ಕೊಟ್ಟೂರು ಗುರುಬಸವೇಶ್ವರ ರಥದೊಳಗಿನ ಸ್ಟೇರಿಂಗ್ ಕಟ್ – ತಪ್ಪಿದ ಭಾರೀ ಅನಾಹುತ

Public TV
1 Min Read

– ರಥದಡಿ ಸಿಲುಕಿ ಅಪ್ಪಚ್ಚಿಯಾದ ಬೈಕ್, ಸ್ಕೂಟಿ

ಬಳ್ಳಾರಿ: ವಿಜಯನಗರ (Vijayanagar) ಜಿಲ್ಲೆಯ ಐತಿಹಾಸಿಕ ಕೊಟ್ಟೂರು ಗುರುಬಸವೇಶ್ವರ (Kotturu Guru Basaveshwara) ತೇರನ್ನು ಹೊರತೆಗೆಯುವಾಗ ಅವಘಡ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ಭಕ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದನ್ನೂ ಓದಿ: ‘ಪುಷ್ಪ 2’ ವಿವಾದದ ಬಳಿಕ ಎಚ್ಚೆತ್ತ ಅಲ್ಲು ಅರ್ಜುನ್

ಸೋಮವಾರ ಸಂಜೆ ಗುರುಬಸವೇಶ್ವರ ತೇರನ್ನು ಹೊರತೆಗೆಯುವಾಗ ಅದರೊಳಗಿನ ಸ್ಟೇರಿಂಗ್ ಕೈ ಕೊಟ್ಟಿತ್ತು. ಹೀಗಾಗಿ ರಥವನ್ನು ಜೋರಾಗಿ ಎಳೆಯಲಾಗಿದೆ. ಜೋರಾಗಿ ಎಳೆದ ಪರಿಣಾಮ ಬೃಹತ್ ಗಾತ್ರದ ತೇರು ರಭಸವಾಗಿ ಕೆಳಗೆ ಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಭಕ್ತರು ಪಕ್ಕಕ್ಕೆ ಸರಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ಅನಾಹುತ ತಪ್ಪಿದೆ.

ರಥದ ಗಾಲಿಗಳ ನಿರ್ವಹಣೆ ಮಾಡುವವರ ಸಮಯ ಪ್ರಜ್ಞೆಯಿಂದ ಜನರನ್ನ ಬದಿಗೆ ಸರಿಸಲು ಕಾರಣವಾಯಿತು. ಆದರೆ ರಸ್ತೆ ಬದಿಗೆ ನಿಂತಿದ್ದ ಸ್ಕೂಟಿ ಹಾಗೂ ಬೈಕ್‌ಗಳು ರಥದಡಿಗೆ ಸಿಲುಕಿ ಅಪ್ಪಚ್ಚಿಯಾಗಿವೆ.ಇದನ್ನೂ ಓದಿ: ಫೆ.9, 10 ಕ್ಕೆ ಕುಂಭಮೇಳದಲ್ಲಿ ಡಿ.ಕೆ.ಶಿವಕುಮಾರ್ ಭಾಗಿ

 

Share This Article