3 ವರ್ಷದ ಮಗುವಿನ ಮೇಲೆ ಮಲತಂದೆಯ ಮೃಗೀಯ ವರ್ತನೆ – ಕಟ್ಟಿಗೆಯಿಂದ ಹೊಡೆದು ಹತ್ಯೆ

Public TV
1 Min Read

ಬೆಳಗಾವಿ: 3 ವರ್ಷದ ಮಗುವನ್ನು ಕಟ್ಟಿಗೆಯಿಂದ ಹೊಡೆದು, ಎಲ್ಲೆಂದರಲ್ಲಿ ಸುಟ್ಟು ಮಲತಂದೆ(Stepfather) ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ(Belagavi) ಬೈಲಹೊಂಗಲ ತಾಲೂಕಿನ ಹಾರೂಗೊಪ್ಪದಲ್ಲಿ(Harugoppa) ನಡೆದಿದೆ.

ಕಾರ್ತಿಕ್ ಮುಕೇಶ್ ಮಾಂಜಿ (3) ಹತ್ಯೆಯಾದ ಮಗು. ಮಲತಂದೆ ಮಹೇಶ್ವರ್ ಮಾಂಜಿ, ಆತನ ಸ್ನೇಹಿತರು ರಾಕೇಶ್ ಮಾಂಜಿ, ಮಹೇಶ್ ಮತ್ತು ಶ್ರೀನಾಥ್ ಮಾಂಜಿ ಕೊಲೆ ಆರೋಪಿಗಳು. ಇದನ್ನೂ ಓದಿ: ನಾಲ್ಕು ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳಿಗೆ ಜೂ.19ಕ್ಕೆ ಉಪಚುನಾವಣೆ

ಮಹಿಳೆಯು ಮಹೇಶ್ವರ್ ಮಾಂಜಿಯನ್ನು ಎರಡನೇ ಮದುವೆಯಾಗಿ ಬಿಹಾರದಿಂದ(Bihar) ಬೆಳಗಾವಿಗೆ ಕೆಲಸಕ್ಕೆಂದು ಬಂದಿದ್ದರು. ಮಹಿಳೆಯು ತನ್ನೊಂದಿಗೆ 3 ವರ್ಷದ ಮಗ ಕಾರ್ತಿಕ್‌ನನ್ನ ಕರೆದುಕೊಂಡು ಬಂದಿದ್ದರು. ಇವರೆಲ್ಲ ಬೈಲಹೊಂಗಲ ತಾಲೂಕಿನ ಹಾರೂಗೊಪ್ಪ ಬಳಿ ಕೆಲಸ ಮಾಡಿಕೊಂಡಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ – ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರು, ಧರೆಗುರುಳಿದ ಮರಗಳು

ಮಹಿಳೆ ಮತ್ತು ಮಹೇಶ್ವರ್ ಹತ್ತಿ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಬಂದಿದ್ದರು. ಮಗನನ್ನ ಯಾಕೆ ಕರೆದುಕೊಂಡು ಬಂದಿದ್ದೀಯಾ ಎಂದು ಕುಡಿದು ಬಂದು ಹೆಂಡತಿ ಜೊತೆ ಮಹೇಶ್ವರ್ ಮಾಂಜಿ ಜಗಳ ಮಾಡಿದ್ದ. ಈ ವೇಳೆ ಆತನ ಮೂರು ಸ್ನೇಹಿತರು ಸೇರಿಕೊಂಡು ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಮಗನನ್ನ ಬಿಟ್ಟು ಮಹಿಳೆ ಓಡಿಹೋಗಿದ್ದರು. ಇದನ್ನೂ ಓದಿ: ಕೋವಿಡ್ ಆತಂಕ – ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೊರೊನಾ ಪಾಸಿಟಿವ್

ಈ ವೇಳೆ ಅಲ್ಲೇ ಇದ್ದ ಮಗುವಿನ ಮೇಲೆ ಪಾಪಿಗಳು ರಾಕ್ಷಸಿಯ ವರ್ತನೆ ತೋರಿಸಿ, ತಲೆಗೆ ಕಟ್ಟಿಗೆಯಿಂದ ಹೊಡೆದು, ಅದೇ ಕಟ್ಟಿಗೆಗೆ ಬೆಂಕಿ ಹಚ್ಚಿ ಎಲ್ಲೆಂದರಲ್ಲಿ ಸುಟ್ಟು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮಹಿಳೆ ವಾಪಾಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕಾಲುಗಳಿಗೆ ಹಗ್ಗ ಕಟ್ಟಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ

ಮಹಿಳೆಯು ಮುರಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Share This Article