ಲೋಕಸಭಾ ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ, ರಾಷ್ಟ್ರ ಸಮಿತಿಯವರು ತೀರ್ಮಾನ ಮಾಡ್ತಾರೆ: ಈಶ್ವರಪ್ಪ

Public TV
1 Min Read

ಹಾವೇರಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election) ಯಾರಿಗೆ ಟಿಕೆಟ್ ಕೊಡಬೇಕು, ಬಿಡಬೇಕು ಎಂಬುದನ್ನು ಹೈಕಮಾಂಡ್ ನೋಡುತ್ತದೆ. ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ, ರಾಷ್ಟ್ರ ಸಮಿತಿಯರು ತಿರ್ಮಾನ ಮಾಡುತ್ತಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ತಿಳಿಸಿದ್ದಾರೆ.

ಹಾವೇರಿಯ (Haveri) ಸಿಂದಗಿ ಮಠಕ್ಕೆ (Sindagi Math) ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ, ರುದ್ರಾಭಿಷೇಕ, ಲೋಕಕಲ್ಯಾಣಾರ್ಥವಾಗಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನಕ್ಕೆ ಆಶೀರ್ವಾದ ಮಾಡಿರುವ ಮಠ ಇದು. ನಾನು 25 ವರ್ಷಗಳಿಂದ ಈ ಮಠದೊಂದಿಗೆ ಸಂಪರ್ಕ ಹೊಂದಿದ್ದೇನೆ. ಇದು ಸಮಾಜ ಒಂದೂಗೂಡಿಸುವ ಮಠ. ಲೋಕ ಕಲ್ಯಾಣಾರ್ಥವಾಗಿ ಹೋಮ ಹವನ ಮಾಡಿಸಬೇಕೆಂಬ ಇಚ್ಛೆ ಇತ್ತು. ಹೀಗಾಗಿ ಪೂಜೆ ಮಾಡುತ್ತಿದ್ದೇವೆ ಎಂದು ಹೇಳಿದರು.

ನರೇಂದ್ರ ಮೋದಿ ಕರೆ ಬಗ್ಗೆ ಮಾತನಾಡಿದ ಅವರು, ದೇಶದ ಪ್ರಧಾನ ಮಂತ್ರಿಗಳು ಕರೆ ಮಾಡದ್ದು ನಿಜ. ಚುನಾವಣಾ ರಾಜಕೀಯವಾಗಿ ದೂರ ಇರೋದು ಬೇಡ ಎಂದಿದ್ದರು. ಇದು ಶಿಸ್ತಿನ ಪಕ್ಷ, ನಾವು ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದೇವೆ. ಇದನ್ನು ಮೆಚ್ಚಿ ಮೋದಿಯವರು ಕರೆ ಮಾಡಿದ್ದರು. ಅದು, ಇದು ಎಂದು ಯಾವ ಅವಕಾಶ ಕೊಡುತ್ತೇವೆ ಎಂದು ಬಂದಿಲ್ಲಾ, ನನಗೂ ಹೇಳಿಯೂ ಇಲ್ಲ ಎಂದರು. ಇದನ್ನೂ ಓದಿ: ಮಗನಿಗೆ ರಾಜಕೀಯ ನೆಲೆ ಕಲ್ಪಿಸಲು ಈಶ್ವರಪ್ಪ ಪ್ರಯತ್ನ!

ಹಾಲಿ ಸಂಸದರು ನಾನು ಸ್ಪರ್ಧೆ ಮಾಡಲ್ಲ ಎಂದಿದ್ದಾರೆ. ಹೀಗಾಗಿ ಇಲ್ಲಿ ನನ್ನ ಪುತ್ರ ಕಾಂತೇಶ ಸ್ಪರ್ಧೆ ಮಾಡುವುದು ಸೂಕ್ತ ಎನಿಸಿದೆ. ಕ್ಷೇತ್ರದಲ್ಲಿ ಅನೇಕ ನಾಯಕರು ಕೂಡಾ ಹೇಳಿದ್ದಾರೆ ಮನವಿ ಕೂಡಾ ಮಾಡಿದ್ದಾರೆ. ಇಲ್ಲಿ ಎಲ್ಲರ ಅಪೇಕ್ಷೆ ಇದೆ. ಜೊತೆಗೆ ಎಲ್ಲಾ ಮಠಾಧೀಶರ ಆಶೀರ್ವಾದ ಕೂಡಾ ಇದೆ ಎಂದಿದ್ದಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ವಿರುದ್ಧ 50% ಕಮಿಷನ್ ಆರೋಪ – ಪ್ರಿಯಾಂಕಾ ಗಾಂಧಿ ವಿರುದ್ಧ ಪ್ರಕರಣ ದಾಖಲು

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್