ರಾಜ್ಯಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ ಎಂದೇ ಫೇಮಸ್ ಆಗಿದ್ದ ಸಾಲುಮರದ ವೀರಾಚಾರಿ ಆತ್ಮಹತ್ಯೆಗೆ ಶರಣು

Public TV
2 Min Read

ದಾವಣಗೆರೆ: ಸಾಲುಮರದ ವೀರಾಚಾರಿ, ಪರಿಸರ ಪ್ರೇಮಿ (Environmental Lover) ಎಂದೇ ಪ್ರಸಿದ್ಧಿ ಪಡೆದ ಮಿಟ್ಲಕಟ್ಟೆ ವೀರಾಚಾರಿ (Mitlakatte Veerachari) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಜ್ಯ ಪ್ರಶಸ್ತಿ ವಿಜೇತ, ಪಬ್ಲಿಕ್ ಹೀರೋ ಆಗಿದ್ದ ಸಾಲುಮರದ ವೀರಾಚಾರಿ ಮಧ್ಯರಾತ್ರಿ ಮರಕ್ಕೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ. 3,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ದಾವಣಗೆರೆ ಜಿಲ್ಲೆಗೆ ವೀರಾಚಾರಿ ಚಿರಪರಿಚಿತರಾಗಿದ್ದರು. ಸಾಲುಮರಗಳನ್ನು ಬೆಳೆಸಿದ್ದ ಪರಿಸರ ಪ್ರೇಮಿ ಮಿಟ್ಲಕಟ್ಟೆ ಅವರಿಗೆ ಈ ಹಿಂದೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು (State Award Winner) ಕೂಡ ನೀಡಿತ್ತು. ಇದನ್ನೂ ಓದಿ: ದಕ್ಷ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಕೇಸ್ – ಸಹಜ ಸಾವು ಎಂದ ಸಿಬಿಐ ವರದಿ ತಿರಸ್ಕೃತ

ಮಿಟ್ಲಗಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ (Fair Price Shop) ಬಡವರಿಗೆ ಸೂಕ್ತವಾಗಿ ಅಕ್ಕಿ ವಿತರಣೆಯಾಗುತ್ತಿಲ್ಲ ಎಂದು ನ್ಯಾಯಬೆಲೆ ಅಕ್ರಮದ ವಿರುದ್ಧ ನಿರಂತರವಾಗಿ ಕಳೆದ ಒಂದು ವರ್ಷದಿಂದ ವೀರಾಚಾರಿ ಅವರು ಹೋರಾಟ ನಡೆಸುತ್ತಿದ್ದರು. ಆದರೆ ಸೋಮವಾರ ಇದೇ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ್ಯಾಯ ಬೆಲೆ ಅಂಗಡಿ ರದ್ದು ಮಾಡಬೇಕೋ? ಬೇಡವೇ? ಎಂಬ ಬಗ್ಗೆ ಚರ್ಚೆ ನಡೆದಿತ್ತು.

ಈ ಹಿಂದೆ ಮಿಟ್ಲಕಟ್ಟೆ ವೀರಾಚಾರಿ ಅವರು, ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ, ಜನರಲ್ಲಿ ನ್ಯಾಯ ಸಿಗದಿದ್ದರೆ, ದೇವರಲ್ಲಿ ನ್ಯಾಯ ಸಿಗದಿದ್ದರೆ ನೇಣಿಗೆ ಶರಣಾಗುವುದಾಗಿ ವಾಗ್ದಾನ ಮಾಡಿದ್ದರು. ಇದೀಗ ವಾಗ್ದಾನದಂತೆ ಸೋಮವಾರ ರಾತ್ರಿ 2 ಗಂಟೆಗೆ ನೇಣಿಗೆ ಶರಣಾಗಿದ್ದಾರೆ.ಇದನ್ನೂ ಓದಿ: ದಕ್ಷ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಕೇಸ್ – ಸಹಜ ಸಾವು ಎಂದ ಸಿಬಿಐ ವರದಿ ತಿರಸ್ಕೃತ

ಇದೀಗ ಮಿಟ್ಲಕಟ್ಟೆ ಗ್ರಾಮದ ಯಾರು ಕೂಡ ಬರದಂತೆ ರಸ್ತೆಗಳನ್ನು ಗ್ರಾಮಸ್ಥರು ಬಂದ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಆಹಾರ ಇಲಾಖೆ ಅಧಿಕಾರಿಗಳು ಬರುವರೆಗೂ ಶವವನ್ನು ಕುಣಿಕೆಯಿಂದ ಕೆಳಗಿಸದಂತೆ ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ : ಬ್ರಿಟನ್‌ನಲ್ಲಿ ಬುಗಿಲೆದ್ದ ಹಿಂದೂ, ಮುಸ್ಲಿಂ ಗಲಾಟೆ – ಹಿಂದೂ ದೇಗುಲಗಳ ಧ್ವಂಸಕ್ಕೆ ಭಾರತ ಖಂಡನೆ

ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೀಗ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಗ್ರಾಮಸ್ಥರನ್ನು ನ್ಯಾಯಬೆಲೆ ಅಂಗಡಿಯಿಂದ ಕಳುಹಿಸಿ, ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ಗೊಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *