ಹೂಸು ಮಾರಿ ವಾರಕ್ಕೆ 38 ಲಕ್ಷ ಸಂಪಾದನೆ ಮಾಡ್ತಿದ್ದಾಕೆ ಆಸ್ಪತ್ರೆಗೆ ದಾಖಲು

Public TV
1 Min Read

ವಾಷಿಂಗ್ಟನ್: ತನ್ನ ಹೂಸು ಮಾರಾಟ ಮಾಡಿ ಬರೋಬ್ಬರಿ 38 ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾಕೆ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.

31 ವರ್ಷದ ಸ್ಟೆಫನಿ ಮ್ಯಾಟಿಯೋ ಆಸ್ಪತ್ರೆಗೆ ದಾಖಲಾದ ಕಿರುತೆರೆ ಸೆಲೆಬ್ರಿಟಿ. ಈಕೆ ಅಪರಿಚಿತ ವ್ಯಕ್ತಿಗಳಿಗೆ ತನ್ನ ಹೂಸು ಮಾರಾಟ ಮಾಡಿ ವಾರಕ್ಕೆ ಬರೋಬ್ಬರಿ 38 ಲಕ್ಷ ರೂ. ಹಣ ಗಳಿಸುತ್ತಿದ್ದಳು. ಅಚ್ಚರಿಯಾದರೂ ಇದನ್ನು ನೀವು ನಂಬಲೇ ಬೇಕು. ಸದ್ಯ ಸ್ಟೆಫನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ನಾನು ಅತಿಯಾಗಿ ಗ್ಯಾಸ್ ಬಿಡುತ್ತಿದ್ದ ಕಾರಣ ಇದೀಗ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಹೂಸು ಬಿಡುವ ಕೆಲಸಕ್ಕೆ ನಿವೃತ್ತಿ ಘೋಷಿಸಿದ್ದೇನೆ. ನನಗೆ ಸ್ಟ್ರೋಕ್ ಆಗಿರಬಹುದು. ಇವು ನನ್ನ ಅಂತಿಮ ಕ್ಷಣಗಳು ಎಂದು ಭಾವಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

ತನ್ನ ಮೇಲಿದ್ದ ಬೇಡಿಕೆ ಉಳಿಸಿಕೊಳ್ಳಲು ಸ್ಟೆಫನಿ ವಾರಕ್ಕೆ ಸುಮಾರು 50 ಜಾರ್‍ಗಳಷ್ಟು ಹೂಸನ್ನು ಸಂಗ್ರಹಿಸಿದ್ದರು. ಅಲ್ಲದೆ ಹೆಚ್ಚು ಗ್ಯಾಸ್ ಗಾಗಿ ಒಂದು ದಿನದಲ್ಲಿ 3 ಪ್ರೋಟೀನ್ ಶೇಕ್‍ಗಳು ಮತ್ತು ಕಪ್ಪು ಬೀನ್ ಸೂಪ್‍ನ ಬೃಹತ್ ಬೌಲ್ ಸೇವಿಸಿದ್ದಾರೆ. ಉಸಿರಾಡಲು ನನಗೆ ತುಂಬಾ ಕಷ್ಟಕರವಾಗಿತ್ತು. ನನಗೆ ಆಗಾಗ ಎದೆನೋವು ಕೂಡ ಕಾಣಿಸುತ್ತಿತ್ತು. ನನಗೆ ಹೃದಯಾಘಾತದ ಅನುಭವಾಯಿತು. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸ್ನೇಹಿತರ ಬಳಿ ಕೇಳಿಕೊಂಡೆ ಎಂದಿದ್ದಾರೆ.

ಒಟ್ಟನಲ್ಲಿ ಸ್ಟೆಫನಿ ಎದೆಯಲ್ಲಿ ತೀವ್ರವಾದ ನೋವು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯಾಘಾತ ಅಥವಾ ಪಾಶ್ರ್ವವಾಯು ಇದೆ ಎಂದು ಆಕೆ ಭಾವಿಸಿದ್ದು, ಯಾವುದೇ ಕ್ಷಣದಲ್ಲಿ ನಾನು ಸಾಯಬಹುದು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಜೋರಾಗಿ ಹೂಸು ಬಿಟ್ಟು 43 ಸಾವಿರ ದಂಡ ತೆತ್ತ!

ಸದ್ಯ ವೈದ್ಯರು ಸ್ಟೆಫನಿ ರಕ್ತ ಪರೀಕ್ಷೆ ಮತ್ತು ಇಸಿಜಿ ನಡೆಸಿದ್ದಾರೆ. ಬೀನ್ಸ್, ಮೊಟ್ಟೆಗಳು ಮತ್ತು ಬಾಳೆಹಣ್ಣಿನ ಪ್ರೋಟೀನ್ ಶೇಕ್ ಸೇರಿದಂತೆ ಅತಿಯಾಗಿ ಆಹಾರ ಸೇವಿಸಿದ ಪರಿಣಾಮ ಆಕೆಗೆ ಗ್ಯಾಸ್ ರೋಗಲಕ್ಷಣ ಕಾಣಿಸಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *