ರಾಜ್ಯಾದ್ಯಂತ ‘ಯುವ’ ಚಿತ್ರ ರಿಲೀಸ್: ಸ್ವಾಗತಿಸಿದ ಅಪ್ಪು ಫ್ಯಾನ್ಸ್

Public TV
1 Min Read

ಇಂದಿನಿಂದ ರಾಜ್ಯಾದ್ಯಂತ ಯುವ (Yuva) ಸಿನಿಮಾ ರಿಲೀಸ್ (Released) ಆಗಿದೆ. ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯುವ ಬಿಡುಗಡೆಯಾಗಿದ್ದು, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಚಿತ್ರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ ಯುವ ರಾಜ್ ಕುಮಾರ್ (Yuvaraj Kumar) ಜೊತೆಗೆ ಅಪ್ಪು (Appu) ಕಟೌಟ್ ಕೂಡ ಚಿತ್ರಮಂದಿರದ ಮುಂದೆ ನಿಲ್ಲಿಸಿದ್ದಾರೆ.

ಅದರಲ್ಲೂ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಅರಮನೆ ರೀತಿಯ ಸೆಟ್, ಡಾ.ರಾಜ್ ಕುಟುಂಬದ ಕಟೌಟ್, ಯುವ ಕಟೌಟ್, ಪುನೀತ್ ರಾಜ್ ಕುಮಾರ್ ಕಟೌಟ್ ಹೀಗೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರಿಸಿದ್ದಾರೆ. ಮುಖ್ಯ ಚಿತ್ರಮಂದಿರ ಮೆಜೆಸ್ಟಿಕ್ ನ ಸಂತೋಷ್ ಥಿಯೇಟರ್ ನಲ್ಲಿ ಕಳೆಗಟ್ಟಿದೆ ಸಂಭ್ರಮ.

 

ಪಟಾಕಿ ಸಿಡಿಸಿ, ಟಪ್ಪಾಂಗುಚ್ಚಿ ಹೆಜ್ಜೆಹಾಕಿ ದೊಡ್ಮನೆ ನಯಾ‌ ಕುಡಿ ಬರಮಾಡಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಬೆಳ್ಳಂಬೆಳಗ್ಗೆ ಅನೇಕ ಸ್ಕ್ರೀನ್‌ಗಳಲ್ಲಿ ತೆರೆಕಂಡಿರುವ ಯುವ ಸಿನಿಮಾವನ್ನು ನೋಡುತ್ತಾ, ಅಪ್ಪುವನ್ನು ಕಳೆದುಕೊಂಡು ಮಿಸ್ ಮಾಡಿಕೊಳ್ತಿರುವ ಅಭಿಮಾನಿಗಳಿಗೆ ಯುವರಾಜ್ ಕುಮಾರ್ ರನ್ನು ಬರಮಾಡಿಕೊಳ್ಳುವ  ಸಂಭ್ರಮ ಎಲ್ಲೆಲ್ಲೂ ಕಾಣುತ್ತಿದೆ.

Share This Article