ದಾವಣಗೆರೆ: ಚಿಗಟೀರಿ ಜಿಲ್ಲಾಸ್ಪತ್ರೆ ಬಳಿ ನಡೆದಿದ್ದ ಪೊಲೀಸರ (Police) ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ, ಯಾವ ಪಕ್ಷದವರು ದೊಡ್ಡವರಲ್ಲ. ಶಿಕ್ಷೆ ಆಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ (Nagalakshmi Choudhary) ಹೇಳಿದರು.
ದಾವಣಗೆರೆಯಲ್ಲಿ (Davanagere) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಪೊಲೀಸರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಎಂಬ ಪ್ರಶ್ನೆ ಬರೋದಿಲ್ಲ. ಚಿಕ್ಕವರು, ದೊಡ್ಡವರು ಎಂಬ ಪ್ರಶ್ನೆ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕೊಟ್ಟಿದ್ದಾರೆ. ತನಿಖೆ ನಡಿಯುತ್ತಿದೆ, ಎಲ್ಲರೂ ತಪ್ಪು ಮಾಡ್ತಾರೆ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಹಲ್ಲೆ ಮಾಡಿದ ಎಲ್ಲರನ್ನೂ ಅರೆಸ್ಟ್ ಮಾಡಲಾಗಿದೆ ಎಂದರು. ಇದನ್ನೂ ಓದಿ: ʻಕೈʼ ಮುಖಂಡನ ಮಕ್ಕಳಿಂದ ಪೊಲೀಸರ ಮೇಲೆ ಹಲ್ಲೆ ಕೇಸ್ - ಬಂಧನಕ್ಕೆ ಹೋರಾಡಿದ್ದ ಲೇಡಿ ಸಿಪಿಐ ವಿಡಿಯೋ ವೈರಲ್
ತನಿಖೆ ಆಗಿ ಶಿಕ್ಷೆಯು ಆಗುತ್ತದೆ ಎಂದರು. ಆಯೋಗದಿಂದ ವರದಿ ಕೇಳಿದ್ದು ತಡವಾಯಿತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಓಡಾಡುತ್ತಿರೋದು ಜನರಿಗೋಸ್ಕರ. ಇಂತಹ ಸಿಎಂ ಪಡೆದಿರೋ ನಾವೇ ಧನ್ಯ. ಎರಡು ವರ್ಷ ಸಿಎಂ ನನಗೆ ಒಂದು ಪ್ರಶ್ನೆಯನ್ನೂ ಮಾಡಿಲ್ಲ. ಸಿಎಂ ನಮಗೆ ಫ್ರೀ ಹ್ಯಾಂಡ್ ನೀಡಿದ್ದಾರೆ. ನಾನು ತಪ್ಪು ಮಾಡಿದ್ರು ಬಿಡಬಾರದು ಎಂದು ಹೇಳಿದ್ದಾರೆ. ಆಯೋಗದ ಅಧ್ಯಕ್ಷೆಯಾಗಿ ಪ್ರತಿಯೊಂದನ್ನು ಅಟೆಂಡ್ ಮಾಡಿ ಕೆಲಸ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಆಪ್ತನ ಮಗನಿಂದ ಪೊಲೀಸರ ಮೇಲೆ ಹಲ್ಲೆ – ಯಾರೇ ತಪ್ಪು ಮಾಡಿದ್ರೂ ಒದ್ದು ಒಳಗೆ ಹಾಕಿ: ಎಸ್.ಎಸ್ ಮಲ್ಲಿಕಾರ್ಜುನ್

