ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ

Public TV
1 Min Read

ಮಂಡ್ಯ: ನಾಳೆ (ಮಂಗಳವಾರ) ಮದ್ದೂರು (Maddur) ಪಟ್ಟಣ ಸಂಪೂರ್ಣ ಸ್ತಬ್ಧವಾಗಲಿದ್ದು, ಹಿಂದೂ ಮುಖಂಡರು ಸ್ವಯಂ ಘೋಷಿತ ಬಂದ್‌ಗೆ ಕರೆ ನೀಡಿದ್ದಾರೆ.

ಮದ್ದೂರಿನಲ್ಲಿ ಗಣೇಶ ವಿಸರ್ಜನೆ (Ganesha Procession) ಮೆರವಣಿಗೆ ವೇಳೆ ಕಲ್ಲು ತೂರಾಟ (Stone Pelting) ನಡೆಸಿದ್ದನ್ನು ವಿರೋಧಿಸಿ ಹಿಂದೂ ಮುಖಂಡರು ನಾಳೆ ಮದ್ದೂರು ಬಂದ್‌ಗೆ ಕರೆ ನೀಡಿದ್ದಾರೆ. ಅಲ್ಲದೇ ಬುಧವಾರ ಮದ್ದೂರು ತಾಲೂಕಿನ ಎಲ್ಲಾ ಗಣೇಶ ಮೂರ್ತಿಗಳನ್ನ ಮದ್ದೂರು ಪಟ್ಟಣದಲ್ಲಿ ತಂದು ಮೆರವಣಿಗೆ ಮಾಡಿ ವಿಸರ್ಜನೆ ಮಾಡಲು ತೀರ್ಮಾನಿಸಿದ್ದಾರೆ. ಡಿಜೆ ಸಮೇತ ಸಾಮೂಹಿಕ ಗಣೇಶ ವಿಸರ್ಜನೆ ನಡೆಸಲು ಕರೆ ನೀಡಲಾಗಿದೆ. ಇದನ್ನೂ ಓದಿ: 21 ಜನರನ್ನು ಬಂಧಿಸಲಾಗಿದೆ, ಮಸೀದಿ ಕಡೆಯಿಂದ ಕಲ್ಲು ಎಸೆದ ಬಗ್ಗೆ ಮಾಹಿತಿ ಇದೆ: ಚಲುವರಾಯಸ್ವಾಮಿ

ಕಲ್ಲು ತೂರಾಟದ ಬಳಿಕ ಮದ್ದೂರಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿರೋದು ಪೂರ್ವ ನಿಯೋಜಿತ. ಮಸೀದಿ ಕಡೆಯಿಂದ ಕಲ್ಲು ತೂರಾಟ ಮಾಡಲಾಗಿದೆ. ಕೂಡಲೇ ಮಸೀದಿಯ ಧರ್ಮಗುರು ಬಂಧನ ಮಾಡುವಂತೆ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಅಲ್ಲದೇ ಮಸೀದಿ ಸೀಜ್ ಮಾಡಿ ಎಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು ಈಗ ಮದ್ದೂರು: ಅಶೋಕ್ ಕಿಡಿ

ಇನ್ನು ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ ಪೊಲೀಸರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಈಗಾಗಲೇ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಡ್ಯ, ಬೆಂಗಳೂರು, ಮೈಸೂರು ಹಾಸನ, ರಾಮನಗರ, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಐಜಿ ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗುತ್ತಿದೆ. ಇದನ್ನೂ ಓದಿ: ಒತ್ತಡಕ್ಕೆ ಮಣಿದರೆ ನಾನೇ ಮದ್ದೂರಿಗೆ ಬರಬೇಕಾಗುತ್ತೆ – ಮಂಡ್ಯ ಎಸ್ಪಿಗೆ ಹೆಚ್‌ಡಿಕೆ ಖಡಕ್ ವಾರ್ನಿಂಗ್

Share This Article