ಭಾರತದ ಮೊದಲ ಕೇಬಲ್ ರೈಲ್ವೇ ಸೇತುವೆ ಪೂರ್ಣ – ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ

Public TV
1 Min Read

ಶ್ರೀನಗರ: ಭಾರತದ ಮೊದಲ ಕೇಬಲ್ ನಿರ್ಮಿತ ರೈಲು ಸೇತುವೆಯ ವೀಡಿಯೋ ಒಂದನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಶನಿವಾರ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಭಾರತೀಯ ರೈಲ್ವೆಯ (Indian Railways) ಅತ್ಯಂತ ಸವಾಲಿನ ಉದಂಪುರ್, ಶ್ರೀನಗರ, ಹಾಗೂ ಬಾರಾಮುಲ್ಲಾ ರೈಲ್ ಲಿಂಕ್ (Udampur-Srinagar-Baramulla-Rail Link) ಯೋಜನೆಯಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಿಯಾಸಿ ಜಿಲ್ಲೆಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆಯು ಜಮ್ಮುವಿನಿಂದ ರಸ್ತೆಯ ಮೂಲಕ ಸುಮಾರು 80 ಕಿಲೋಮೀಟರ್ ದೂರದಲ್ಲಿದೆ. ಇದನ್ನೂ ಓದಿ: ಬಿಜೆಪಿ ಸಂಸದನ ವಿರುದ್ಧ ಪ್ರತಿಭಟನೆ – ಕುಸ್ತಿಪಟುಗಳ ಭೇಟಿಯಾದ ಪ್ರಿಯಾಂಕಾ ಗಾಂಧಿ

11 ತಿಂಗಳುಗಳಲ್ಲಿ ಅಂಜಿ ಖಾಡ್ (Anji Khad) ಸೇತುವೆ ನಿರ್ಮಾಣ ಮಾಡಲಾಗಿದೆ. ಒಟ್ಟು 96 ಕೇಬಲ್‍ಗಳನ್ನು ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ. ಕೇಬಲ್ ಎಳೆಗಳ ಒಟ್ಟು ಉದ್ದ 653 ಕಿಮೀ. ಆಗಿದೆ. ಅದು ಈಗ ಬಳಕೆಗೆ ಸಿದ್ಧವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ವಾಯು ಮಾರ್ಗದ ವಾಯುಮಾರ್ಗದ ನಿರ್ಬಂಧದ ಕಾರಣದಿಂದ ಕತ್ರಾ (Katra) ತುದಿಯಲ್ಲಿ ವಿಶೇಷ ಪಾಯದ ಮೂಲಕ ಸೇತುವೆಯನ್ನು ಪರ್ವತದ ಇಳಿಜಾರಿನಲ್ಲಿ ಸ್ಥಿರಗೊಳಿಸಲಾಗಿದೆ. 40 ಮೀಟರ್ ಆಳದ ಹೈಬ್ರಿಡ್ ಅಡಿಪಾಯದೊಂದಿಗೆ ಸೇತವೆಯನ್ನು ಭದ್ರಪಡಿಸಲಾಗಿದೆ. ಸೇತುವೆಯ ಒಟ್ಟು ಉದ್ದ 725.5 ಮೀಟರ್ ಇದೆ. ಈ ಸೇತುವೆಯು ಅಡಿಪಾಯದ ಮೇಲ್ಭಾಗದಿಂದ 193 ಮೀಟರ್ ಎತ್ತರದ ಏಕೈಕ ಮುಖ್ಯ ಪಿಲ್ಲರ್‍ನ್ನು ಹೊಂದಿದೆ. ಇದರ ಮೇಲೆ ಗಂಟೆಗೆ 100 ಕಿಮೀ ವೇಗದಲ್ಲಿ ರೈಲು ಸಂಚರಿಸಬಹುದಾಗಿದೆ. ಇದನ್ನೂ ಓದಿ: ಐವರು ಸೈನಿಕರ ದುರ್ಮರಣದ ಹಿಂದೆ ಪಾಕ್‌ ಕೈವಾಡ – ಡ್ರೋನ್‌ ಮೂಲಕ ಶಸ್ತ್ರಾಸ್ತ್ರ ಪೂರೈಕೆ

Share This Article