈ ಮುಸುಕುಧಾರಿ ವ್ಯಕ್ತಿ, ಆತನ ಹಿಂದೆ ಇರುವ ಕೂಟ ಯಾವುದು ಎಂಬುದರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಶವ ಸಿಗಲಿಲ್ಲ ಎಂಬ ಕಾರಣ ನೀಡಿ ಕೇಸ್ ಮುಚ್ಚಿ ಹಾಕುವುದು ಬೇಡ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದರ ತನಿಖೆ ಆಗಬೇಕು ಎಂದು ವಿಜಯೇಂದ್ರ ಅವರು ಆಗ್ರಹಿಸಿದರು.

Share This Article