ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೇಳಿಕೆ – ವಿವರ ಪಡೆಯಲು ರಾಗಾ ಮನೆಗೆ ಆಗಮಿಸಿದ ಪೊಲೀಸರು

Public TV
2 Min Read

ನವದೆಹಲಿ: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ (Sexual Assault) ಕುರಿತು ಭಾಷಣದಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಪೊಲೀಸರು (Police) ಭಾನುವಾರ ರಾಹುಲ್ ಗಾಂಧಿ ಮನೆಗೆ ಆಗಮಿಸಿದ್ದಾರೆ.

ರಾಹುಲ್ ಗಾಂಧಿ ಈ ಹಿಂದೆ ಭಾರತ್ ಜೋಡೋ ಯಾತ್ರೆ ವೇಳೆ ಭಾಷಣದಲ್ಲಿ ತಾವು ಹಲವು ಮಹಿಳೆಯರನ್ನು ಭೇಟಿಯಾಗಿದ್ದೇನೆ. ಈ ಸಂದರ್ಭದಲ್ಲಿ ನಾವು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಆ ಮಹಿಳೆಯರು ಪೊಲೀಸರನ್ನು ಸಂಪರ್ಕಿಸಲು ಮುಂದಾಗಿರಲಿಲ್ಲ ಎಂದಿದ್ದರು. ಇದೀಗ ಆ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಪೊಲೀಸರು ಆ ಮಹಿಳೆಯರ ವಿವರಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿರುವುದಾಗಿ ವಿಶೇಷ ಸಿಪಿ ಸಾಗರ್‌ ಪ್ರೀತ್ ಹೂಡಾ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕ ಅನಿಲ್ ಬೆನಕೆಗೆ ನಡು ರಸ್ತೆಯಲ್ಲೇ ಮತದಾರರಿಂದ ಕ್ಲಾಸ್

ಭಾರತ್ ಜೋಡೋ ಯಾತ್ರೆ ಮುಗಿದು ತಿಂಗಳು ಕಳೆದಿದ್ದರೂ ರಾಹುಲ್ ಗಾಂಧಿ ಈ ಕುರಿತು ಪೊಲೀಸರಿಗೆ ಹೆಚ್ಚಿನ ಮಾಹಿತಿ ನೀಡಲು ಮುಂದಾಗಿಲ್ಲ. ಈ ಹಿಂದೆ ಮಾರ್ಚ್ 15 ರಂದು ಪೊಲೀಸರು ರಾಹುಲ್ ಗಾಂಧಿ ಮನೆಗೆ ತೆರಳಿದ್ದರು. ಆದರೆ ರಾಗಾ ಪೊಲೀಸರನ್ನು ಭೇಟಿಯಾಗಲು ಬಂದಿರಲಿಲ್ಲ. ಹೀಗಾಗಿ ಅಧಿಕಾರಿಗಳು ರಾಹುಲ್ ನಿವಾಸದ ಬಳಿ 3 ಗಂಟೆ ಕಾದು ಬಳಿಕ ಅಲ್ಲಿಂದ ವಾಪಾಸಾಗಿದ್ದರು. ಇದನ್ನೂ ಓದಿ: ಡಿಸಿ ಕಚೇರಿ ಮೇಲೆ ಆಜಾನ್ ಕೂಗಿದ ಕೇಸ್ – ಎಚ್ಚರಿಕೆ ನೀಡಿ ಯುವಕನಿಗೆ ಜಾಮೀನು ನೀಡಿದ ಪೊಲೀಸರು

ಇದೀಗ ರಾಹುಲ್ ಗಾಂಧಿ ಪೊಲೀಸರಿಗೆ ಭಾರತ್ ಜೋಡೋ ಯಾತ್ರೆ ಸುದೀರ್ಘವಾಗಿತ್ತು. ನನಗೆ ಆ ಹೇಳಿಕೆ ಬಗ್ಗೆ ಏನೂ ನೆನಪಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಪೊಲೀಸರು ಅವರಿಗೆ ಮತ್ತೊಂದು ನೋಟಿಸ್ ನೀಡಿದ್ದು, ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದರೆ ಅವರು ಅದಕ್ಕೆ ಯಾವುದೇ ನಿಗದಿತ ಸಮಯವನ್ನು ನೀಡಲಿಲ್ಲ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *