ಕಚೇರಿಯಿಂದ್ಲೇ ಕೆಲಸ ಮಾಡಿ, ಇಲ್ಲವೇ ಬಿಟ್ಟುಬಿಡಿ- ಟೆಸ್ಲಾ ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್

Public TV
1 Min Read

ವಾಷಿಂಗ್ಟನ್: ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಇದೀಗ ಟೆಸ್ಲಾ ಸಿಇಒ ವಾರ್ನಿಂಗ್ ನೀಡಿದ್ದಾರೆ. ಕೆಲಸ ಮಾಡಲು ಬಯಸುವವರು ಆಫೀಸ್‌ಗೆ ಬನ್ನಿ ಇಲ್ಲವೆಂದರೆ ಸಂಸ್ಥೆಯನ್ನೇ ಬಿಟ್ಟುಬಿಡಿ ಎಂದು ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ತನ್ನ ಉದ್ಯೋಗಿಗಳಿಗೆ ಖಾರವಾಗಿ ಆದೇಶ ನೀಡಿದ್ದಾರೆ.

ಕೊರೊನಾ ಕಾರಣಕ್ಕೆ ಕಳೆದ ೨ ವರ್ಷಗಳಿಂದ ಹೆಚ್ಚಿನ ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಮಾಡಿಕೊಟ್ಟಿತು. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಹಲವಾರು ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿವೆ. ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಘಟಕ ತೆರೆಯುತ್ತೇನೆ, ಆದ್ರೆ ನನ್ನ ಷರತ್ತು ಮೊದಲು ಪೂರ್ಣಗೊಳ್ಳಬೇಕು: ಮಸ್ಕ್

ಆದರೆ ಕೆಲವು ಕಂಪನಿಗಳ ಉದ್ಯೋಗಿಗಳು ಆರಾಮದಾಯಕವಾಗಿದ್ದ ವರ್ಕ್ ಫ್ರಂ ಹೋಮ್ ಬದಲು ಕಚೇರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅದೆಷ್ಟೋ ಉದ್ಯೋಗಿಗಳು ಶಾಶ್ವತವಾಗಿ ವರ್ಕ್ ಫ್ರಂ ಹೋಮ್ ನಿಯಮ ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1

ಇದ್ಯಾವ ಮಾತಿಗೂ ಬಗ್ಗದ ಮಸ್ಕ್, ಇದೀಗ ತನ್ನ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮನೆಯಿಂದಲೇ ಕೆಲಸ ಮಾಡುವುದು ಇನ್ನು ಮುಂದೆ ಸ್ವೀಕಾರ್ಹವಲ್ಲ. ಪ್ರತಿಯೊಬ್ಬ ಉದ್ಯೋಗಿಗಳೂ ವಾರಕ್ಕೆ ಕನಿಷ್ಠ ೪೦ ಗಂಟೆ ಕಚೇರಿಯಲ್ಲಿರಬೇಕು. ಮನೆಯಲ್ಲಿಯೇ ಕೆಲಸ ಮಾಡಲು ಬಯಸುವ ಉದ್ಯೋಗಿಗಳು ಬೇಕೆಂದರೆ ಸಂಸ್ಥೆಯನ್ನೇ ತೊರೆಯಬಹುದು. ಇಲ್ಲವೇ ಮನೆಯಲ್ಲಿ ಕೆಲಸ ಮಾಡುವಂತೆ ನಟಿಸಬೇಕು ಅಷ್ಟೇ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *